2:45 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ರಾಯಚೂರಿನ ಚಿತ್ತಾಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

05/10/2023, 13:07

ಶರಣು ಗೋರೆಬಾಳ ಸಿಂಧನೂರು ರಾಯಚೂರು

info.reporterkarnataka@gmail.com

ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರವನ್ನು ಲಿಂಗಸನೂರು ತಾಲೂಕಿನ ಚಿತ್ತಾಪುರ ಗ್ರಾಮ ಪಂಚಾಯಿತಿಗೆ ಪ್ರದಾನ ಮಾಡಲಾಯಿತು.
ಗ್ರಾಮ ಪಂಚಾಯತ ಗಳ ಪ್ರಗತಿಯನ್ನು ಆಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ ರಾಜ್ಯ ಸರಕಾರ ಕೊಡ ಮಾಡುವ 2022-23 ನೇ ಸಾಲಿನ “ಗಾಂಧಿ ಗ್ರಾಮ” ಪುರಸ್ಕಾರದ ಗರಿ ಲಿಂಗಸೂರು
ತಾಲೂಕಿನ ಚಿತ್ತಾಪುರ ಗ್ರಾಮ ಪಂಚಾಯತ್ ಮುಡಿಗೇರಿಸಿಕೊಂಡ ಪ್ರಯುಕ್ತ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ , ಉಪಾಧ್ಯಕ್ಷ ರತ್ನಮ್ಮ,ಪಿಡಿಓ ಶಶಿಕಲಾ ಪಾಟೀಲ್ ಅವರಿಗೆ ಗ್ರಾಮಿಣಾಭಿವೃದ್ದಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಿದರು.
ಪಂಚಾಯತ್ ರಾಜ್ ವ್ಯವಸ್ಥೆಯಡಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವ ನಿಟ್ಟಿನಲ್ಲಿ 2013-14ನೇ ಸಾಲಿನಿಂದ ಗ್ರಾಮ ಪಂಚಾಯತ ಸಾಧನೆಗಳಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ಗಳ ಮೂಲಕ ಮೌಲ್ಯಮಾಪನ ಮಾಡಿ,ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯತ್ ಗಳಲ್ಲಿ ಪ್ರಶಸ್ತಿಗಾಗಿ ಗೂಗಲ್ ತಂತ್ರಾಂಶದ ಮೂಲಕ ಅರ್ಜಿ ಸ್ವೀಕರಿಸಿ ಅವುಗಳಲ್ಲಿ ತಾಲೂಕೀಗೆ ಒಂದರಂತೆ ಗ್ರಾಮ ಪಂಚಾಯತ ಆಯ್ಕೆ ಮಾಡಿ, ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ ಮಾಡುವ ಜೊತೆಗೆ 5.00 ಲಕ್ಷ ರೂ. ಪ್ರೋತ್ಸಾಹ ನೀಡಿ ಗೌರವಿಸಲಾಗುತ್ತದೆ.

ಪುರಸ್ಕಾರ ಖುಷಿ ತಂದಿದೆ : ಗಾಂಧಿ ಗ್ರಾಮ ಪುರಸ್ಕಾರ ಖುಷಿ ತಂದಿದೆ. ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನಾಗರಿಕರ ಸಹಕಾರದೊಂದಿಗೆ ಅನೇಕ ಅಭಿವೃದ್ದಿ ಕಾರ್ಯಗಳು ಕೈಗೊಂಡಿದ್ದು ,ಅಭಿವೃದ್ದಿ ಪಥದತ್ತ ಗ್ರಾಪಂ ಮುನ್ನಡೆಯುತ್ತಿದೆ. ಈ ನಡುವೆ ಪುರಸ್ಕಾರ ದೊರೆತಿದ್ದು ಮತ್ತಷ್ಟು ನಾವುಗಳು ಉತ್ಸಾಹದಿಂದ ಕೆಲಸ ಮಾಡಲು ಉತ್ತೆಜಿಸಿದಂತಾಗಿದೆ ಎಂದು ಗ್ರಾಪಂ ಪಿಡಿಒ
ಶಶಿಕಲಾ ಪಾಟೀಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು