11:07 PM Friday19 - December 2025
ಬ್ರೇಕಿಂಗ್ ನ್ಯೂಸ್
ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ನವೆಂಬರ್ ತಿಂಗಳ ಟಾಪರ್ ಆಗಿ ದ್ವಿತಿ ಹಾಗೂ ಸುಭೀಕ್ಷಾ ಅನಿಲ್ ಆಯ್ಕೆ

19/12/2025, 15:07

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ನವೆಂಬರ್ ತಿಂಗಳ ಟಾಪರ್ ಆಗಿ ದ್ವಿತಿ ಹಾಗೂ ಸುಭೀಕ್ಷಾ ಅನಿಲ್ ಆಯ್ಕೆ

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ದ್ವಿತಿ ಹಾಗೂ ಸುಭೀಕ್ಷಾ ಅನಿಲ್ ಆಯ್ಕೆಯಾಗಿದ್ದಾರೆ.
ಸುಕನ್ಯ ದಯಾನಂದ ಅವರ ಪುತ್ರಿಯಾದ ದ್ವಿತಿ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಇವಳು ಬಾಲ್ಯಾವಸ್ಥೆಯಲ್ಲೇ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ತನ್ನ 1ನೇ ವಯಸ್ಸಿನಿಂದಲೇ ಮುದ್ದು ಕೃಷ್ಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ್ದಾಳೆ. ನೃತ್ಯದಲ್ಲಿನ ಆಸಕ್ತಿಯನ್ನು ಗಮನಿಸಿ 6ನೇ ವಯಸ್ಸಿಗೆ ನೃತ್ಯ ಗುರುಗಳಾದ ವಿನೋದ್ ರಾಜ್ ಅವರು ಬಿ.ಸಿ ರೋಡಿನ Xtreme ನೃತ್ಯ ತರಬೇತಿ ಕೇಂದ್ರದಲ್ಲಿ ಸೇರಿಸಿದ್ದಳು. ಹಲವಾರು ಕಡೆಗಳಲ್ಲಿ ತನ್ನ ನೃತ್ಯ ಪ್ರದರ್ಶನಗೈದಿರುತ್ತಾರೆ.
ಅನೇಕ solo dance ನಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಶಾಲಾ ಮಟ್ಟ ಕ್ಲಸ್ಟರ್ ಮಟ್ಟದ‌ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಕ್ತಿಗೀತೆ, ಅಭಿನಯಗೀತೆ, ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾಳೆ. ತಿರುವಾಲೆ ಭಜನಾ ತಂಡದಲ್ಲಿ ಸೇರಿಕೊಂಡು ಹಲವಾರು‌ ಕಡೆಗಳಲ್ಲಿ ಭಜನಾ ಸೇವೆಯನ್ನು ನೀಡುತ್ತಿದ್ದಾಳೆ.
ಆಟೋಟ ಸ್ಪರ್ಧೆಯಲ್ಲಿ ಆಸಕ್ತಿ ಹೊಂದಿದ್ದು, ಓಟದ‌ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ. ಕಲ್ಲಡ್ಕ
ಶ್ರೀರಾಮ‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಭಗವದ್ಗೀತೆ ಸಂಸ್ಕೃತ ಪಠಣ ಗಳಲ್ಲಿ ಮುಂಚೂಣಿಯಲ್ಲಿದ್ದಾಳೆ.
ಪ್ರಸ್ತುತ ತನ್ನ ಶಾಲೆಯಲ್ಲಿ ಭರತನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾಳೆ.


ಸುಭಿಕ್ಷ ಅನಿಲ್ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆ ಅನಿಲ್ ಕುಮಾರ್ ಮತ್ತು ಶೈಲಜಾ ಅವರ ದ್ವಿತೀಯ ಪುತ್ರಿ. ಪ್ರಥಮ ಪುತ್ರಿ ಪ್ರತಿಕ್ಷ ಅನಿಲ್‌ ಇವಳ ಸಾಧನೆ ನೋಡುವುದಾದರೆ ರಾಜ್ಯ ಜಿಲ್ಲಾಮಟ್ಟದಲ್ಲಿ ಹಲವಾರು ನೃತ್ಯ ಪ್ರದರ್ಶನ ನೀಡಿರುತ್ತಾಳೆ .ನ್ಯಾಸರ್ಗಿ ಯಲ್ಲಿ ಪತ್ರಕರ್ತರ ಸಂಘಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲೆಯನ್ನುಗುರುತಿಸಿ ಸನ್ಮಾನಿಸಿದ್ದಾರೆ. ಬೆಂಗಳೂರು ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಹಾಗೂ ವಿಶ್ವ ಜನಪದ ಪರಿಷತ್ ಬೆಂಗಳೂರು. ಪ್ರತಿಭೆಯನ್ನು ಗುರುತಿಸಿ ಸುವರ್ಣ ಕರ್ನಾಟಕ ನಾಟ್ಯಮಯೂರಿ ಬಾಲಗೌರವ ರಾಜ ಪ್ರಶಸ್ತಿ ಯನ್ನು. ಮಂಗಳೂರು ನೆಲ್ಲಿ ತೀರ್ಥದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದಿಂದ ಸೇವ ರತ್ನ ಪ್ರಶಸ್ತಿ ಹಾಗೂ axis life ಮ್ಯಾಕ್ಸ್ ಇನ್ಸೂರೆನ್ಸ್ ಕಂಪನಿ ಕಡೆಯಿಂದ ಕಲಾ ರತ್ನ ಅವಾರ್ಡ್ ಬಂದಿದೆ. ಮಂಗಳೂರು, ಕೇರಳ, ಉಡುಪಿ, ಕೊಲ್ಲೂರು, ಮೂಡಬಿದ್ರೆ, ಮುಂಡುಗೋಡ, ಇಂದೂರು ಮಾರಿಕಾಂಬ ದೇವಸ್ಥಾನ, 2023 ವಾಯ್ಸ್ ಆಫ್ ಆರಾಧನಾ ನಡೆಸಿರುವ ಅಬ್ಬೆ ನಡ್ಕ ನಂದಳಿಕೆ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಅಂತರ್ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ದುರ್ಗಾಪರಮೇಶ್ವರಿ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಾರೆ. 2024 ದೇವಸ್ಥಾನ. ಪ್ರಸಿದ್ಧ ದೇವಸ್ಥಾನಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾಳೆ. ಗುರುಗಳಾದ ಶಶಿರೇಖಾ ಬೈಜು ಇವರ ಹತ್ತಿರ ನಾಲ್ಕು ವರ್ಷದಿಂದ ತನ್ನ ಮೂರನೇ ವಯಸ್ಸಿನಲ್ಲಿ ಕುಚ್ ಪುಡಿ ಮೋಹಿನಿ ಆಟಂ ಹಾಗೂ ಭರತನಾಟ್ಯ ಅಭ್ಯಾಸವನ್ನು ಸತತವಾಗಿ ಮಾಡುತ್ತಿದ್ದಾಳೆ. ಯೋಗ ಕರಾಟೆ ಚಿತ್ರಕಲೆ ರಿಂಗ್ ಡ್ಯಾನ್ಸ್ ಸಂಗೀತ ಅಭ್ಯಾಸ ಅಪಾರ ಆಸಕ್ತಿ ಹೊಂದಿರುತ್ತಾಳೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಮಾತಿನಂತೆ ಸಾಧನೆ ನೋಡುವುದಾದರೆ. ಯೋಗದಲ್ಲಿ ಒಂದು ಸೆಕೆಂಡಿಗೆ ಪರ್ವತಾಸನ ಭುಜಂಗಾಶನ ಮಾಡಿ ಗೀಸಾ ವರ್ಲ್ಡ್ ರೆಕಾರ್ಡ್ ಮಾಡಿರುತ್ತಾಳೆ. ಭರತನಾಟ್ಯದಲ್ಲಿ ಅಖಿಲ ಭಾರತೀಯ ಗಂಧರ್ವ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದಾಳೆ.‌ ವಿಶ್ವ ಕನ್ನಡ ಜನ ಪದ ಪರಿಷತ್ ಬೆಂಗಳೂರು, ಸುವರ್ಣ ಕರ್ನಾಟಕ ನಾಟ್ಯ ಮಯೂರಿ ಬಾಲ ಗೌರವ ರಾಜ್ಯ ಪ್ರಶಸ್ತಿ ಕಲಾ ರತ್ನ ಪ್ರಶಸ್ತಿ ಸೇವಾ ರತ್ನ ಪ್ರಶಸ್ತಿ ಬಂದಿದೆ .
ಹಲವಾರು ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಪ್ರಶಸ್ತಿಗಳು ಬಂದಿದೆ. ಇವಳ ಸಾಧನೆಯನ್ನು ಗುರುತಿಸಿ ಇನ್ನರ್ ವೀಲ್ ಕ್ಲಬ್ ಮುಂಡಗೋಡ ಸನ್ಮಾನಿಸಿದ್ದಾರೆ. ನವೆಂಬರ್ 1 ತಾಲೂಕು ಆಡಳಿತ ಮಂಡಳಿ ಮುಂಡುಗೋಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ. ಛದ್ಮಾವೇಶದಲ್ಲಿ ಪ್ರಥಮ ಬಹುಮಾನ ಬಂದಿದೆ. ಇತ್ತೀಚಿಗೆ ನಡೆದ ಕಟೀಲು ಸರಸ್ವತಿ ಸದನದಲ್ಲಿ ನಡೆದ ರಾಜಮಟ್ಟದ ಮಕ್ಕಳ ಸಮ್ಮೇಳನ ದಲ್ಲಿ ಭಾಗವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು