ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಅಮೋಘ್ ಭಟ್ ಹಾಗೂ ಅಪ್ರಮೇಯ ಪಿ.ಎನ್. ಆಯ್ಕೆ
11/07/2025, 12:54

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಅಮೋಘ್ ಭಟ್ ಹಾಗೂ ಅಪ್ರಮೇಯ ಪಿ.ಎನ್.
ಆಯ್ಕೆಯಾಗಿದ್ದಾರೆ.
ಸಂಭ್ರಮ ಭಟ್ ಹಾಗೂ ಕಾರ್ತಿಕ್ ಭಟ್ ಅವರ ಮಗನಾದ ಅಮೋಘ್ ಭಟ್ ಕೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ಗೋಪಾಲಕೃಷ್ಣ ನಗರದಲ್ಲಿ ವಾಸಿಸುತ್ತಿದ್ದು, ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಂಗೀತ, ಚೆಂಡೆ, ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ಈತ ಅದರ ಅಭ್ಯಾಸದ ಹಾದಿಯಲ್ಲಿದ್ದಾನೆ. ಕಟೀಲಿನಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿ ಹಲವಾರು ಉತ್ತಮ ವಿಷಯಗಳನ್ನು ಕಲಿಯುತ್ತಾ, ಸಂಸ್ಕಾರಗಳನ್ನು ಅರಿಯುತ್ತಾ, ಹಲವಾರು ಸ್ತೋತ್ರಗಳನ್ನು ಕಲಿತುಕೊಂಡಿದ್ದಾನೆ. ಪ್ರಶಸ್ತಿ ಪತ್ರವನ್ನು ಪಡೆದಿದ್ದಾನೆ. ಶಾಲೆಯಲ್ಲಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮಾತುಗಾರಿಕೆಯಲ್ಲಿ ಪ್ರಥಮ, ಜಾನಪದ ಗೀತೆಯಲ್ಲಿ ದ್ವಿತೀಯ ಬಹುಮಾನ ತಮ್ಮದಾಗಿಸಿಕೊಂಡಿದ್ದಾನೆ. ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತನಾಗಿದ್ದಾನೆ. ಕಥಾಬಿಂದು ಪ್ರಕಾಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದಿದ್ದಾನೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ದೇಶ ಭಕ್ತಿಗೀತೆ, ಜಾನಪದ ಗೀತೆ, ಭಕ್ತಿಗೀತೆಯನ್ನು ಹಾಡುವುದರ ಜೊತೆಗೆ ಉಗಾಭೋಗಗಳು ಮತ್ತು ಭಗವದ್ಗೀತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಅಭ್ಯಾಸಿಸುತ್ತಿದ್ದಾನೆ.ವವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ತಿಂಗಳ ವಿಜೇತನಾಗಿ ಅಗರಿ ಎಂಟರ್ಪ್ರೈಸಸ್ ನಿಂದ ಬಹುಮಾನ ಪಡೆದಿದ್ದಾನೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಗೀತೆಯನ್ನು ಹಾಡಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಈ ತಿಂಗಳ ವಿಜೇತರಲ್ಲಿ ಒಬ್ಬನಾದ ಈತ ಜನ ಸಾಮಾನ್ಯರನ್ನು ತಲುಪುವ ಮಾಧ್ಯಮವಾದ “ರಿಪೋರ್ಟ್ ಕರ್ನಾಟಕ” ದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾನೆ.
ಪುತ್ತೂರು ಕೆಮ್ಮಿಂಜೆಯ ಪ್ರವೀಣ್ ನಾಯಕ್ ಹಾಗೂ
ಅಕ್ಷತಾ ಅವರ ಪುತ್ರನಾದ ಅಪ್ರಮೇಯ ಬಪ್ಪಳಿಗೆ
ಅಂಬಿಕಾ ಬಾಲ ವಿದ್ಯಾಲಯದ ವಿದ್ಯಾರ್ಥಿ. ಕನ್ನಡ ವರ್ಣಮಾಲೆ, ಇಂಗ್ಲಿಷ್ ವರ್ಣಮಾಲೆ, ಭಾರತದ 28 ರಾಜ್ಯಗಳು, ಪ್ರಧಾನ ಮಂತ್ರಿ,ರಾಷ್ಟ್ರಪತಿ, ಮುಖ್ಯಮಂತ್ರಿಗಳ ಹೆಸರು, ಪಂಚಭೂತಗಳು, ಕಾಲಗಳು, ತಿಂಗಳುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಶಿಚಕ್ರ ಚಿಹ್ನೆಗಳು, ಕೆಲವು ಜಿಕೆ ಪ್ರಶ್ನೋತ್ತರಗಳು, 1ರಿಂದ10 ಅಂಕೆಗಳನ್ನು 4 ಭಾಷೆಗಳಲ್ಲಿ, ದೇಹದ ಭಾಗಗಳು, ಬಣ್ಣಗಳು, ಹಣ್ಣುಗಳು, ತರಕಾರಿಗಳು, ಪ್ರಾಣಿಗಳ ಗುರುತಿಸುವಿಕೆ , ಸೌರವ್ಯೂಹದ ಗ್ರಹಗಳು,ನಕ್ಷತ್ರಗಳು,ಮಾಸಗಳು,ಋತುಗಳು,ಇತ್ಯಾದಿ ಬಹುಮುಖ ವಿಷಯಗಳಲ್ಲಿ ಅತ್ಯುತ್ತಮವಾದ ಜ್ಞಾಪಕಶಕ್ತಿಯನ್ನು ಹೊಂದಿದ್ದಾನೆ. ಇದನ್ನು ನೋಡಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ 2024ರ ದಾಖಲೆ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಬೆಂಗಳೂರಿನ ಶ್ರೀಕೃಷ್ಣ ಅಕಾಡೆಮಿ ವೇದಿಕ್ ಕಲ್ಚರ್ ಏರ್ಪಡಿಸಿದ್ದ ಶ್ರೀರಾಮ ವೇಷಭೂಷಣ ಸ್ಪರ್ಧೆ-2024 ರಲ್ಲಿ ಟಾಪರ್ ಆಗಿದ್ದಾನೆ.
ವಿಜಯಪಥ ಆಯೋಜನೆಯ 2024ರ ನಮ್ಮನೆ ಶ್ರೀಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಈತನಿಗೆ ಬಂದಿದೆ.
ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಸಂಸ್ಥೆ ಯೂ 2023ರಲ್ಲಿಯೇ ದಾಖಲೆ ಪಟ್ಟಿಗೆ ಅಪ್ರಮೇಯ ಹೆಸರನ್ನು ಸೇರ್ಪಡೆಗೊಳಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಆವೃತ್ತಿಯ ವಿಜಯ ಕರ್ನಾಟಕ ಪತ್ರಿಕೆಯ ಮುದ್ದುಕಂದ- 2023 ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಲಭಿಸಿರುತ್ತದೆ.
*Enoch Renault-Super Mom-2023 ಸ್ಪರ್ಧೆಯಲ್ಲಿ ಬೆಸ್ಟ್ ಫೋಸ್ ಟೈಟಲ್ ಮತ್ತು Little Santa-2023 ಸ್ಪರ್ಧೆಯಲ್ಲಿ VIBRANT SANTA ಟೈಟಲನ್ನು ಪಡೆದಿದ್ದಾನೆ. ವಾಯ್ಸ್ ಆಫ್ ಆರಾಧನಾ ಫಾದರ್ಸ್ ಡೇ ಸ್ಪೆಷಲ್ ರೀಲ್ಸ್-2023 ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾನೆ. ವಾಯ್ಸ್ ಆಫ್ ಆರಾಧನ ಸಂಸ್ಥೆಯ ಸಕ್ರಿಯ ಬಾಲಪ್ರತಿಭೆಯಾಗಿ ತಿಂಗಳ ವಿಜೇತರಾಗಿ ಎಂಟು ಬಾರಿ ಆಯ್ಕೆಯಾಗಿದ್ದಾನೆ. ತುಳುನಾಡ ಬೇಬಿ ಮಾಡೆಲ್ -2022 ಟೈಟಲ್ ಮತ್ತು ಉದಯವಾಣಿ ಪತ್ರಿಕೆಯ ಚಿಗುರು ಚಿತ್ರ- 2022 ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ಮೆಚ್ಚುಗೆ ಸ್ಥಾನ ಪಡೆದಿದ್ದಾನೆ.
ಕುಡಾಳ್ ದೇಶ್ಕರ್ ಮುದ್ದುಕಂದ-2022 ಮೆಚ್ಚುಗೆ ಸ್ಥಾನ ಲಭಿಸಿದೆ.
ಅಪ್ರಮೇಯ ತಾನು 7 ತಿಂಗಳ ಮಗುವಿದ್ದಾಗಲೇ ಕುಡಾಳ್ ದೇಶ್ಕರ್ ಗೆಳೆಯರ ಬಳಗದ ಮಕ್ಕಳ ಫೋಟೋ ಸ್ಪರ್ಧೆ -2021ರಲ್ಲಿ “ಪ್ರಥಮ”ಸ್ಥಾನ ಪಡೆದು 5000 ನಗದನ್ನು ತನ್ನದಾಗಿಸಿಕೊಂಡಿದ್ದ.
ಇನ್ನೂ ಹಲವಾರು ಸಂಸ್ಥೆಗಳು ಏರ್ಪಡಿಸಿದ್ದ ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪ್ರಶಸ್ತಿಯನ್ನು ಪಡೆದಿದ್ದಾನೆ. ಅಷ್ಟೇ ಅಲ್ಲದೇ ಈ ಪುಟ್ಟ ಕಂದ, ಗಾನಸಿರಿ ಕಲಾಕೇಂದ್ರ ಪುತ್ತೂರು ಇಲ್ಲಿ ಸುಗಮಸಂಗೀತ ಅಭ್ಯಾಸವನ್ನು ಡಾ.ಕಿರಣ್ ಕುಮಾರ್ ಪುತ್ತೂರು ಅವರಲ್ಲಿ ಮತ್ತು ಚಿತ್ರಕಲೆಯನ್ನು ದಿನೇಶ್ ವಿಶ್ವಕರ್ಮ ಅವರಲ್ಲಿ ಈಗಾಗಲೇ ಆರಂಭಿಸಿದ್ದಾನೆ.