2:31 AM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಪೊಲೀಸ್ ಸಿಬ್ಬಂದಿಗಳು ಜನಸ್ನೇಹಿಯಾಗಲು ಕಮಿಷನರ್ ಶಶಿಕುಮಾರ್ ಕರೆ

15/01/2023, 09:31

ಚಿತ್ರ/ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಹಾಗೂ ಫಾರಂ ಫಿಝ ಮಾಲ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023 ಉದ್ಘಾಟನಾ ಸಮಾರಂಭ ಫಾರಂ ಫಿಝ ಮಾಲ್ ನಲ್ಲಿ ಜರುಗಿತು.


ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಮಾರಂಭ ಉದ್ಘಾಟಿಸಿದರು.



ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿಗಳು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಸಾರ್ವಜನಿಕರು ಆದರ್ಶ ನಾಗರಿಕರಾಗಿ ಬದುಕುವುದು ಮಂಗಳೂರು ಜನತೆಯಿಂದಲೇ ಪ್ರಾರಂಭಿಸಲಿ. ಕಾನೂನು ಪಾಲನೆ ಮಾಡಿ ಸಂಚಾರ ನಿಯಮವನ್ನು ಪ್ರೀತಿಸಿ, ರೂಡಿಸಿಕೊಳ್ಳಿ. ನಿಮ್ಮ ಪ್ರಾಣವನ್ನು ಉಳಿಸುವ ಸ್ವಾರ್ಥಿಗಳಾಗಿ ವಾಹನ ಚಲಾವಣೆ ಸಮಯದಲ್ಲಿ ಜಾಗರೂಕರಾಗಿರಿ. ಅಪಘಾತ ಮುಕ್ತ ನಗರವನ್ನಾಗಿಸುವಲ್ಲಿ ಕೈ ಜೋಡಿಸೋಣ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್, ಮಂಗಳೂರು ನಗರ ಸಿ.ಎ.ಆರ್ ಉಪ ಪೊಲೀಸ್ ಆಯುಕ್ತ ಪಿ. ಉಮೇಶ್, ಡಿಸಿಪಿ ದಿನೇಶ್ ಕುಮಾರ್ ಹಾಗೂ ವಿಶೇಷ ಆಹ್ವಾನಿತರಾಗಿ ದೇರಳಕಟ್ಟೆ ಯೆನಾಪೋಯ ಡೆಂಟಲ್ ಕಾಲೇಜ್ ಮ್ಯಾಕ್ಸಿಲೋ ಫೆಸಿಯಲ್ ಸರ್ಜಾನ್, ಪ್ರೊಫೆಸರ್ ಅಂಡ್ ಹೆಚ್. ಓ.ಡಿ ಡಾ. ಜಗದೀಶ್ ಚಂದ್ರ, ಮಂಗಳೂರು ಫೀಝ ಮಾಲ್ ನ ಸೆಂಟರ್ ಹೆಡ್ ಅರವಿಂದ ಶ್ರೀ ವಾತ್ಸವ, ಉಪಸ್ಥಿತರಿದ್ದರು.


ಮಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ಎಸಿಪಿ.ಗೀತಾ ಕುಲಕರ್ಣಿ ಕಾರ್ಯಕ್ರಮದ ಆಯೋಜಕರಾಗಿದ್ದರು.
ಮಂಗಳೂರು ಪೂರ್ವ ಸಂಚಾರ ವಿಭಾಗ ಇನ್ಸ್ಪೆಕ್ಟರ್ ಗೋಪಾಲ್ ಕೃಷ್ಣಭಟ್ ಸೇರಿದಂತೆ ವಿವಿಧ ಟ್ರಾಫಿಕ್ ಠಾಣಾ ಇನ್ಸ್ಪೆಕ್ಟರ್ ಗಳು, ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರವೀಶ್ ಕುಮಾರ್,ದಿನಕರ್,ಪೊಲೀಸ್ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಸಂಚಾರಪಾಲನೆಯ ಭಿತ್ತಿಚಿತ್ರಗಳನ್ನು ಅನಾವರಣಗೊಳಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು