ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ರಾಯಚೂರು ಜಿಲ್ಲೆ ಮುಖ್ಯ ವರದಿಗಾರನಾಗಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ನೇಮಕ
28/03/2023, 22:40
ರಿಪೋರ್ಟರ್ ಕರ್ನಾಟಕ(reporterkarnataka.com) ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆಯ ರಾಯಚೂರು ಜಿಲ್ಲೆಯ ಪ್ರಧಾನ ವರದಿಗಾರನಾಗಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರನ್ನು ನೇಮಿಸಲಾಗಿದೆ.
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರು ಕಳೆದ ಎರಡು ವರ್ಷಗಳಿಂದ ರಿಪೋರ್ಟರ್ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಿಪೋರ್ಟರ್ ಕರ್ನಾಟಕಕ್ಕೆ ಅವರು ನೀಡಿದ ಅನುಪಮ ಕೊಡುಗೆಯ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾ ಮುಖ್ಯ ವರದಿಗಾರನಾಗಿ ಬಡ್ತಿ ನೀಡಿ ಗೌರವಿಸಲಾಗಿದೆ. ವಿರೂಪಾಕ್ಷಯ್ಯ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮಸ್ಕಿ ತಾಲೂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಸಾಮಾಜಿಕ ಹೋರಾಟದ ಮುಂಚೋಣಿಯ ಪತ್ರಕರ್ತರಲ್ಲಿ ಅವರು ಒಬ್ಬರಾಗಿದ್ದಾರೆ.
ಇವರು ರಾಯಚೂರು ಜಿಲ್ಲಾ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ವಿಜೇತರೂ ಹೌದು.
ಸುದ್ದಿ ಹಾಗೂ ಜಾಹೀರಾತಿಗಾಗಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಮೊಬೈಲ್ ಸಂಖ್ಯೆ 9880174902 ಸಂಪರ್ಕಿಸಿ.
….














