7:31 AM Friday3 - October 2025
ಬ್ರೇಕಿಂಗ್ ನ್ಯೂಸ್
ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ…

ಇತ್ತೀಚಿನ ಸುದ್ದಿ

ರೋಹನ್ ಕಾರ್ಪೋರೇಶನ್ ವತಿಯಿಂದ ಉದ್ಯೋಗಿಗಳು ಮತ್ತು ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ

06/08/2025, 23:29

ಮಂಗಳೂರು(reporterkarnataka.com): ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕರ ಉತ್ತಮ ಆರೋಗ್ಯದ ಕಡೆಗೆ ಕಾಳಜಿ ತೋರುವ ಉದ್ದೇಶದಿಂದ ರೋಹನ್ ಕಾರ್ಪೋರೇಶನ್ ಸಂಸ್ಥೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.


ಈ ಶಿಬಿರ ಮಂಗಳೂರು ಬಿಜೈ ಮುಖ್ಯ ರಸ್ತೆಯಲ್ಲಿರುವ ರೋಹನ್ ಸಿಟಿ ಆವರಣದಲ್ಲಿ ನಡೆಯಿತು. ಶಿಬಿರವನ್ನು ಹಿಂದ್ ಕುಷ್ಟ್ ನಿವಾರಣ್ ಸಂಘ (ರಿ) ಮತ್ತು ಲಯನ್ಸ್ ಕ್ಲಬ್ ಮಂಗಳಾದೇವಿ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದಲೇ ಶಿಬಿರದಲ್ಲಿ ನೂರಾರು ಉದ್ಯೋಗಿಗಳು ಮತ್ತು ಕಾರ್ಮಿಕರು ಭಾಗವಹಿಸಿದ್ದು, ತಜ್ಞ ವೈದ್ಯರ ತಂಡದಿಂದ ರಕ್ತದೊತ್ತಡ, ಡಯಾಬಿಟಿಸ್, ದಂತಚಿಕಿತ್ಸೆ, ಇ.ಸಿ. ಜಿ ,ಸಾಮಾನ್ಯ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಿತು.
ರೋಹನ್ ಕಾರ್ಪೋರೇಶನ್ ನ ಡೈರೆಕ್ಟರ್ ಡಿಯೋನ್ ಮೊಂತೇರೊರವರು “ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಕಾರ್ಮಿಕರ ಕೊಡುಗೆ ಅಮೂಲ್ಯವಾಗಿದೆ. ಅವರ ಆರೋಗ್ಯದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತಿದ್ದೇವೆ. ಈ ಶಿಬಿರವು ಕಾಳಜಿಯ ಪ್ರತಿಬಿಂಬವಾಗಿದೆ” ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಡಿಎಪಿಸಿಯು ಜಿಲ್ಲಾ ಮೇಲ್ವಿಚಾರಕರಾದ ಮಹೇಶ್ ರವರು “ಇದೊಂದು ಸಾಮಾನ್ಯ ಆರೋಗ್ಯ ತಪಾಸಣೆಯ ಶಿಬಿರವಲ್ಲ, ಇದು ಸಂಸ್ಥೆಯ ಸಿಬ್ಬಂದಿಗಳ ಮತ್ತು ಕಾರ್ಮಿಕರ ಆರೋಗ್ಯಕ್ಕೆ ನೆರವಾಗುವಂತೆ ರೂಪಿಸಲಾದ ಸಾರ್ಥಕ ಹೆಜ್ಜೆಯಾಗಿದೆ. ಭವಿಷ್ಯದಲ್ಲಿಯೂ ಇಂತಹ ಸಾಮಾಜಿಕ ಹಾಗೂ ಆರೋಗ್ಯಪೂರ್ಣ ಯೋಜನೆಗಳನ್ನು ಮುಂದುವರಿಯಲಿ” ಎಂದು ಆಶಿಸಿದರು.
ಶಿಬಿರದಲ್ಲಿ ಉಪಸ್ಥಿತರಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಆರೋಗ್ಯ ಅಧಿಕಾರಿ ಸಲೀಂ ಪಾಷಾ, “ಇಂತಹ ಶಿಬಿರಗಳು ನಮ್ಮ ಶಾರೀರಿಕ ಆರೋಗ್ಯದ ತಪಾಸಣೆಯಷ್ಟೇ ಅಲ್ಲ, ಸಂಸ್ಥೆ ಉದ್ಯೋಗಿಗಳು ಮತ್ತು ಕಾರ್ಮಿಕರಿಗಾಗಿ ಬಗ್ಗೆ ಹೊಂದಿರುವ ನಿಜವಾದ ಕಾಳಜಿಯನ್ನೂ ತೋರಿಸುತ್ತವೆ. ರೋಹನ್ ಕಾರ್ಪೋರೇಶನ್ ಮಾಡುತ್ತಿರುವ ಈ ಪ್ರಯತ್ನ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು.”
ಈ ಕಾರ್ಯಕ್ರಮದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಸುಮನಾ , ಲಯನ್ಸ್ ಕ್ಲಬ್ ಮಂಗಳದೇವಿ ಮಂಗಳೂರು ಅಧ್ಯಕ್ಷರಾದ ಶ ಸಂತೋಷ ಪೂಂಜ, ಎ.ಜೆ. ಡೆಂಟಲ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೇಷ್ಠ ಶೆಟ್ಟಿ , ಕೆಎಂಸಿ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಶ್ರಿಮತಿ ಶರಾವತಿ , ಯೋಜನಾ ವ್ಯವಸ್ಥಾಪಕರಾದ ನರೇಶ್ ಕುಮಾರ್, ಹಿಂದ್ ಕುಷ್ಟ ನಿವಾರಣ ಸಂಘ ಯೋಜನಾ ವ್ಯವಸ್ಥಾಪಕರಾದ ಕಾಂತಾ ನಾಯಕ, ಹೆಲ್ತ್ ಸೇಫ್ಟಿ ಎನ್ವಿರಾನ್‌ಮೆಂಟ್ ಮ್ಯಾನೇಜರ್‌ ಆಗಿರುವ ಪುನೀತ್ ಕುಮಾರ್ ರವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು