ಇತ್ತೀಚಿನ ಸುದ್ದಿ
ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್: ಅಥಣಿ ತಾಲೂಕಿನ ಸಂಗಮೇಶ್ ಕದಂ ಹಾಗೂ ಮಾಂತೇಶ್ ಕದಂಗೆ ಚಿನ್ನದ ಪದಕ
26/08/2024, 17:32
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಸಿರುಗುಪ್ಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನ ಕಟ್ಟಾ ಮತ್ತು ಬಾಕ್ಸಿಂಗ್ ವಿಭಾಗದಲ್ಲಿ ಅಥಣಿ ತಾಲೂಕಿನ ಇಬ್ಬರೂ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಗಮೇಶ್ ಕದಂ ಹಾಗೂ ಮಾಂತೇಶ್ ಕದಂ ಪ್ರಥಮ ಬಹುಮಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಸಂಗಮೇಶ್ ಕದಂ ಕಟ್ಟಾ ವಿಭಾಗದಲ್ಲಿ ಫಸ್ಟ್ ಪ್ರೈಸ್ ಗೋಲ್ಡ್ ಮೆಡಲ್ ಹಾಗೂ ಮಾಂತೇಶ್ ಕದಂ ಕಟ್ಟಾ ಫಸ್ಟ್ ಪ್ರೈಸ್ ಗೋಲ್ಡ್ ಮೆಡಲ್, ಕುಮಿಟೆ ಸೆಕೆಂಡ್ ಪ್ರೈಸ್ ಸಿಲ್ವರ್ ಮೆಡಲ್ ಪಡೆದಿದ್ದಾರೆ.
ಈ ಇಬ್ಬರು ವಿದ್ಯಾರ್ಥಿ ಗಳು ಪ್ರೀತಮ್ ಎಸ್. ಹೊಣಕಂಡಿ, ಸುಮಿತ್ ಹನಕಂಡಿ, ಪ್ರಕಾಶ್ ಲೋನಾರಿ, ಅಲಿ ಅವರ ಶಿಷ್ಯರು.