3:17 PM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ಸಂಪಾದಕ ಅಶೋಕ್ ಕಲ್ಲಡ್ಕಗೆ  ಪಿತೃ ವಿಯೋಗ: ಹಲವು ಗಣ್ಯರ ಸಂತಾಪ

25/12/2021, 22:35

ಮಂಗಳೂರು(reporterkarnataka.com): ರಿಪೋರ್ಟರ್ ಕರ್ನಾಟಕ ಸಂಪಾದಕ ಅಶೋಕ್ ಕಲ್ಲಡ್ಕ ಅವರ ತಂದೆ ಕೃಷ್ಣ ಕಲ್ಲಡ್ಕ ಅವರು ಗುರುವಾರ ನಿಧನರಾದರು.

ಕಲ್ಲಡ್ಕದಲ್ಲಿ ಕೃಷ್ಣ ಟೈಲರ್ ಎಂದೇ ಪ್ರಸಿದ್ಧರಾಗಿದ್ದ ಅವರು ಕಲ್ಲಡ್ಕ ಸಮೀಪದ ನಾಗತಿಮಾರ್ ನಲ್ಲಿ 1928ರಲ್ಲಿ ಜನಿಸಿದ್ದರು. ಬಾಲ್ಯದ ಜೀವನವನ್ನು ಮಂಗಳೂರಿನಲ್ಲಿ ಕಳೆದ ಅವರು ಕಲ್ಲಡ್ಕದಲ್ಲಿ ಟೈಲರಿಂಗ್ ವೃತ್ತಿ ಆರಂಭಿಸಿದ್ದರು. ಕಲ್ಲಡ್ಕದ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸ್ನೇಹಿತರ ಬಳಗವನ್ನೇ ಸಂಪಾದಿಸಿದ್ದರು.

ಅವರು ಪತ್ನಿ ರಾಜೀವಿ, ಪುತ್ರರಾದ ಚೆನ್ನೈನ ನಂಜಿಲ್ ಕಂಪನಿಯ ಜನರಲ್ ಮೆನೇಜರ್ ಉದಯ್ ಕಲ್ಲಡ್ಕ, ಕುಳಾಯಿಯ ರಶ್ಮಿ ಸ್ಟಿಚ್ ವೇರ್ ಮಾಲೀಕ ವಿದ್ಯಾಧರ ಕಲ್ಲಡ್ಕ, ಅಶೋಕ್ ಕಲ್ಲಡ್ಕ ಮತ್ತು ಪುತ್ರಿಯರಾದ ವಿಜಯಲಕ್ಷ್ಮೀ ಹಾಗೂ ಭಾರತಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಂತಾಪ: ಕೃಷ್ಣ ಕಲ್ಲಡ್ಕ ಅವರ ನಿಧನಕ್ಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು