ಇತ್ತೀಚಿನ ಸುದ್ದಿ
ರಿಷಿಕಾ ಕುಂದೇಶ್ವರಗೆ ಕುರಿಯ ವಿಠಲ ಶಾಸ್ತ್ರಿಪ್ರತಿಭಾ ಪುರಸ್ಕಾರ: ಇಂದು ಪ್ರದಾನ
30/09/2024, 09:10
ಕಾರ್ಕಳ(reporterkarnataka.com): ಯಕ್ಷಗಾನ ಬಾಲ ಕಲಾವಿದೆ, ಜೀ ಕನ್ನಡ ಡ್ರಾಮಾ ಜೂನಿಯರ್ ವಿಜೇತೆ ರಿಷಿಕಾ ಕುಂದೇಶ್ವರ ಅವರು ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ಸೆ.30ರಂದು ಸಂಜೆ 4.45ಕ್ಕೆ ನಡೆಯುವ ಯಶೋ ಯಕ್ಷನಮನ, ಗಾನ, ನೃತ್ಯ ಚಿತ್ರ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ.