ಇತ್ತೀಚಿನ ಸುದ್ದಿ
ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ದಂಧೆ: ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟ; 6 ಮಂದಿ ಪೊಲೀಸ್ ವಶಕ್ಕೆ
18/05/2021, 17:48
ಕೋಲಾರ(reporterkarnataka news) : ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ರೆಮಿಡಿಸಿವರ್ ಇಂಜೆಕ್ಷನ್ ಕಾಳ ಸಂತೆಯಲ್ಲಿ ಮಾರಾಟ ದಂಧೆ ನಗರದಲ್ಲಿಯೂ ನಡೆದಿದ್ದು , ಕಳೆದ ರಾತ್ರಿ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ರೆ ಮಿಸಿವರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ .
ಕಳೆದ ಒಂದು ತಿಂಗಳಿಂದ ಕಾಳಸಂತೆ ಯಲ್ಲಿ ಇಂಜೆಕ್ಷನ್ ಮಾರಾಟವನ್ನು ಇವರು ನಡೆಸುತ್ತಿದ್ದರೆನ್ನಲಾಗಿದ್ದು , ಒಂದು ಇಂಜೆಕ್ಷನ್ ಸುಮಾರು 30 ಸಾವಿರ ರೂಪಾಯಿಗೆ ಮಾರಾಟ ಮಾಡುವ ಮೂಲಕ ಸಾವಿನಲ್ಲೂ ದುಡ್ಡು ಮಾಡುವ ಅಮಾನವೀಯ ದಂಧೆ ನಡೆಸುತ್ತಿದ್ದರೆನ್ನಲಾಗಿದೆ. .ಜಾಲದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ವೈದ್ಯರು ಇರುವ ಶಂಕೆ ಇದ್ದು , ವಿಚಾರಣೆಗೆ ಕರೆತಂದವರನ್ನು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ಪೊಲೀಸರು ಕೂಲಂಕುಷ ವಿಚಾರಣೆ ನಡೆಸುತ್ತಿದ್ದಾರೆ.
ಆದರೆ , ರಾಜಕೀಯ ಪ್ರಭಾವ ಬಳಸಿಕ ಕೊಂಡು ಬಂಧಿತ ಆರೋಪಿಗಳನ್ನು ರಕ್ಷಿಸಿ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯುತ್ತಿದೆಯೆಂಬ ದೂರುಗಳು ಕೇಳಿ ಬರುತ್ತಿವೆ .