ಇತ್ತೀಚಿನ ಸುದ್ದಿ
ರಾಯಚೂರಿಗೆ ಬೋಯಿಂಗ್ ಆಸ್ಪತ್ರೆ ಮಂಜೂರು ಮಾಡಿ: ಮುಖ್ಯಮಂತ್ರಿಗೆ ಶಾಸಕ ವೆಂಕಟರಾವ್ ನಾಡಗೌಡ ಪತ್ರ
30/05/2021, 10:32

ಸಿಂಧನೂರು( reporterkarnataka news):ರಾಯಚೂರಿಗೆ ಬೋಯಿಂಗ್ ಆಸ್ಪತ್ರೆ ಮಂಜೂರು ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದೆನೆಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.
ಈ ಹಿಂದೆ ರಾಯಚೂರು ಜಿಲ್ಲೆಗೆ ಬಂದಂತಹ ಐಐಟಿ ಯನ್ನು ಧಾರವಾಡ ಕ್ಕೆ ಮತ್ತು ಕಲಬುರಗಿ ಗೆ ಇಎಸ್ಐ ಹಾಗೂ ಜೈದೇವ ಹೃದ್ರೋಗ ಆಸ್ಪತ್ರೆಯನ್ನು ನೀಡಲಾಗಿದೆ. ಆದರೆ ರಾಯಚೂರು ಜಿಲ್ಲೆಗೆ ಮಾತ್ರ ಯಾವುದೇ ಆಸ್ಪತ್ರೆಗಳನ್ನು ನೀಡುತ್ತಿಲ್ಲ. ಅದಕ್ಕಾಗಿ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಬೋಯಿಂಗ್ ಆಸ್ಪತ್ರೆಯನ್ನು ಮಂಜೂರು ಮಾಡಿ ಎಂದರು.