ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಡಿಸೆಂಬರ್ ತಿಂಗಳ ಟಾಪರ್ ಆಗಿ ಯಶ್ವಿತ್ ವೇಣೂರು ಹಾಗೂ ಶ್ರಾವ್ಯ ಪೂಜಾರಿ ಎಕ್ಕಾರು ಆಯ್ಕೆ
12/01/2026, 13:12
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಯಶ್ವಿತ್ ಎಚ್. ವೇಣೂರು ಹಾಗೂ ಶ್ರಾವ್ಯ ಪೂಜಾರಿ ಎಕ್ಕಾರು ಆಯ್ಕೆಯಾಗಿದ್ದಾರೆ.
ವೇಣೂರಿನ ಗೋಳಿಯಂಗಡಿ ನಿವಾಸಿ ಹರೀಶ್ ಪಿ. ಹಾಗೂ ವನಿತಾ ಕೆ. ಕುಂಭಶ್ರೀ ಅವರ ಪುತ್ರ ಯಶ್ವಿತ್ ಎಚ್. ವೇಣೂರು. ಈತ ವೇಣೂರಿನ ನೀಟ್ಟಡೇ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕುಣಿತ ಭಜನೆ ಮತ್ತು ಬಾಲ ಗೋಕುಲವನ್ನು ಕುಕ್ಕೆಡಿಯ ಮಂಜುಶ್ರೀ ಭಜನಾ ಮಂಡಳಿಯ ಜನಾರ್ದನ ಉಜಿರೆ ಮತ್ತು ರೋಹಿಣಿ ಅವರಿಂದ, ಯೋಗ ತರಬೇತಿಯನ್ನು ಸತೀಶ್ ಆಚಾರ್ಯ ಹಾಗೂ ನೃತ್ಯ ತರಬೇತಿಯನ್ನು ಶೈಲೇಶ್ ಅವರಿಂದ ಅಭ್ಯಾಸ ಮಾಡುತ್ತಿದ್ದಾನೆ. ಪ್ರತಿಭಾ ಕಾರಂಜಿ ಮತ್ತು ಇತರ ಕಡೆಗಳಲ್ಲಿ ಅನೇಕ ಬಹುಮಾನ ಹಾಗೂ ಪ್ರಶಸ್ತಿಗಳನ್ನು ಗಳಿಸಿದ್ದಾನೆ. ವಾಯ್ಸ್ ಆಫ್ ಆರಾಧನಾ ತಂಡದ ಮುಖ್ಯಸ್ಥರಾದ ಪದ್ಮಶ್ರೀ ಅವರ ನೇತೃತ್ವದಲ್ಲಿ 2024 ಯುಗಪುರುಷ ಕಿನ್ನಿಗೋಳಿಯಲ್ಲಿ ಹಾಗೂ 2025ರಲ್ಲಿ ಕಟೀಲಿನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಾನೆ. ಅಭಿಮತ ವಾಹಿನಿಯಲ್ಲಿ ನಡೆದ ಪ್ರತಿಭಾ ಲೋಕದಲ್ಲಿಯೂ ಕೂಡ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಉದಯವಾಣಿ, ಸುದ್ದಿ ಬಿಡುಗಡೆ, ತುಳುನಾಡ ವಾರ್ತೆ, ಸುದ್ದಿ ಉದಯ ಮುಂತಾದ ಪತ್ರಿಕೆಗಳಲ್ಲಿ ಚಿತ್ರಕಲೆ, ಕವನ, ಕಥೆ ಭಾಗವಹಿಸಿದ್ದಾನೆ. ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ್ದಾನೆ. ವಾಯ್ಸ್ ಆಫ್ ಆರಾಧನಾದ ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾನೆ.




ಶ್ರಾವ್ಯ ಪೂಜಾರಿ ಎಕ್ಕಾರು ಈಕೆ ವಿನೋದ್ ಪೂಜಾರಿ ಮತ್ತು ದೀಪಿಕಾ ಪೂಜಾರಿ ಅವರ ಎರಡನೇ ಪುತ್ರಿ. ಇವಳು ಬಡಗ ಎಕ್ಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂಗೀತ ಮತ್ತು ನೃತ್ಯ ಈಕೆಯ ಹವ್ಯಾಸವಾಗಿದೆ. ಕುಣಿತ ಭಜನೆಯನ್ನು ಭಾರತಿ ಹಾಗೂ ಯಕ್ಷಗಾನವನ್ನು ಮೋಹನ್ ಅಮ್ಮುಂಜೆ ಅವರಲ್ಲಿ ಕಲಿಯುತ್ತಿದ್ದಾಳೆ. ಹಲವಾರು ವೇದಿಕೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ. ವಾಯ್ಸ್ ಆಫ್ ಆರಾಧನದ ಮುಖ್ಯಸ್ಥರಾದ ಪದ್ಮಶ್ರೀ ಅವರ ನೇತೃತ್ವದಲ್ಲಿ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಕಟಿಲಿನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಹಾಗೂ ಅಭಿಮತ ವಾಹಿನಿಯ ಪ್ರತಿಭಾ ಲೋಕದಲ್ಲಿ ಭಾಗವಹಿಸಿದ್ದಾಳೆ. ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಪಡೆದಿದ್ದಾಳೆ. ಉಡುಪಿಯ ರಾಜಾಂಗಣ ವೇದಿಕೆಯಲ್ಲಿ ನಡೆದ ರಾಷ್ಟ್ರೀಯ ಕಲಾ ಪ್ರಜೋತ್ಸವ 2025 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ “ಕರ್ನಾಟಕ ಬಾಲ್ಯ ನಾಟ್ಯ ಮಯೂರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈಕೆ ವಾಯ್ಸ್ ಆಫ್ ಆರಾಧನದ ಬಾಲ ಪ್ರತಿಭೆಯಾಗಿ ಮಿಂಚುತ್ತಿದ್ದಾಳೆ.












