ಇತ್ತೀಚಿನ ಸುದ್ದಿ
ಆರ್ ಸಿಬಿ ಗೆಲುವು ಅತೀವ ಸಂತೋಷ ತಂದಿದೆ; ವಿಧಾನಸೌಧ ಎದುರು ಇಂದು ತಂಡಕ್ಕೆ ಸನ್ಮಾನ: ಸಿಎಂ
04/06/2025, 14:16

ಬೆಂಗಳೂರು(reporterkarnataka.com): ಐಪಿಎಲ್ ಹದಿನೆಂಟನೇ ಆವೃತ್ತಿಯನ್ನು ಗೆದ್ದಿರುವ ಆರ್.ಸಿ.ಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಅತೀವ ಹೆಮ್ಮೆಪಡುವಂಥ ಕೆಲಸ ಆರ್.ಸಿ.ಬಿ ಮಾಡಿದ್ದು, ವಿಧಾನಸೌಧದ ಮೆಟ್ಟಿಲುಗಳಲ್ಲಿ ಇಂದು ತಂಡಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.