3:00 AM Sunday5 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಡಿಸೆಂಬರ್ ತಿಂಗಳ ಟಾಪರ್ ಆಗಿ ಆತ್ಮೀ ಮತ್ತು ಶಾನ್ವಿ ಎಸ್. ಓಂಕಾರಿ ಆಯ್ಕೆ

16/01/2025, 19:15

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಆತ್ಮೀ ಮತ್ತು ಶಾನ್ವಿ ಎಸ್. ಓಂಕಾರಿ
ಆಯ್ಕೆಯಾಗಿದ್ದಾರೆ.


ಪ್ರಕಾಶ್ ಹಾಗೂ ದೃತಿ ದಂಪತಿಯ 2ನೇ ಪುತ್ರಿ ಆತ್ಮೀ, ಪ್ರಸ್ತುತ ಕಾರ್ಕಳ ತಾಲೂಕಿನ ಹೊಸ್ಮರು ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್ ಸ್ಕೂಲ್ ನಲ್ಲಿ ಯುಕೆಜಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ, ಒಂದು ವರುಷದ ಮಗು ಇರುವಾಗ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಪಡೆದಿದ್ದಾಳೆ, ಡ್ರಾಯಿಂಗ್ ಇವಳ ವಿಶೇಷ ಆಸಕ್ತಿ, ವಾಯ್ಸ್ ಆಫ್ ಆರಾಧನಾ ತಂಡದ ದಿನನಿತ್ಯದ ಚಟುವಟಿಕೆಯಲ್ಲಿ ತನ್ನದೇ ಶೈಲಿಯಲ್ಲಿ ಗಾದೆಮಾತುಗಳನ್ನು ಹೇಳುತ್ತಾ , ಒಗ್ಗಟ್ಟುಗಳನ್ನು ಹೇಳುತ್ತಾ ಭಾಗವಹಿಸುತ್ತಾಳೆ, ಶಾಲೆಯಲ್ಲಿ ಅಭಿನಯ ಗೀತೆಯಲ್ಲಿ ಹಲವು ಬಾರಿ ಬಹುಮಾನ ಗಳಿಸಿದ್ದಾಳೆ . ಡ್ಯಾನ್ಸ್, ಸ್ಪೋರ್ಟ್ಸ್ ಎಲ್ಲದರಲ್ಲೂ ಮುಂದೆ ಇದ್ದಾಳೆ. ಓದಿನಲ್ಲೂ ಜಾಣೆ. ಈಕೆ ವಾಯ್ಸ್ ಆಪ್ ಆರಾಧನ ತಂಡದ ಸಕ್ರೀಯ ಸದಸ್ಯೆ.
ಬೆಂಗಳೂರು ನಿವಾಸಿಯಾಗಿರುವ ಶಿವರಾಜ್ ಓಂಕಾರಿ ಮತ್ತು ನಿರ್ಮಲಾ ಡಿ. ಶಿವರಾಜ್ ದಂಪತಿಯ ಪುತ್ರಿ ಶಾನ್ವಿ ಎಸ್. ಓಂಕಾರಿ. ಈಕೆ ಬೆಂಗಳೂರಿನ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಸೌಮ್ಯ ಎಸ್. ಶರ್ಮ ಅವರಲ್ಲಿ ಜ್ಯೂನಿಯರ್ ಡಿಪ್ಲೋಮಾ ವಿಭಾಗದಲ್ಲಿ ಕಲಿಯುತ್ತಿರುವ ಈಕೆ , ಶಾಸ್ತ್ರೀಯ ಸಂಗೀತವನ್ನು ನಾಗಮಣಿ ಶರ್ಮರಲ್ಲಿ, ಬಾಸ್ಕೆಟ್ ಬಾಲ್ ತರಬೇತಿಯನ್ನು ಡೇನಿಯಲ್ ಅವರಿಂದ ಪಡೆಯುತ್ತಿದ್ದಾಳೆ. ಬರವಣಿಗೆ, ಸ್ಪೆಲ್ ಬಿ, ವಿಜ್ಞಾನ, ಗಣಿತ, ಇಂಗ್ಲೀಷ್ ಪರೀಕ್ಷೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಹೀಗೆ ಬಹುಮುಖ ಪ್ರತಿಭೆಯಾಗಿರುವ ಈಕೆ ಬೆಂಗಳೂರು, ತುಮಕೂರು, ಮೈಸೂರು ಮತ್ತು ತಮಿಳುನಾಡು ರಾಜ್ಯದ ತಂಜಾವೂರಿನ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ಮೂಲಕ ತನ್ನ ಪ್ರತಿಭೆಯನ್ನು ಪರಿಚಯಿಸಿದ್ದಾಳೆ. ಇತ್ತೀಚಿಗೆ ಮೂಲ್ಕಿಯ ಯುಗ ಪುರುಷ ಸಭಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ತನ್ನ ನೃತ್ಯ ಪ್ರತಿಭೆ ಪ್ರದರ್ಶನ ನೀಡಿರುತ್ತಾರೆ. ಹೀಗೆ ಸಂಗೀತ, ಬರವಣಿಗೆ, ಶಾಸ್ತ್ರೀಯ ನೃತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಈಕೆಯನ್ನು ಹಲವಾರು ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿ, ಪ್ರಶಸ್ತಿ ಪದಕಗಳನ್ನೂ ನೀಡಿವೆ. ಕೆಲವು ಸಭಾ ವೇದಿಕೆಗಳಲ್ಲಿ ಅತಿಥಿಯಾಗಿಯೂ ಭಾಗವಹಿಸಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು