2:00 AM Saturday28 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ರೆಡ್ಡಿ ಪಟಾಲಂ ರಾಜಕೀಯವಾಗಿ ಬೆಳೆಯಲು ಅವಕಾಶ ಬೇಡ: ಮುಖ್ಯಮಂತ್ರಿ ಸಿದ್ದರಾಮಯ್ಯ

08/11/2024, 19:41

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ನಿಮಗೆ ಕೈ ಮುಗಿದು ಕೇಳುತ್ತೇನೆ, ಜನಾರ್ದನ ರೆಡ್ಡಿ ಪಟಾಲಂ ರಾಜಕೀಯ ಬೆಳೆಯಲು ಅವಕಾಶ ಬೇಡ. ಇದು ಸಂಡೂರು ಉಪ ಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತು.
ಬನ್ನಿಹಟ್ಟಿ ಸಮಾವೇಶದಲ್ಲಿ ಶುಕ್ರವಾರ ಭಾಷಣ ಮಾಡಿದ ಅವರು, ಇದು ಉಪ ಚುನಾವಣೆ ಆದರೂ ಬಹಳ ಮಹತ್ವದ ಚುನಾವಣೆ. ಬಿಜೆಪಿಯವರು ಸುಳ್ಳು ಹೇಳಿ, ಹಣ ಖರ್ಚು ಮಾಡಿ ಸಂಡೂರು ಗೆಲ್ಲಲು ಯೋಜನೆ ಮಾಡಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಯಾರು, ಏನು ಎಂದು ನಿಮಗೆಲ್ಲಾ ಗೊತ್ತಿದೆ. ಬಳ್ಳಾರಿಯನ್ನ ರಿಪಬ್ಲಿಕ್ ಬಳ್ಳಾರಿ ಮಾಡದಂತವರು. ಅಕ್ರಮ ಗಣಿಗಾರಿಕೆ ಮಾಡಿ ಲೂಟಿ ಮಾಡಿದಂತವರು. ಈ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆಂದು ಜವಾಬ್ದಾರಿ ತಗೊಂಡಿದ್ದಾರೆ. ಜನಾರ್ದನ ರೆಡ್ಡಿ ಮತ್ತು ಬ್ರದರ್ಸ್ ಸೇರಿ ಬಳ್ಳಾರಿ ಜಿಲ್ಲೆಯನ್ನ ಲೂಟಿ ಮಾಡುತ್ತಿದ್ದರು. ರೆಡ್ಡಿ ಬ್ರದರ್ಸ್, ರಾಮುಲು ಸೇರಿ ಇಲ್ಲಿ ಬಡತನ ಇದೆ, ಶೋಷಣೆ ಇತ್ತು. ಅವರ ಪಟಾಲಂ ಬಳ್ಳಾರಿ ಜಿಲ್ಲೆಯನ್ನ ಹಾಳು ಮಾಡಿದ್ದಾರೆ, ಅಕ್ರಮ ಗಣಿಗಾರಿಕೆ ಮಾಡಿದ್ದಾರೆ, ಗುಡ್ಡಗಳನ್ನು ನೆಲಸಮ ಮಾಡುತ್ತಿದ್ದಾರೆಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು. ಇವರ ಕಪಿಮುಷ್ಟಿಯಿಂದ ಬಳ್ಳಾರಿಯನ್ನ ತಪ್ಪಿಸಬೇಕಿತ್ತು.
ನಾನೊಮ್ಮೆ ಅಲ್ಲಿಪುರಕ್ಕೆ ಬಂದಿದ್ದೆ. ಯಾರದೋ ಮನೆಯಲ್ಲಿ ನೀರು ಕುಡಿಯುವುದಕ್ಕೆ ಹೋಗಿದ್ದೆ. ಆಗ ಆ ಮನೆಯವರು ನೀವು ಬಂದಿದ್ದು ಯಾರಿಗೂ ಹೇಳಬೇಡಿ ಸರ್ ಎಂದರು. ಅವರು ಬೇಕಾ ಮತ್ತೇ? ಅವರ ಅಭ್ಯರ್ಥಿ ಗೆಲ್ಲಬೇಕಾ ಮತ್ತೆ ಎಂದ ಸಿಎಂ ಪ್ರಶ್ನಿಸಿದರು.
ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲೀನಿಕ್‌ಗಳು ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲವೂ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಬಿಜೆಪಿ ಅವಧಿಯಲ್ಲಿ ಲೂಟಿ ಲೂಟಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ.
ಹೈದ್ರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿ ಮಾಡಿದ್ದು ಕಾಂಗ್ರೆಸ್ . ನಮ್ಮ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ , ಧರಂಸಿಂಗ್ ಮತ್ತು ನಾನು ಸೇರಿ 371 ಜೆ ಜಾರಿ ಮಾಡಲು ಕಾರಣ. ಬಳಿಕ ನಾನು ಮುಖ್ಯಮಂತದರಿಯಾಗಿ 5000 ಕೋಟಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಿದೆ. 371 ಜೆ ಬಂದಿದ್ದರಿಂದ ಇಲ್ಲಿನ ಮಕ್ಕಳು ಎಂಜಿನಿಯರ್ ಗಳಾದರು. ಡಾಕ್ಟರ್ ಗಳಾದರು. ಸರ್ಕಾರಿ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಲು ಅವಕಾಶವಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು