ಇತ್ತೀಚಿನ ಸುದ್ದಿ
ರಾಷ್ಟ್ರಿಯ ಲೋಕ್ ಅದಾಲತ್’ 905 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ
24/08/2024, 18:01
ಗಣೇಶ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 905 ಪ್ರಕರಣಗಳು ಈಗಾಗಲೇ ರಾಜಿ ಸಂಧಾನದ ಮೂಲಕ ಮುಕ್ತವಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.
ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಎರಡು
ಜಿಲ್ಲೆಗಳಲ್ಲಿ 31 ನ್ಯಾಯಾಲಯಗಳಲ್ಲಿ ಒಟ್ಟು 59434 ಪ್ರಕರಣಗಳು ಬಾಕಿ ಇದ್ದು ಅವುಗಳಲ್ಲಿ ಈಗಾಗಲೇ 4109 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಸಲುವಾಗಿ ಗುರಿತಿಸಲಾಗಿದೆ ಎಂದು ತಿಳಿಸಿದರು.
ಸದರಿ ಮುಕ್ತಾಯವಾದಗಳ ಪ್ರಕರಣಗಳ ಪೈಕಿ 47 ಚೆಕ್ ಬೌನ್ಸ್ ಪ್ರಕರಣಗಳು 8 ಪಾಲು ವಿಭಾಗದ, 6 ಹಣ ವಸೂಲಾತಿ 2 ಬ್ಯಾಂಕ್ ಪ್ರಕರಣಗಳು 4 ಮೋಟಾರು ವಾಹನ ಪರಿಹಾರ ಪ್ರಕರಣಗಳು 11 ಇತರೆ ಸಿವಿಲ್ ಪ್ರಕರಣಗಳು ಸೇರಿವೆ.
ಅದರಂತೆ 150 ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಅರ್ಜಿಗಳು 623 ದಂಡ ವಿಧಿಸಿದ ಮುಕ್ತಾಯಗೊಳಿಸಬಹುದಾದ ಅಪರಾಧಿ ಪ್ರಕರಣಗಳು ಇರುತ್ತವೆ.
14 ಸೆಪ್ಟೆಂಬರ್ ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಈ ಹಿಂದಿನ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನ ಮೂಲಕ ಮುಕ್ತಗೊಳಿಸಿದ 1,25,442 ಪ್ರಕಣಗಳಿಗಿಂತ ಹೆಚ್ಚು ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತ್ ನಲ್ಲಿ ಗುರಿ ಸಾಧಿಸುವ ಹೊಂದಿರುತ್ತೇವೆ ಎಂದು ತಿಳಿಸಿದರು.