1:21 PM Sunday21 - September 2025
ಬ್ರೇಕಿಂಗ್ ನ್ಯೂಸ್
ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಆಗಸ್ಟ್ ತಿಂಗಳ ಟಾಪರ್ ಆಗಿ ರಿದ್ವಿನ್ ಡಿ. ಆರ್ವ ಹಾಗೂ ಆತ್ಮಿ ಪ್ರಕಾಶ್ ಅಜೆಕಾರು ಆಯ್ಕೆ

21/09/2025, 13:21

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ
ಆಗಸ್ಟ್ ತಿಂಗಳ ಟಾಪರ್ ಆಗಿ ರಿದ್ವಿನ್ ಡಿ. ಆರ್ವ ಹಾಗೂ ಆತ್ಮಿ ಪ್ರಕಾಶ್ ಅಜೆಕಾರು ಆಯ್ಕೆಯಾಗಿದ್ದಾರೆ.
ರಿದ್ವಿನ್ ಡಿ. ಆರ್ವ 2020 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಜನಿಸಿದ್ದಾನೆ. ತಂದೆ ದಿವಾಕರ ಎಂ. ಎಂ. ಫಾರೆಸ್ಟರ್ ಆಗಿ ವೇಣೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಸ್ಮಿತಾ ಎಂ. ಎಂ. ಗಂಜಿಮಠದ ರಾಜ್ ಅಕಾಡೆಮಿ ಸಿಬಿಎಸ್ ಸಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರ ಕುಟುಂಬವು ಗಂಜಿಮಠದಲ್ಲಿ ನೆಲೆಸಿರುತ್ತದೆ.


ರಿದ್ವಿನ್ ಡಿ. ಆರ್ವ ರಾಜ್ ಅಕಾಡೆಮಿ ಸಿಬಿಎಸ್ಇ ಶಾಲೆಯಲ್ಲಿ ಯುಕೆಜಿ ಕಲಿಯಲಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವನ ಸಾಂಸ್ಕೃತಿಕ ಚಟುವಟಿಕೆಯು ಕೃಷ್ಣ ವೇಷ ಸ್ಪರ್ಧೆಯಿಂದ ಪ್ರಾರಂಭವಾಗಿ ಕಥೆ ಹೇಳುವುದು, ಹಾಡು, ಚಿತ್ರಕಲೆ, ನೃತ್ಯಗಳ ಮೂಲಕ ಪುಟಾಣಿ ಕಲಾವಿದನಾಗಿ ಬೆಳೆಯುತ್ತಿದ್ದಾನೆ.
ತನ್ನ ಎರಡುವರೆ ವರ್ಷದಲ್ಲಿ ನಮ್ಮ ಟಿವಿ ಮತ್ತು ಆಲ್ ಕೌಸರ್ ಮೀಡಿಯಾ ಇವರ ಸಹಯೋಗದಲ್ಲಿ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ ಮತ್ತು ಅಥರ್ವ ಹೋಂಡಾ ಮಂಗಳೂರು ಇವರು ನಡೆಸಿದ ಚಿಲ್ಡ್ರನ್ ಡಾನ್ಸ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ತೀರ್ಪುಗಾರರಿಂದ ಪ್ರಶಂಸೆ ಪಡೆದಿದ್ದಾನೆ‌. ತನ್ನ ಮೂರುವರೆ ವರ್ಷಕ್ಕೆ ನರ್ಸರಿ ಗೆ ಸೇರಿ ರಾಜ ಅಕಾಡೆಮಿ ಸಿಬಿಎಸ್ಇ ಶಾಲೆಯಲ್ಲಿ ನಡೆದ ಕೃಷ್ಣ ವೇಶ ಸ್ಪರ್ಧೆ, ಕೈಕಂಬ, ಬಜ್ಪೆ , ಕಿನ್ನಿ ಕಂಬಳ, ಗಂಜಿಮಠ ಹೀಗೆ ಹಲವು ಕಡೆ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಪುರಸ್ಕಾರ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾನೆ. ಪ್ರಸಾದ್ ಬುಕ್ ಡಿಸ್ಟ್ರಿಬ್ಯೂಟರ್ಸ್ ನಡೆಸಿದ ಕಲರಿಂಗ್ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ತನ್ನ ಶಾಲೆಯಲ್ಲಿ ನಡೆಸಿದ ಫ್ಯಾಷನ್ ಶೋನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ. ಕುಕಿಂಗ್ ವಿಥೌಟ್ ಫೈಯರ್ ಪ್ರಥಮ, ಕಥೆ ಹೇಳುವುದರಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಹೀಗೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸದಾ ಮುಂದಿರುತ್ತಾನೆ. ವಾಮಂಜೂರಿನ
ಆರ್ ಒ ಇಂಟರ್ನ್ಯಾಷನಲ್ ನಲ್ಲಿ ನಡೆಸಿದ ಜೂನಿಯರ್ ಸಾಂತಾ 2024ರಲ್ಲಿ ಭಾಗವಹಿಸಿರುತ್ತಾನೆ. ಪೆರ್ಮುದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾನೆ ಮತ್ತು ಸ್ವಿಗ್ಗಿ ಇನ್ಸ್ಟಾರ್ಮೆಂಟ್ ಚಾಲೆಂಜ್ ನಲ್ಲಿಯೂ ಭಾಗವಹಿಸಿರುತ್ತಾನೆ.
ಕಿನ್ನಿಗೊಳಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿ ಕಥೆ ಹೇಳುವುದರ ಮೂಲಕ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿರುತ್ತಾನೆ. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮೂಡಬಿದಿರೆ ಘಟಕ ಅಂದು ಇಂದು ಮುಂದು ಚಿಂತನೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ಗೀತೆಯನ್ನು ಹಾಡುವುದರ ಮೂಲಕ ಎಲ್ಲರನ್ನು ಮಂತ್ರಮುಗ್ಧಗೊಳಿಸಿರುತ್ತಾನೆ.
ಲಿಟಲ್ ಹ್ಯಾಂಡ್ಸ್ ಒಲಂಪಿಯಾಡ್ ನಲ್ಲಿ ಜಿಲ್ಲಾಮಟ್ಟದಿಂದ ಗೆದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ಪದಕವನ್ನು ಪಡೆದಿರುತ್ತಾನೆ. ರಾಜ್ಯಮಟ್ಟದ ಬಾಲ ರತ್ನ ಪ್ರಶಸ್ತಿ ಲಭಿಸಿರುತ್ತದೆ. ಈ ಪುಟಾಣಿಯು ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲದೆ ಕಲಿಕೆಯಲ್ಲಿಯೂ ಮುಂದಿದ್ದು 2024 – 25ನೇಯ ಸಾಲಿನ ಎಲ್ ಕೆ ಜಿ ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಪದ್ಮಶ್ರೀ ಭಟ್ ಸಾರಥ್ಯದ ವಾಯ್ಸ್ ಆಫ್ ಆರಾಧನ ತಂಡದ ಸಕ್ರಿಯ ಸದಸ್ಯನಾಗಿದ್ದು ಏಪ್ರಿಲ್ ಮತ್ತು ಆಗಸ್ಟ್ ತಿಂಗಳ ವಿಜೇತನಾಗಿರುತ್ತಾನೆ, ಪ್ರತಿದಿನ ಶುಭನುಡಿ ಮತ್ತು ಕಥೆ ಕವನಗಳನ್ನು ಹೇಳುತ್ತಿರುತ್ತಾನೆ
ಆತ್ಮಿ ಪ್ರಕಾಶ್ ಅಜೆಕಾರು ಈಕೆಯು ಪ್ರಕಾಶ್ ಅಜೆಕಾರು ಹಾಗೂ ಧೃತಿ ಅವರ ಪುತ್ರಿ.
ಪ್ರಸ್ತುತ ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೆಂಟ್ರಲ್ ಸ್ಕೂಲ್ ನಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಡ್ಯಾನ್ಸ್ ಸಂಗೀತ, ಡ್ರಾಯಿಂಗ್, ಅಭಿನಯ ಗೀತೆ ಎಲ್ಲದರಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈಗಾಗಲೇ ಕೊಲ್ಲೂರು, ಉಡುಪಿ, ಮೂಡಬಿದ್ರೆ, ಕಿನ್ನಿಗೋಳಿ ಹೀಗೆ ಅನೇಕ ಕಡೆಯಲ್ಲಿ ಹಲವಾರು ವೇದಿಕೆಯಲ್ಲಿ ತನ್ನ ಪ್ರತಿಭೆಯ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. Ramoji Film city ಅವರ Etv Bal Bharath channel navaru ನಡೆಸಿದ Quiz ನಲ್ಲಿ ಬಹುಮಾನ ಪಡೆದಿರುತ್ತಾಳೆ, ಹೀಗೆ ಅಭಿನಯ ಗೀತೆ, ಸ್ಮರಣ ಶಕ್ತಿ, ಸಂಗೀತ, sportz, ಕೃಷ್ಣ ವೇಷ ಮುಂತಾದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾಳೆ. ಅಷ್ಟೇ ಅಲ್ಲದೇ ಶಾಲೆಯಲ್ಲಿ ಓದಿನಲ್ಲೂ ಜಾಣೆ. ತನ್ನ ಪ್ರತಿಭೆಯ ಮೂಲಕ ಅನೇಕ ವೇದಿಕೆಯಲ್ಲಿ ಪ್ರಶಂಸ ನ ಪತ್ರ ಹಾಗೂ ಸ್ಮರಣಿಕೆ ಪಡೆದಿರುತ್ತಾಳೆ.ಇವಳು ಪದ್ಮಶ್ರೀ ಭಟ್ ಇವರ ನೇತೃತ್ವದ ವಾಯ್ಸ್ ಆರಾಧನಾ ತಂಡದ ಸಕ್ರಿಯ ಸದಸ್ಯೆ. ವಾಯ್ಸ್ ಆಫ್ ಆರಾಧನಾ ತಂಡದ ಮೂಲಕ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು