3:10 AM Tuesday7 - January 2025
ಬ್ರೇಕಿಂಗ್ ನ್ಯೂಸ್
ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ

ಇತ್ತೀಚಿನ ಸುದ್ದಿ

ರಾಯಣ್ಣ ಬ್ರಿಗೇಡ್ ಹೋಯ್ತು, ಕ್ರಾಂತಿ ವೀರ ಬ್ರಿಗೇಡ್ ಬಂತು!: ಹಿಂದುತ್ವ, ಹಿಂದುಳಿದವರ ಪರ ಧ್ವನಿ ಎತ್ತಲು ಕೆ.ಎಸ್. ಈಶ್ವರಪ್ಪ ಹೊಸ ಅಸ್ತ್ರ

07/01/2025, 21:56

ಬೆಂಗಳೂರು(reporterkarnataka.com); ಬಿಜೆಪಿಯಲ್ಲಿದ್ದುಕೊಂಡು ರಾಯಣ್ಣ ಬ್ರಿಗೇಡ್ ಆರಂಭಿಸಿ ಸಡ್ಡು ಹೊಡೆದಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇದೀಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಸಂಘಟನೆಯೊಂದಿಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ.
ಎಲ್ಲಾ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಶುರುವಾಗಿದ್ದು, ಈಶ್ವರಪ್ಪ ಈ ಸಂಘಟನೆಯ ಸಂಚಾಲಕರಾಗಲಿದ್ದಾರೆ. ಹಿಂದುಗಳ ಪರವಾಗಿ ಮತ್ತು ಹಿಂದುಳಿದವರ ಪರವಾಗಿ ಈ ಬ್ರಿಗೇಡ್ ಧ್ವನಿ ಎತ್ತಲಿದೆಯಂತೆ.
ನಗರದ ಖಾಸಗಿ ಹೋಟೆಲ್‌ ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದ ಈಶ್ವರಪ್ಪ ಬ್ರಿಗೇಡ್ ಕುರಿತಾಗಿ ಮಾಹಿತಿ ಹಂಚಿಕೊಂಡರು. ಫೆಬ್ರವರಿ 4 ರಂದು ಕ್ರಾಂತಿ ವೀರ ಬ್ರಿಗೇಡ್ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ.
ಹಿಂದೂಗಳು ಮತ್ತು ಶೋಷಿತರು ಒಂದಾಗಬೇಕು ಎಂಬ ಉದ್ದೇಶದೊಂದಿಗೆ ಈ ಸಂಘಟನೆ ಕಾರ್ಯನಿರ್ವಹಲಿದ್ದು, ಈಶ್ವರಪ್ಪ ಅವರ ಪುತ್ರ ಕಾಂತೇಶ್ ಕಾರ್ಯಾಧ್ಯಕ್ಷರಾಗಿದ್ದಾರೆ. ಅಲ್ಲದೆ, ಗೂಳಿಹಟ್ಟಿ ಶೇಖರ್, ಮುಕುಡಪ್ಪ ಅವರು ಸಂಚಾಲಕರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.
ಕ್ರಾಂತಿ ವೀರ ಬ್ರಿಗೇಡ್ ಕುರಿತಾಗಿ ಮಾತನಾಡಿದ ಈಶ್ವರಪ್ಪ, ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ. ಹಿಂದೆ ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಅವತ್ತು ಇತ್ತು, ಇವತ್ತು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ. ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಅಂತಾ ಇಲ್ಲಿ ಪ್ರಶ್ನೆ ಇಲ್ಲ. ಫೆಬ್ರವರಿ 4 ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ ಎಂದರು.
*ನಾನು ಅಂದು ಹೇಳಿದ್ದು ಇಂದು ಬಿಜೆಪಿಯಲ್ಲಿ ಚರ್ಚೆ ಆಗ್ತಿದೆ:*
ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಈಶ್ವರಪ್ಪ, ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ವೇಳೆ ಯಾವ ಕಾರಣಕ್ಕೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಯಾವ ವಿಚಾರ ಹೇಳಿದ್ದೇನೋ ಅದೇ ವಿಚಾರವಾಗಿಯೇ ಇಂದು ಬಿಜೆಪಿಯಲ್ಲಿ ಚರ್ಚೆ ಆಗುತ್ತಿದೆ.
ಇದು ತಾತ್ಕಾಲಿಕ ಗೊಂದಲ ಬಗೆಹರಿಯುತ್ತದೆ ಎಂದು ಪರೋಕ್ಷವಾಗಿ ಕುಟುಕಿದರು.
ಮುಂದಿನ ರಾಜಕೀಯ ನಡೆದ ಕುರಿತಾದ ಪ್ರಶ್ನೆಗೆ, ನನ್ನನ್ನು ಬಿಜೆಪಿ ಹೈಕಮಾಂಡ್ ಸೇರಿಸಲು ಯೋಚನೆ ಮಾಡಿದರೆ, ಹೋಗಬೇಕಾ ಅಂತಾ ನಾನೂ ಯೋಚನೆ ಮಾಡಬೇಕು. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷವನ್ನು ಸೇರ್ಪಡೆ ಆಗುವುದಿಲ್ಲ, ಬಿಜೆಪಿ ನನ್ನ ತಾಯಿ. ಇದೀಗ ಆರಂಭ ಆಗಲಿರುವ ಕ್ರಾಂತಿ ವೀರ ಬ್ರಿಗೇಡ್ ಬಿಡಿ ಎಂದು ಮೋದಿ ಯಾವುದೇ ಕಾರಣಕ್ಕೂ ಹೇಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಹಿಂದುತ್ವ ಸಿದ್ದಾಂತ ದೂರ ಹೋಗಿದೆ, ಹೊಂದಾಣಿಕೆ ರಾಜಕೀಯ ಹೆಚ್ಚಾಗಿದೆ. ಹೊಂದಾಣಿಕೆ ರಾಜಕೀಯ ಶುದ್ದೀಕರಣ ಆಗಲಿ ಎಂಬ ಆಸೆ ನನ್ನದು ಇದೆ, ಅನೇಕ ಮುಖಂಡರು ಆಗಿದೆ. ಬಿಜೆಪಿ ಶುದ್ದೀಕರಣ ಆಗುತ್ತದೆ ಎಂದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ ಎಂದರು.
ಶಿಕಾರಿಪುರದಲ್ಲಿ ವಿಜಯೇಂದ್ರ ಅವರ ಗೆಲುವು ನಮ್ಮ ಭಿಕ್ಷೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕಥೆ ಏನಾಗುತ್ತಿತ್ತು ಅಂತಾ ವಿಜಯೇಂದ್ರ‌ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಅಂತಾ ತಾನೇ ಅರ್ಥ? ಇದು ಹೋಂದಾಣಿಕೆ ರಾಜಕೀಯ ಅಲ್ಲದೇ ಇನ್ನೇನು?
ರಾಜಕೀಯ ಬೆತ್ತಲೆ ಇದಾಗಿದೆ ಎಂದು ಬಿಎಸ್‌ವೈ ಕುಟುಂಬದ ಬಗ್ಗೆ ಅಸಮಾಧಾನ ಹೊರಹಾಕಿದರು.
*ನನಗೊಂದು ನ್ಯಾಯ ಪ್ರಿಯಾಂಕ್‌ ಗೆ ಒಂದು ನ್ಯಾಯಾನಾ?:*
ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಾನು ರಾಜೀನಾಮೆ ಕೊಟ್ಟಿದ್ದೆ. ಆದರೆ ಇದೀಗ ಸಚಿನ್ ಪಾಂಚಾಳ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ನಾನು ರಾಜೀನಾಮೆ ಕೊಡುವಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಬೇಡ ತಡೀರಿ ಅಂದಿದ್ದರು. ಈಗ ಬಿಜೆಪಿಯವ್ರು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಸೌಂಡ್ ಮಾಡಬೇಕಿತ್ತು. ಅವರು ಸೌಂಡ್ ಮಾಡಿದ್ರೂ ಮಾಧ್ಯಮದವರು ಯಾಕೆ ಸರಿಯಾಗಿ ತೋರಿಸ್ಲಿಲ್ವೋ ಗೊತ್ತಿಲ್ಲ. ರಾಜಕೀಯ ಪಕ್ಷವಾಗಿ ಬಿಜೆಪಿ ಹೋರಾಟ ಮಾಡಿದೆ. ನಾನು ಬಿಜೆಪಿಯನ್ನು ಸಮರ್ಥನೆ ಮಾಡುತ್ತಿಲ್ಲ, ಅವರ ಹೋರಾಟ ಅವ್ರು ಮಾಡಿದ್ದಾರೆ. ಆದ್ರೆ ಪ್ರಿಯಾಂಕ್ ಖರ್ಗೆ ಉತ್ತರ ಏನು ಕೊಟ್ರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದುಕೊಳ್ಳಿ. ನಿರ್ದೋಷಿಯಾಗಿ ಹೊರ ಬಂದರೆ ಒಂದು ನಿಮಿಷವೂ ಕಾಯದೇ ವಾಪಸ್ ಮಂತ್ರಿ ಮಾಡಲಿ ಎಂದು ಸವಾಲು ಹಾಕಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಡೆತ್ ನೋಟ್ ಟೈಪ್ ಮಾಡಲಾಗಿತ್ತು, ಆತನ‌ ಸಹಿಯೂ ಇರಲಿಲ್ಲ. ಇಲ್ಲಿ ಸಚಿನ್ ಡೆತ್ ನೋಟಿನಲ್ಲಿ ಅವನದ್ದೇ ಕೈಬರಹ ಅಂತ ಎಫ್‌ಎಸ್‌ಎಲ್ ವರದಿ ಬಂದಿದೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲೇಬೇಕು, ಇವತ್ತೋ, ನಾಳೆಯೋ ಕೊಡಬೇಕು. ನಾನು ಸಂತೋಷ್ ಪಾಟೀಲ್ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದಕ್ಕೆ ನನ್ನನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಹೀಗೆ ಪ್ರಿಯಾಂಕ್ ಖರ್ಗೆಯೂ ರಾಜೀನಾಮೆ ಕೊಟ್ರೆ ಜನ ಮೆಚ್ಚುತ್ತಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು