ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕದ ಹೆಸರಿನಲ್ಲಿ ವಿವೇಕ್ ನಾಯಕ್ ಜತೆ ಯಾರೂ ವ್ಯವಹಾರ ಮಾಡಬಾರದಾಗಿ ವಿನಂತಿ
01/01/2025, 12:42
ಮಂಗಳೂರು(reporterkarnataka.com): ರಿಪೋರ್ಟರ್ ಕರ್ನಾಟಕ ಸಂಸ್ಥೆಯ ಆರಂಭದಲ್ಲಿ ಸ್ಪೆಷಲ್ ಕರೆಸ್ಪಾಡೆಂಟ್ ಹಾಗೂ ಸಿಇಒ(ಚೀಫ್ ಎಕಾನಮಿಕ್ ಆರ್ಗನೈಝರ್)- ಜಾಹೀರಾತು ವಿಭಾಗದಲ್ಲಿದ್ದ ವಿವೇಕ್ ನಾಯಕ್ ಅವರು ನಮ್ಮ ಬಳಗದಲ್ಲಿ ಇಲ್ಲ.
ಸೇವೆಯಿಂದ ಮುಕ್ತಗೊಳಿಸಿದ ಬಳಿಕ ವಿವೇಕ್ ನಾಯಕ್ ಅವರಲ್ಲಿ ಹಲವು ಬಾರಿ ಸಂಸ್ಥೆಯ ಐಡೆಂಟಿಟಿ ಕಾರ್ಡ್ ವಾಪಸ್ ಮಾಡುವಂತೆ ಮೊಬೈಲ್ ಫೋನ್ ಹಾಗೂ ವಾಟ್ಸಾಪ್ ಮೆಸೇಜ್ ಮೂಲಕ ವಿನಂತಿಸಿದರೂ ಅವರು ಐಡಿ ಕಾರ್ಡ್ ವಾಪಸ್ ಕೊಡದೆ ವಂಚಿಸಿದ್ದಾರೆ. ಇದೀಗ ವಿವೇಕ್ ನಾಯಕ್ ಅವರು ರಿಪೋರ್ಟರ್ ಕರ್ನಾಟಕದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಆದುದರಿಂದ ರಿಪೋರ್ಟರ್ ಕರ್ನಾಟಕ ಹೆಸರಿನಲ್ಲಿ ಸಾರ್ವಜನಿಕರು ಯಾರೂ ಅವರ ಜತೆ ಹಣಕಾಸಿನ ವ್ಯವಹಾರ ಅಥವಾ ಇತರ ಯಾವುದೇ ವ್ಯವಹಾರ ಮಾಡಬಾರದಾಗಿ ವಿನಂತಿ.