10:46 AM Saturday19 - September 2026
ಬ್ರೇಕಿಂಗ್ ನ್ಯೂಸ್
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:…

ಇತ್ತೀಚಿನ ಸುದ್ದಿ

ಬಿಡುಗಡೆ ಆಯ್ತು ‘ಪಯಣ್’ ಕೊಂಕಣಿ ಸಿನಿಮಾ ಟ್ರೈಲರ್ ಮತ್ತು ಆಡಿಯೊ: ಇದು ಸಂಗೀತಗಾರನ ಹೋರಾಟದ ಕಥೆ

20/08/2024, 22:14

ಮಂಗಳೂರು(reporterkarnataka.com):ʻಸಂಗೀತ್ ಘರ್ ಪ್ರೊಡಕ್ಶನ್ಸ್ʼ ಬ್ಯಾನರಿನಡಿಯಲ್ಲಿ ತಯಾರಾಗಿರುವ ‘ಪಯಣ್’ ಎಂಬ ಭಿನ್ನ ಹೆಸರಿನ ಕೊಂಕಣಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಹಾಗೂ ಆಡಿಯೊ ಇದೀಗ ಬಿಡುಗಡೆ ಆಗಿದ್ದು, ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಜೊತೆಗೆ, ಉತ್ತಮ ಸಂದೇಶ, ಥ್ರಿಲ್ಲರ್ ಅಂಶಗಳನ್ನು ಸಹ ಕತೆ ಒಳಗೊಂಡಿದೆ.
ಆಡಿಯೊ Spotify, Apple Music, iTunes, Amazon, Pandora, Deezer, Tidal, iHeartRadio, Claro Música, Saavn, Boomplay, Anghami, NetEase, Tencent, Qobuz, Joox, Kuack Media, Adaptr, Flo, MediaNet ಗಳಲ್ಲಿ ಲಭ್ಯವಿದೆ. ‘ಪಯಣ್’ ಸಿನಿಮಾ ಸಪ್ಟೆಂಬರ್ 20ಕ್ಕೆ ತೆರೆ ಕಾಣಲಿದೆ.
ತನ್ನ ಹೆಸರಿನಿಂದ, ಹಾಡುಗಳಿಂದ ಕುತೂಹಲ ಕೆರಳಿಸಿರುವ ‘ಪಯಣ್’ ಸಿನಿಮಾದ ಟ್ರೈಲರ್ ಆಗಸ್ಟ್ 18 ರಂದು ಭಾರತ್ ಸಿನೆಮಾದಲ್ಲಿ ಬಿಡುಗಡೆ ಮಾಡಲಾಯಿತು. ʻದಾಯ್ಜಿವರ್ಲ್ಡ್ʼ ಸಮೂಹ ಮಾಧ್ಯಮದ ಸ್ಥಾಪಕ, ಚಲನಚಿತ್ರ ನಟ ವಾಲ್ಟರ್ ನಂದಳಿಕೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ʻಕೊಂಕಣಿ ನಾಟಕ್ ಸಭಾʼ ಇದರ ಅಧ್ಯಕ್ಷ ವಂ| ರೊಕಿ ಡಿʼಕುನ್ಹಾ ಆಶೀರ್ವಚನ ಮಾಡಿದರು.


ಟ್ರೈಲರ್ ಬಿಡುಗಡೆ ಮಾಡಿದ ನಟ ನಂದಳಿಕೆ ಅವರು, ‘ಸಿನಿಮಾದ ಟ್ರೈಲರ್ ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಸಸ್ಪೆನ್ಸ್ ಜೊತೆಗೆ ಒಂದೊಳ್ಳೆ ಸಂದೇಶ ಇದೆ ಎಂಬುದು ತಿಳಿದು ಬರುತ್ತಿದೆ. ಕೊಂಕಣಿ ಸಿನಿಮಾ ರಂಗದಲ್ಲಿ ಇದೊಂದು ಮೈಲಿಗಲ್ಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲರೂ ದಯವಿಟ್ಟು ಸಿನಿಮಾ ನೋಡಿ ಆಶೀರ್ವದಿಸಿ’ ಎಂದರು.
‘ಪಯಣ್’ ಸಿನಿಮಾವನ್ನು ಜೊಯೆಲ್ ಪಿರೇರಾ ನಿರ್ದೇಶನ ಮಾಡಿದ್ದಾರೆ. ಪರಿಕಲ್ಪನೆ ಮತ್ತು ಹಾಡುಗಳು: ಮೆಲ್ವಿನ್ ಪೆರಿಸ್, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ, ಶೈನಾ ಡಿʼಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಮತ್ತಿತರರಿದ್ದಾರೆ. ತಾಂತ್ರಿಕ ವರ್ಗ- ಛಾಯಾಗ್ರಹಣ: ವಿ. ರಾಮಾಂಜನೆಯ; ಸಂಕಲನ: ಮೆವಿನ್ ಜೊಯೆಲ್ ಪಿಂಟೊ. ಸಂಗೀತ: ರೋಶನ್ ಡಿʼಸೋಜಾ, ಆಂಜೆಲೊರ್; ನಿರ್ಮಾಪಕಿ: ನೀಟ ಜೋನ್ ಪೆರಿಸ್.

ಇತ್ತೀಚಿನ ಸುದ್ದಿ

ಜಾಹೀರಾತು