1:38 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ರೋಗಿಗಳಲ್ಲಿ ದೇವರ ಕಾಣುವ ಡಾ. ಮಹೇಶ್ ಹಂಪನ್ನವರ್ !: ಅಪರೂಪದಲ್ಲಿ ಅಪರೂಪದ ಈ ವೈದ್ಯರು!!

27/05/2022, 20:14

ಮಂಗಳೂರು(reporterkarnataka.com): ಒಂದೆಡೆ ನಾವು ವೈದ್ಯರನ್ನು ನಾರಾಯಣ(ದೇವರು)ನಿಗೆ ಹೋಲಿಸಿದರೆ, ಇನ್ನೊಂದೆಡೆ ಯಮನ ಸಹೋದರನಿಗೆ ಹೋಲಿಸಿ
ಕುಚೋದ್ಯ ಮಾಡುತ್ತೇವೆ. ಹಿಂದಿನ ಕಾಲದಲ್ಲಿ ದೇವರಂತಹ ವ್ಯದ್ಯರಿದ್ದರೆ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಎರಡನೇ ವರ್ಗಕ್ಕೆ ಸೇರಿದ ವೈದ್ಯರುಗಳೇ ಹೆಚ್ಚು. ಇಂತಹ ವಿಷಮ ಸ್ಥಿತಿಯಲ್ಲೂ ಅಪರೂಪದಲ್ಲಿ ಅಪರೂಪ ಎನಿಸಿಕೊಳ್ಳುವ ಸರಳ ಸಜ್ಜನಿಕೆಯ ಸಾಕಾರಮೂರ್ತಿ ತರಹದ ವೈದ್ಯರೊಬ್ಬರಿದ್ದಾರೆ. ಅವರೇ ಡಾ. ಮಹೇಶ್ ಹಂಪನ್ನವರ್.

ಡಾ. ಹಂಪನ್ನವರ್ ಮೂಲತಃ ಬೆಳಗಾವಿ ಜಿಲ್ಲೆಯವರು. ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿಯಾದರೂ ಅವರ ಕಾರ್ಯಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆ. ಜೈನ ಕಾಶಿ ಎಂದು ಖ್ಯಾತಿ ಪಡೆದ, ಸಾವಿರ ಕಂಬದ ಬಸದಿಯ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ಸೆಳೆದ ಮೂಡುಬಿದರೆಯೇ ಅವರ ಕರ್ಮಭೂಮಿ. ಪ್ರಸ್ತುತ ಮೂಡಬಿದರೆಯ ಮೌಂಟ್ ರೋಸರಿ ಆಸ್ಪತ್ರೆಯಲ್ಲಿ ಮಧುಮೇಹ ಮತ್ತು ಹೃದ್ರೋಗ ತಜ್ಞರಾಗಿ, ಜೊತೆಗೆ ಸಾಮಾನ್ಯ ಚಿಕಿತ್ಸಕ ನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರೊಬ್ಬರು ಅಪರೂಪದ ವೈದ್ಯರು. ತನ್ನಲ್ಲಿ ಬರುವ ರೋಗಿಗಳನ್ನು ತನ್ನದೇ ಮನೆಯವರ ತರಹ ಪ್ರೀತಿ- ವಿಶ್ವಾಸದಿಂದ ಮಾತನಾಡಿಸಿ ಆರೈಕೆ ಮಾಡುತ್ತಾರೆ. ರೋಗಿಯಲ್ಲಿ ಕಾಯಿಲೆಯ ವಿವರ ಪಡೆದು ರೋಗಿಯನ್ನು ಸಮಾಧಾನಪಡಿಸುವ ಮೂಲಕ ಶುಶ್ರೂಷೆ ನೀಡುತ್ತಾರೆ. ಆ ಮೂಲಕ ಶೇ.100ರಷ್ಟು ರೋಗ ಗುಣಪಡಿಸುವಲ್ಲಿ ಯಶಸ್ವಿಯಾಗುತ್ತಾರೆ.

ಡಾ. ಹಂಪನ್ನವರ್ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾರೆ. ಧಾರಾವಾಡದ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಮಾಡಿ, ನಂತರ ಡಾ. ನಾಯ್ಡು ಅವರ ಮಾರ್ಗದರ್ಶನದಲ್ಲಿ  “ಮಾಸ್ಟರ್ ಡಿಗ್ರಿ ಇನ್ ಇಂಟರ್ನಲ್ ಮೆಡಿಸನ್” ಗಳಿಸಿದ್ದಾರೆ. ಇದೀಗ ಅವರು ದಕ್ಷಿಣ ಕನ್ನಡದ ಜನಮೆಚ್ಚಿದ ವೈದ್ಯ ಎನಿಸಿಕೊಂಡಿದ್ದಾರೆ.

ಡಾ. ಹಂಪನ್ನವರ್ ಬಗ್ಗೆ ಮೌಂಟ್ ರೋಸರಿ ಆಸ್ಪತ್ರೆಯ ಮುಖ್ಯಸ್ಥೆ ಸಿಸ್ಟರ್ ಡಯಾನ   ಮಾತನಾಡಿ, ರೋಗಿಗಳ ಬಗ್ಗೆ ಅನುಕಂಪ, ರೋಗಗಳ ಬಗ್ಗೆ ನಿಖರತೆ, ಸರಳ ಸಜ್ಜನ ನಡತೆ, ಸೂಕ್ತ ಚಿಕಿತ್ಸೆ, ಪ್ರೀತಿ-ವಿಶ್ವಾಸ, ಸಹ ವೈದ್ಯರೊಡನೆ ಸರಳತೆ ಇವುಗಳು  ಡಾ. ಹಂಪನ್ನವರ್  ಅವರ ವಿಶೇಷತೆ ಎಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು