7:05 AM Saturday4 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜುಲೈ ತಿಂಗಳ ಟಾಪರ್ ಆಗಿ ಬ್ರಿಶಾ ಬಿ. ಇರಾ ಹಾಗೂ ಪ್ರಗ್ಯ ಆಯ್ಕೆ

19/08/2025, 21:23

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಬ್ರಿಶಾ ಬಿ. ಇರಾ ಹಾಗೂ ಪ್ರಗ್ಯ ಆಯ್ಕೆಯಾಗಿದ್ದಾರೆ
ಬ್ರಿಶಾ ಬಿ.ಇರಾ ಬಾಲೆಗೆ 6 ವರ್ಷ. ಈಕೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಭಾಸ್ಕರ್ ಎಂ. ಇರಾ ಮತ್ತು ಸಂಜನಾ ಬಿ.ಇರಾ ಅವರ ಪುತ್ರಿ. ಈಕೆ ಬಿಜಾಪುರದ ವಿದ್ಯಾ ವಿಕಾಸ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಭರತನಾಟ್ಯದಲ್ಲಿ ತನ್ನ ಮೂರುವರೆ ವರ್ಷದಲ್ಲಿ ವೇದಿಕೆ ಹತ್ತಿದ ಇವಳು ನೃತ್ಯ ಸ್ಪರ್ಧೆ, ಚದ್ಮವೇಷ ಮತ್ತು ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ.ಇವಳು ತನ್ನ ಭರತನಾಟ್ಯ ಅಭ್ಯಾಸವನ್ನು ಪೂರ್ವಿ ಎನ್. ತಳ್ವಾರ್ ಅವರಲ್ಲಿ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಭರತನಾಟ್ಯದಲ್ಲಿ 2024ರಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ಲಾಸ್ಯ ನವರಸ ಉತ್ಸಾಹದಲ್ಲಿ ರಾಜ್ಯಸಂಗಮ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ಡ್ಯಾನ್ಸ್ ರಿದಂ 2025 ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಕೀರ್ತಿ ತಂದಿದ್ದಾಳೆ. ಮಂಗಳೂರು, ಬೆಳಗಾವಿ, ಅಥಣಿ, ಮುಧೋಳ್, ವಿಜಯಪುರ ಮತ್ತು ವಾಯ್ಸ್ ಆಫ್ ಆರಾಧನಾ ತಂಡದ ಸಹಯೋಗದಿಂದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ನೀಡಿದ್ದಾಳೆ. ಹಲವಾರು ಕಡೆ ಭರತನಾಟ್ಯ ಪ್ರದರ್ಶನ ಮಾಡಿ ಅಭಿನಂದನ ಪತ್ರ ಪಡೆದುಕೊಂಡಿದ್ದು ಆನ್ಲೈನ್ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಬ್ರಿಶಾ ನಾಟ್ಯದಲ್ಲಿ ಮಾತ್ರವಲ್ಲದೆ ಚಿನ್ನರ ಚಿತ್ತಾರ ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.


ವಾಯ್ಸ್ ಅಪ್ ಆರಾಧನೆ ತಂಡದಲ್ಲಿ ಭಾಗವಹಿಸಿ ಮಾರ್ಚ್ ಮತ್ತು ಜುಲೈ ತಿಂಗಳ ವಿಜೇತರಾಗಿ ಹೊರಹೊಮ್ಮಿ ಇರುವುದು ವಿಶೇಷ. ಈಕೆಗೆ ಹಲವಾರು ಪ್ರಶಸ್ತಿಗಳು ದೊರಕಿದ್ದು ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಹಾಗೂ ಗಡಿನಾಡು ನುಡಿ ರಾಷ್ಟ್ರೀಯ ವಾರ್ತ ಪತ್ರಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ 2025 ಕರ್ನಾಟಕ ಬಾಲ್ಯ ನಾಟ್ಯ ರಾಣಿ ಪ್ರಶಸ್ತಿ ಅಲ್ಲದೆ ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ತು ಬೆಂಗಳೂರು ಇವರ ಆಶ್ರಯದಲ್ಲಿ ಸುವರ್ಣ ಕರ್ನಾಟಕ ನಾಟ್ಯಮಯೂರಿ ಪ್ರತಿಭಾ ಪುರಸ್ಕಾರ ಮತ್ತು ಕಲಾ ರತ್ನ ಅವಾರ್ಡ್ ಲಭಿಸಿದೆ. 2025ರ ಮೇ ಯಲ್ಲಿ ನಡೆದ ಅಖಿಲ ಭಾರತ ಸಾಂಸ್ಕೃತಿಕ ಸಂಘ ಪುಣೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.
ಡಾ.ದೇವಿಪ್ರಸಾದ್ ಹಾಗೂ ಆಶಾಲತಾ ದಂಪತಿಯ ಪುತ್ರಿ ಪ್ರಗ್ಯ. ಬಜಪೆ ನಿವಾಸಿಯಾದ ಈಕೆ ಮೇರಿಹಿಲ್ ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಾಲ್ಯದಿಂದಲೇ ಕಲೆಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದಳು. ಭರತನಾಟ್ಯ, ಸಂಗೀತ, ಯಕ್ಷನ್ರತ್ಯ ನೃತ್ಯ ಡ್ರಾಮ ಇವೆಲ್ಲದರಲ್ಲೂ ತನ್ನನ್ನು ತಾನು ಮೈಗೂಡಿಸಿಕೊಂಡಿದ್ದಾಳೆ. ಟಾಕೀಸ್ ಆ್ಯಪ್ ನಲ್ಲಿ ಬರುವ ಡ್ರಾಮ ದಲ್ಲಿ ಫೈನಲ್ ಸೆಲೆಕ್ಟ್ ಆಗಿದ್ದಾಳೆ. ಕಿರಿಕ್ ಕಿಡ್ ಎಪಿಸೋಡ್ ನಲ್ಲಿ ವಿನ್ನರ್ ಆಗಿದ್ದಾಳೆ. ಭೀಮ ಜುವೆಲ್ಲರಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ. ಟ್ಯಾಲೆಂಟ್ ಶೋ ಮುದ್ದು ಕಂದ, ಕೃಷ್ಣ ವೇಷ,ಅಭಿನಯ ಹೀಗೆ ಹಲವಾರು ವೇದಿಕೆಯಲ್ಲಿ ತನ್ನ ಪ್ರತಿಭೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ತನ್ನ 7ನೇ ವಯಸ್ಸಿನಲ್ಲಿ 50ಕ್ಕಿಂತ ಹೆಚ್ಚು ಬಹುಮಾನ ಸ್ಮರಣಿಕೆ ಗಳಿಸಿದ್ದಾಳೆ. ಇವಳು ಅಭಿಮತ ವಾಹಿನಿಯ ಪ್ರತಿಭಾ ಲೋಕದಲ್ಲಿ ಭಾಗವಹಿಸಿದ್ದಾಳೆ.
ಈಕೆ ಪದ್ಮಶ್ರೀ ಭಟ್ ನೇತೃತ್ವದ ವಾಯ್ಸ್ ಆಪ್ ಆರಾಧನ ತಂಡದ ಸಕ್ರೀಯ ಸದಸ್ಯೆ.

ಇತ್ತೀಚಿನ ಸುದ್ದಿ

ಜಾಹೀರಾತು