4:26 PM Wednesday7 - May 2025
ಬ್ರೇಕಿಂಗ್ ನ್ಯೂಸ್
Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ… ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಸಿ.ರೆಡ್ಡಿ ಅವರ ಜನ್ಮದಿನ: ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ… ಶಾಂತಿಗಾಗಿ ಪ್ರಯತ್ನಿಸಿದ್ದೇನೆ ಹೊರತು ಯಾರ ಪರವೂ ಇಲ್ಲ, ಯಾರ ವಿರುದ್ದವೂ ಇಲ್ಲ: ಸ್ಪೀಕರ್… ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ… Vijayapura | ಸಚಿವ ಜಮೀರ್‌ ಸುಮ್ಮನಿದ್ದರೆ ಸಾಕು, ಅದೇ ದೊಡ್ಡ ದೇಶ ಸೇವೆ:… ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ…

ಇತ್ತೀಚಿನ ಸುದ್ದಿ

ರೋಹನ್ ಕಾರ್ಪೊರೇಷನ್ ರಾಯಭಾರಿಯಾಗಿ ಸೂಪರ್‌ ಸ್ಟಾರ್ ಶಾರುಖ್ ಖಾನ್‌: ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಮರು ವ್ಯಾಖ್ಯಾನ

07/05/2025, 15:50

ಬೆಂಗಳೂರು(reporterkarnataka.com): ಕರ್ನಾಟಕದ ರಿಯಲ್ ಎಸ್ಟೇಟ್ ವಲಯಕ್ಕೆ ಅವಿಸ್ಮರಣೀಯ ಕ್ಷಣದಲ್ಲಿ, ಮಂಗಳೂರಿನ ಪ್ರಮುಖ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳಾದ ರೋಹನ್ ಕಾರ್ಪೊರೇಷನ್, ಕರ್ನಾಟಕಕ್ಕೆ ತನ್ನ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ದಂತಕಥೆ ಶಾರುಖ್ ಖಾನ್‌ರನ್ನು ಹೆಮ್ಮೆಯಿಂದ ಘೋಷಿಸುತ್ತಿದೆ.
ಕರ್ನಾಟಕದ ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರ ಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ವಿಶ್ವಾಸ, ದರ್ಜೆ ಹಾಗೂ ಅತ್ಯುತ್ತಮತೆಗೆ ಅನುರೂಪ ಪದವಾಗಿದೆ. ಕಳೆದ ಮೂರು ದಶಕಗಳಿಂದ, ಕಂಪನಿ ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ ಇತ್ಯಾದಿ ಪ್ರಮುಖ ಡೆವಲಪ್‌ಮೆಂಟ್‌ಗಳೊಂದಿಗೆ ಮಂಗಳೂರಿನ ಆಕಾಶದೆತ್ತರದ ಕಟ್ಟಡಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಗಳು ಆಧುನಿಕತೆ, ಸಮುದಾಯ ಚಾಲಿತ ನಗರ ಸ್ಥಳದ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ.
ಶಾರುಖ್‌ ಖಾನ್‌ರೊಂದಿಗಿನ ಈ ಅವಿಸ್ಮರಣೀಯ ಸಂಯೋಜನೆ ಅತ್ಯುತ್ತಮತೆ, ನಾವೀನ್ಯತೆ ಹಾಗೂ ಸಮುದಾಯ ನಿರ್ಮಾಣಕ್ಕೆ ಸಮರ್ಪಿತ ಮನೋಭಾವವನ್ನು ಪ್ರತಿಫಲಿಸುತ್ತದೆ. ಇದು ರೋಹನ್ ಕಾರ್ಪೊರೇಷನ್‌ನ ಪ್ರಯಾಣವನ್ನು ನಿರಂತರವಾಗಿ ರೂಪಿಸಿದ ಮೌಲ್ಯಗಳನ್ನು ಒಳಗೊಂಡಿದೆ. 25 ಪೂರ್ಣಗೊಳಿಸಲಾದ ಹೆಗ್ಗುರುತಿನ ಯೋಜನೆಗಳು ಹಾಗೂ ಸುಸ್ಥಿರತೆ, ಗ್ರಾಹಕ ಕೇಂದ್ರಿತ ಅಭಿವೃದ್ಧಿಯೆಡೆಗೆ ನಿರಂತರ ಬದ್ಧತೆಯೊಂದಿಗೆ, ಕಂಪನಿ ಕರ್ನಾಟಕದ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಗುರುತನ್ನು ಮೂಡಿಸುವುದನ್ನು ಮುಂದುವರೆಸಿದೆ.

ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ರೋಹನ್ ಮೊಂತೇರೊ ಹೀಗೆ ಹೇಳಿದ್ದಾರೆ: “ಶಾರುಖ್ ಖಾನ್‌ರನ್ನು ಹೊಂದಿರುವುದು ರೋಹನ್ ಕಾರ್ಪೊರೇಷನ್ ಪಾಲುದಾರಿಕೆಗಿಂತ ಹೆಚ್ಚಿನದ್ದೆಂದು ಪ್ರತಿನಿಧಿಸುತ್ತದೆ. ಇದು ಕನಸು ಹಾಗೂ ಬದ್ಧತೆಯ ಸಮ್ಮಿಲನವಾಗಿದೆ. ಶಾರುಖ್ ಖಾನ್ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿರುವಂತೆ, ರೋಹನ್ ಕಾರ್ಪೊರೇಷನ್ ಜೀವನವನ್ನು ಮಾರ್ಪಡಿಸುವ ಮೂಲಕ ಸ್ಫೂರ್ತಿ ನೀಡುವ ಆಕಾಂಕ್ಷೆ ಹೊಂದಿದೆ. ಅವರನ್ನು ನಮ್ಮೊಂದಿಗೆ ಹೊಂದುವ ಮೂಲಕ, ನಾವು ಕರ್ನಾಟಕ ಹಾಗೂ ಅದರಾಚೆಗೆ ನಗರ ಜೀವನವನ್ನು ಮರು ವ್ಯಾಖ್ಯಾನಿಸುವ ನಮ್ಮ ಭರವಸೆಗೆ ಬದ್ಧರಾಗಿದ್ದೇವೆ.”
ಶಾರುಖ್ ಖಾನ್ ಹೀಗೆ ಹೇಳಿದ್ದಾರೆ: “ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಫಲಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಸುಸ್ಥಿರ, ಸಮುದಾಯ ಚಾಲಿತ ಜಾಗಗಳು ನನ್ನಲ್ಲಿ ಆಳವಾಗಿ ಪ್ರತಿಧ್ವನಿಸುತ್ತಿದೆ. ಹೃದಯ ಹಾಗೂ ದೃಷ್ಟಿಕೋನದೊಂದಿಗೆ ನಾಳಿನ ನಗರಗಳನ್ನು ರೂಪಿಸುವ ಅದ್ಭುತ ಪ್ರಯಾಣದ ಭಾಗವಾಗಿರಲು ನಾನು ಎದುರು ನೋಡುತ್ತಿದ್ದೇನೆ.”
ಪ್ರಕೃತಿಯೊಂದಿಗೆ ನಗರ ಜೀವನವನ್ನು ಸಾಮರಸ್ಯಗೊಳಿಸುವ ದೃಢವಾದ ದೃಷ್ಟಿಕೋನದ ಬೇರನ್ನು ಹೊಂದಿರುವ ರೋಹನ್ ಕಾರ್ಪೊರೇಷನ್ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಜೀವನದ ಗುಣಮಟ್ಟವನ್ನು ವಿಸ್ತರಿಸುವ ಉತ್ಸಾಹಭರಿತ ಸಮುದಾಯಗಳನ್ನು ಪೋಷಿಸಲು ಶ್ರಮಿಸುತ್ತಿದೆ. ಅತ್ಯುತ್ತಮ ವಿನ್ಯಾಸ, ಅತ್ಯದ್ಭುತ ನಿರ್ಮಾಣ ಗುಣಮಟ್ಟ ಹಾಗೂ ಗ್ರಾಹಕ ಸಂತೋಷದ ಮೇಲೆ ನಿರಂತರ ಕೇಂದ್ರೀಕರಿಸುವಿಕೆಯ ಮೂಲಕ ಅಸಾಧಾರಾಣ ಮೌಲ್ಯವನ್ನು ವಿತರಿಸುವುದು ಅವರ ಧ್ಯೇಯವಾಗಿದೆ.
ಸಮಗ್ರತೆ, ಅತ್ಯುತ್ತಮತೆ, ನಾವೀನ್ಯತೆ, ಹಾಗೂ ಸುಸ್ಥಿರತೆಯ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್ ಖಾನ್‌ರೊಂದಿಗೆ ರೋಹನ್ ಕಾರ್ಪೊರೇಷನ್‌ರವರ ಪಾಲುದಾರಿಕೆ ಹೊಸ ಕ್ರಿಯಾತ್ಮಕ ಬೆಳವಣಿಗೆ, ವ್ಯಾಪಕ ತೊಡಗುವಿಕೆ ಮತ್ತು ದೃಢವಾದ ಬ್ರ್ಯಾಂಡ್ ಅಸ್ತಿತ್ವದ ನವಯುಗವನ್ನು ಸಂಕೇತಿಸುತ್ತಿದ್ದು, ಇದು ಕರ್ನಾಟಕದಾದ್ಯಂತ ಕನಸುಗಾರರ ಹೊಸ ತಲೆಮಾರು ಮತ್ತು ಮನೆ ಮಾಲೀಕರಿಗೆ ಸ್ಫೂರ್ತಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು