9:17 PM Tuesday20 - May 2025
ಬ್ರೇಕಿಂಗ್ ನ್ಯೂಸ್
1,600 ಕೋಟಿ ರೂ. ಕಾಮಗಾರಿ ರದ್ದು ಮಾಡದಿದ್ದರೆ ಬೆಂಗಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ:… Ex chief Minister | ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ ಸರ್ಕಾರ: ಬಸವರಾಜ ಬೊಮ್ಮಾಯಿ… Karnataka CM | ಬೆಂಗಳೂರಿನಲ್ಲಿ ಮಳೆ ಹಾನಿ: ಮೇ 21ರಂದು ಇಡೀ ದಿನ… GBA | ಬೆಂಗಳೂರಿಗೆ ಭಾರಿ ಮಳೆಯಿಂದ ಹಾನಿ: ವಾರ್ ರೂಮ್‌ನಲ್ಲಿ ಮಾಹಿತಿ ಪಡೆದ… ಫಲಾನುಭವಿಗಳ ನೋಡಲು ಬಿಜೆಪಿ ನಾಯಕರುಗಳೇ ಬನ್ನಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆಹ್ವಾನ Karnataka | ಹಂಪಿಯಲ್ಲಿ ರಾಜ್ಯದ 2ನೇ ಅತಿದೊಡ್ಡ ತಾರಾಲಯ ಹಾಗೂ ವಿಜ್ಞಾನ ಕೇಂದ್ರ… HDK | ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು: ರಾಜ್ಯ ಸರಕಾರ… ಬೆಂಗಳೂರು: ಗುಡುಗು ಸಹಿತ ಭಾರೀ ಮಳೆ: ರಸ್ತೆಯಲ್ಲಿ ನಿಂತ ನೀರು; ಟ್ರಾಫಿಕ್ ಜಾಮ್;… ಪಾಕ್ ಬೆಂಬಲಿತ ಭಯೋತ್ಪಾದನೆ: ಅಮೆರಿಕ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಸಂಸದರಾದ ತೇಜಸ್ವಿ ಸೂರ್ಯ,… Chikkamagaluru | ಕೃಷಿ ಹೊಂಡದಲ್ಲಿ ಒಂಟಿ ಸಲಗನ ಜಲಕ್ರೀಡೆ!: ಒಂದು ತಾಸಿಗೂ ಅಧಿಕ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಏಪ್ರಿಲ್ ತಿಂಗಳ ಟಾಪರ್ ಆಗಿ ಅಭಿಜ್ಞಾ ಎಚ್.ಸಿ. ಹಾಗೂ ವಿನುತಾ ಮೊಗವೀರ ಆಯ್ಕೆ

20/05/2025, 20:54

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಪ್ರಿಲ್‌ ತಿಂಗಳ ಟಾಪರ್ ಆಗಿ ಅಭಿಜ್ಞಾ ಎಚ್.ಸಿ ಹಾಗೂ ವಿನುತಾ ಮೊಗವೀರ ಆಯ್ಕೆಯಾಗಿದ್ದಾರೆ.


ಏಳರ ವರ್ಷದ ಅಭಿಜ್ಞಾ ಎಚ್.ಸಿ ಮಂಗಳೂರಿನ ಕುಂಟಿಕಾನದ ಸೈಂಟ್ ಆ್ಯನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಮೂಲತಃ ಸುಳ್ಯ ಸನಿಹದ ಸಂಪಾಜೆ, ಕೊಯ್ನಾಡಿನ ನಿವಾಸಿಗಳಾದ ಚಿದಾನಂದ ಹಂಡನಮನೆ ಹಾಗೂ ರಮ್ಯಾ ದಂಪತಿಯ ಅವಳಿ ಮಕ್ಕಳಲ್ಲಿ ಓರ್ವಳು ಅಭಿಜ್ಞಾ. ಈಕೆ ಬಾಲ್ಯದಲ್ಲೇ ಟೆಲಿವಿಷನ್ ನಲ್ಲಿ ಪ್ರಸಾರಗೊಳ್ಳುವ ಹಾಡುಗಳಿಗೆ ಕಿವಿಯಾಗಿ ಅದಕ್ಕೆ ಪುಟ್ಟಪುಟ್ಟ ಹೆಜ್ಜೆಗಳನ್ನಿರಿಸುತ್ತಾ ನೃತ್ಯದತ್ತ ಒಲವು ಬೆಳೆಸಿಕೊಂಡವಳು. ಜೊತೆಜೊತೆಯಲ್ಲೇ ಛಾಯಾಚಿತ್ರಕ್ಕೆ ವಿವಿಧ ಭಾವಭಂಗಿಗಳನ್ನು ನೀಡಿ ಮನಸೆಳೆಯುತ್ತಾ ವಯಸ್ಸಿಗೂ ಮೀರಿದ ಪ್ರೌಢತೆಯನ್ನು ತೋರ್ಪಡಿಸಿದಳು. ಶಿಶು ಮಂದಿರದ ವಿದ್ಯಾಭ್ಯಾಸದ ವೇಳೆಯೂ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಇನ್ನಿತರ ಕಲಾಪ್ರಕಾರಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿರುವುದರ ಜೊತೆಗೆ ಕೆಲವೆಡೆ ತೀರ್ಪುಗಾರರ ವಿಶೇಷ ಮೆಚ್ಚುಗೆಗೂ ಪಾತ್ರಳಾದಳು.
ನೃತ್ಯದತ್ತ ಒಲವು ಬೆಳೆಸಿಕೊಂಡ ಮಗಳ ಪ್ರತಿಭೆ ಗುರುತಿಸಿದ ಹೆತ್ತವರು ರೀಲ್ಸ್ ಮಾಡುತ್ತಾ ಮಗಳಿಗೂ ತೋರಿಸಿ, ತಾವೂ ನೋಡಿ ಸಂತಸಪಡುತ್ತಾ ಬಳಿಕ ನೃತ್ಯ ಕಲಿಕೆಗಾಗಿ ಉತ್ತಮ ಗುರುಗಳಿಗಾಗಿ ಅರಸತೊಡಗಿದರು. ಆರಂಭದಲ್ಲಿ ಡಿ ಫೊರ್ಲಿಕ್ಸ್ ಕಲಾ ಶಾಲೆಯ ನೃತ್ಯ ಗುರು ಹಾರ್ದಿಕ್ ಕುಮಾರ್ ಅವರಲ್ಲಿ ಸುಮಾರು ಒಂಭತ್ತು ತಿಂಗಳ ಕಾಲ ನೃತ್ಯಾಭ್ಯಾಸ ನಡೆಸಿ, ಬಳಿಕ ಒಂದಷ್ಟು ಸಮಯ ‘ಡ್ರೀಮ್ ಬಾಯ್ ಕಾವೂರು’ ಇಲ್ಲಿನ ನೃತ್ಯ ಶಿಕ್ಷಕ ಗುರು ಅವರಲ್ಲೂ ಡ್ಯಾನ್ಸ್ ಹೆಜ್ಜೆಗಳನ್ನು ಕಲಿತು ಇದೀಗ 3SK ಯ ನೃತ್ಯ ಶಿಕ್ಷಕ ಸುನಿಲ್ ಡಿ ಸೋಜಾ ಅವರ ಮಾರ್ಗದರ್ಶನದಲ್ಲಿ ಫಿಲ್ಮ್ ಡ್ಯಾನ್ಸ್ ನ ಹೆಜ್ಜೆಗಳನ್ನು ಕಲಿಯುತ್ತಿದ್ದಾಳೆ.
ಅಲ್ಲದೆ ಕಳೆದ ಮೂರು ವರ್ಷಗಳಿಂದ ಮಂಗಳೂರಿನ ಕೊಟ್ಟಾರದಲ್ಲಿನ ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಶಿಕ್ಷಕಿ ಡಾ. ಶೃತಿ ಬೆಳ್ಳೂರು ಅವರಿಂದ ಭರತನಾಟ್ಯವನ್ನೂ ಕಲಿಯುತ್ತಿದ್ದಾಳೆ. ಜೊತೆ ಜೊತೆಗೆ ಡಿಕೆಡಿ ಖ್ಯಾತಿಯ ಮಹೇಶ್ ಅವರಿಂದ ಜಿಮ್ನಾಸ್ಟಿಕ್ಸ್ ಕಲೆಯನ್ನೂ ಕರಗತ ಮಾಡುತ್ತಿರುವ ಈಕೆ ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ತಪಸ್ವಿ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಣವನ್ನೂ ಪಡೆಯುತ್ತಿದ್ದಾಳೆ.
ಬೆಳೆಯುವ ಮಕ್ಕಳಿಗೆ ಸೂಕ್ತ ವೇದಿಕೆ ಸಿಕ್ಕಿದರೆ ಅವರ ಸುಪ್ತ ಪ್ರತಿಭೆಗಳು ಅರಳುವುದು ಸಹಜ. ಇದಕ್ಕೆ ಪೂರಕ ಎಂಬಂತೆ ಕಳೆದ ಕೆಲ ತಿಂಗಳುಗಳಿಂದ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮುಖ್ಯಸ್ಥೆ ಪದ್ಮಶ್ರೀ ಅವರ ನೇತೃತ್ವದಲ್ಲಿ ಈಕೆ ಮಂಗಳೂರು ಸುತ್ತಮುತ್ತ ಹಲವಾರು ಕಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆಯಲ್ಲದೆ ಪ್ರಶಂಸಾ ಪತ್ರವನ್ನೂ ಪಡೆಯುವಂತಾಗಿದೆ.
*ಪ್ರಶಸ್ತಿಗಳು:* 2018ರಲ್ಲಿ ನೆರೆಯ ಜಿಲ್ಲೆ ಕಾಸರಗೋಡು ಮಂಜೇಶ್ವರದ ತುಳುನಾಡ ಬಾಲೆ ಬಂಗಾರ್ ಸಮಿತಿ ಆಯೋಜಿಸಿದ ಮಕ್ಕಳ ಛಾಯಾಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಅಭಿಜ್ಞಾ ಆಯ್ಕೆಯಾಗಿದ್ದಳು. ಪುತ್ತೂರು ಸಿಟಿ ಗುಡ್ಡೆಯ ಶ್ರೀ ಕೃಷ್ಣ ಯುವಕ ಮಂಡಲದ ವತಿಯಿಂದ 2023 ರಲ್ಲಿ ಕೊಡಮಾಡಲಾದ ‘ಪ್ರತಿಭಾ ರತ್ನ’ ಹಾಗೂ 2024 ರಲ್ಲಿ ಆಯೋಜಿಸಲಾದ ‘ಕಲಾ ಮಾಣಿಕ್ಯ ಪ್ರಶಸ್ತಿ’ ಗೆ ಅಭಿಜ್ಞಾ ಭಾಜನಳಾಗಿದ್ದಾಳೆ. ಕರ್ನಾಟಕ ಸರಕಾರದ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ 2025 ರ ಮಾರ್ಚ್ ತಿಂಗಳಲ್ಲಿ ನಡೆದ ಸೃಜನಾತ್ಮಕ ನೃತ್ಯ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದ್ದಾಳೆ. ರಂಗ ಮಯೂರಿ ಕಲಾ ಶಾಲೆ ಸುಳ್ಯ, ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಮೈಸೂರು ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯದಲ್ಲಿ ನಡೆದ ತಾಲೂಕು ಮಟ್ಟದ ಸೊಲೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾಳೆ.
ಮಂಗಳೂರು ಆಕಾಶಭವನದ A1 ಫ್ರೆಂಡ್ಸ್ ನ ವತಿಯಿಂದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಕಾವೂರು ಮಹಾಲಿಂಗೇಶ್ವರ ಗೂಡು ದೀಪ ಸಮಿತಿಯ ವತಿಯಿಂದ ಆಯೋಜಿಸಲಾದ ಗೂಡು ದೀಪ ಸ್ಪರ್ಧಾ ಕಾರ್ಯಕ್ರಮದ ವೇಳೆ ನೀಡಲ್ಪಟ್ಟ ನೃತ್ಯ, ಭಾರತೀಯ ನೃತ್ಯ ಕಲಾ ಶಾಲೆ, ಕೊಟ್ಟಾರ ಶಾಖೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಲಾದ ನೃತ್ಯ ಕಾರ್ಯಕ್ರಮ, ಸೂಕ್ತ ನ್ಯೂಸ್ ನ ಐದರ ವಾರ್ಷಿಕೋತ್ಸವದ ವೇಳೆ ನೀಡಲಾದ ನೃತ್ಯ ಕಾರ್ಯಕ್ರಮ, ಡ್ಯಾನ್ಸ್ ಕುಡ್ಲ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೀಡಿದ ನೃತ್ಯ, ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರಿ ಸಂಘದ ಪ್ರಿಯದರ್ಶಿನಿ ಕಿಂಗ್ ಆ್ಯಂಡ್ ಕ್ವೀನ್ ಫ್ಯಾಷನ್ ಶೋದಲ್ಲಿ ತೋರಿದ ನಿರ್ವಹಣೆ, ಇತ್ತೀಚೆಗೆ ತುಳು ವರ್ಲ್ಡ್ ಫೌಂಡೇಶನ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರೀಯ ತುಳು ವಿಚಾರ ಸಂಕಿರಣದ ಸಾಂಸ್ಕೃತಿಕ ವೇದಿಕೆಯಲ್ಲಿ ನೀಡಲಾದ ಯಕ್ಷಗಾನ ನೃತ್ಯ ವೈಭವ ಕಾರ್ಯಕ್ರಮ …ಹೀಗೆ ಈಕೆ ನೀಡಿದ ಹತ್ತು ಹಲವು ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆಯಲ್ಲದೆ ಕಾರ್ಯಕ್ರಮ ಆಯೋಜಿಸಿದ ಈ ಎಲ್ಲಾ ಸಂಘ, ಸಂಸ್ಥೆಗಳು ಸ್ಮರಣಿಕೆ ನೀಡಿ ಈಕೆಯನ್ನು ಗೌರವಿಸಿ ಸನ್ಮಾನಿಸಿವೆ.
ಶೈಕ್ಷಣಿಕವಾಗಿಯೂ ಉತ್ತಮ ನಿರ್ವಹಣೆ ತೋರುತ್ತಿರುವ ಅಭಿಜ್ಞಾ ಎರಡನೇ ತರಗತಿ ಉತ್ತೀರ್ಣಗೊಂಡು ಇದೀಗ ಮೂರನೇ ತರಗತಿಯ ವಿದ್ಯಾಭ್ಯಾಸಕ್ಕೆ ಅಣಿಯಾಗುತ್ತಿದ್ದಾಳೆ.
ರಾಘವೇಂದ್ರ ಮೊಗವೀರ ಹಾಗೂ ನಾಗರತ್ನ ದಂಪತಿ ಪುತ್ರಿ ವಿನುತಾ ಮೊಗವೀರ. ವಿನುತಾ ಮೂಲತಃ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ತಾರಿಬೇರಿನ ಒಂದು ಹಳ್ಳಿಯವಳು. ಇವಳು ಉತ್ತರ ಕನ್ನಡ ಜಿಲ್ಲೆಯ ಮೂಂಡಗೋಡ ತಾಲೂಕಿನಲ್ಲಿ ಅವಳ ತಂದೆ ತಾಯಿಯ ಜೊತೆ ನೆಲೆಸಿರುತ್ತಾಳೆ. 7ನೇ ತರಗತಿ ಓದುತ್ತಿರುವ ಇವಳು ಭರತ ನಾಟ್ಯವನ್ನು ಕಳೆದ 5 ವರ್ಷಗಳಿಂದ ಭರತನಾಟ್ಯ ಗುರುಗಳಾದ ನಾಟ್ಯ ಮಯೂರಿ ನೃತ್ಯ ಕಲಾಕೇಂದ್ರದಲ್ಲಿ ಶಶಿರೇಖಾ ಬೈಜು ಅವರಲ್ಲಿ ಕಲಿಯುತ್ತಿದ್ದಾಳೆ. ಮಹಾರಾಷ್ಟ್ರ ಬೋರ್ಡ್ ನಡೆಸುವ ಗಂಧರ್ವ ಎಕ್ಸಾಂನಲ್ಲಿ 1st level ಬರೆದಿದ್ದು ರ್ಯಾಂಕ್ ಬಂದಿರುತ್ತಾಳೆ. ಎರಡನೇ level ಇವಾಗ ಬರೆಯುತ್ತಾಳೆ. ಕಳೆದ ವರ್ಷ ನಡೆದ ಡಾ| ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ರಾಜ್ಯಮಟ್ಟದ ಜೂನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಳಾಗಿದ್ದಾಳೆ. ಕಳೆದ 5 ವರ್ಷಗಳಿಂದ ಶ್ರೀ ಮಾರಿಕಾಂಬೆ ದೇವಸ್ಥಾನ ಮುಂಡಗೋಡ ಇಲ್ಲಿ ನಡೆಸಿಕೊಡುವ ನವರಾತ್ರಿ ಉತ್ಸವದಲ್ಲಿ ಭರತನಾಟ್ಯ ಮಾಡುತ್ತಾ ಬಂದಿರುತ್ತಾಳೆ. ಶ್ರೀರಾಮನ ಪ್ರತಿಷ್ಠಾಪನೆಯ ಅಂಗವಾಗಿ ಮುಂಡಗೋಡದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಹಾಗೆಯೇ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ ಮುಂಡಗೋಡ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡಗೋಡ ಮತ್ತು ಕಾತುರ ಮಾರಿಕಾಂಬ ದೇವಸ್ಥಾನ ಮುಂಡಗೋಡ ಮತ್ತು ಸುಕ್ಷೇತ್ರ ಇಂದೂರ ಗ್ರಾಮದೇವಿ ದೇವಸ್ಥಾನ ಇಂದೂರು ಈ ಎಲ್ಲಾ ಕಡೆ ಭರತನಾಟ್ಯ ಮಾಡಿರುತ್ತಾಳೆ. ಹಾಗೆಯೇ 2025-26ರ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ದಲ್ಲಿ Vioce of Aradana ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು