9:41 PM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ!

05/07/2025, 21:22

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.ಕಂ

ಬಹುಭಾಷಾ ತಾರೆ ಕೊಡಗಿನ ರಶ್ಮಿಕಾ ಮಂದಣ್ಣ ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಟೀಕೆಗೆ ಗುರಿಯಾಗುತ್ತಾ ಇರುತ್ತಾರೆ. ಈಗ ಅವರು ಅಜ್ಞಾನದ ಹೇಳಿಕೆ ನೀಡಿದ್ದಾರೆ. ಇದರಿಂದ ಅವರು ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ‘ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೆ ಅನಿಸುತ್ತದೆ’ ಎಂದು ಹೇಳಿದ್ದಾರೆ. ಈ ಪೋಸ್ಟ್​ಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದು, ರಶ್ಮಿಕಾ ಮಂದಣ್ಣರವರನ್ನು ಟೀಕಿಸಿದ್ದಾರೆ.
ಕೊಡವ ಸಮುದಾಯದಿಂದ ಬಂದು ಚಿತ್ರರಂಗದಲ್ಲಿ ಮಿಂಚಿದವರ ಹೆಸರನ್ನು ಕೂಡ ನೀಡಲಾಗಿದೆ.
ಮೋಜೋ ಸ್ಟೋರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ರಶ್ಮಿಕಾ ಮಂದಣ್ಣ, ‘ನಮ್ಮ ಕೊಡವ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ಬಹುಶಃ ನಮ್ಮ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ. ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಮಾಡುತ್ತೇನೆ ಎಂದು ನನ್ನ ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ಕೂಡ ಅವರಿಗೆ ತಿಳಿಸಿರಲಿಲ್ಲ’ಎಂದು ಹೇಳಿದ್ದಾರೆ.
ಸದ್ಯ ರಶ್ಮಿಕಾ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಭಾರತ ಚಿತ್ರರಂಗದಲ್ಲಿ ತುಂಬಾನೇ ಖ್ಯಾತಿ ಪಡೆದಿರೋ ಪ್ರೇಮಾ ಅವರು ಕೂಡ ಕೊಡವ ಸಮುದಾಯದವರೇ. ಅವರು ಗಳಿಸಿದ ಖ್ಯಾತಿ ತುಂಬಾನೇ ದೊಡ್ಡದು. ರಶ್ಮಿಕಾ ಹುಟ್ಟುವಾಗ ಪ್ರೇಮಾ ಅವರು ಚಿತ್ರರಂಗಕ್ಕೆ ಬಂದು ಒಂದು ವರ್ಷ ಕಳೆದಿತ್ತು. ಅವರ ಬಗ್ಗೆ ರಶ್ಮಿಕಾ ಗೊತ್ತಿಲ್ಲ ಅನ್ನೋದು ಹಾಸ್ಯಾಸ್ಪದ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ಕೊಡವ ಸಮಯದಾಯದಿಂದ ಚಿತ್ರರಂಗಕ್ಕೆ ಬಂದವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಶ್ವೇತಾ ಚಂಗಪ್ಪ ಹೀಗೆ ಹಲವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಆದರೆ, ರಶ್ಮಿಕಾ ಅವರು ಮಾತ್ರ ತಮ್ಮದೇ ಲೋಕದಲ್ಲಿ ಇದ್ದಾರೆ!
ಈ ಎಲ್ಲಾ ಬೆಳವಣಿಗೆಗಳ ನಡುವೆ ನಟಿ ನಿಧಿ ಸುಬ್ಬಯ್ಯ ಮಾತನಾಡಿ, ಇಂತಹ ಸ್ಟೇಟ್‌ಮೆಂಟ್‌ಗೆಲ್ಲ ನಾನು ರಿಯಾಕ್ಟ್‌ ಮಾಡೋದಿಲ್ಲ. ಇದು ಜಸ್ಟ್‌ ಜೋಕ್.‌ ಅವರು ಏನು ಯೋಚನೆ ಮಾಡಿಕೊಂಡು ಹಾಗೆ ಹೇಳಿದ್ರೋ ಗೊತ್ತಿಲ್ಲ. ಆದರೆ ಅವರು ಹೇಳಿದ್ರು ಅನ್ನೋ ಕಾರಣಕ್ಕೆ ಅದು ನಿಜಾ ಆಗೋದಿಲ್ಲ. ಪ್ರೇಮಾ ಅವರು ದೊಡ್ಡ ಲೆಜೆಂಡ್.‌ ನಾನು ಅವರ ದೊಡ್ಡ ಅಭಿಮಾನಿ. ರೀಷ್ಮಾ ನಾಣಯ್ಯ ಹಾಗೂ ನಾನು ಕೂಡ ಕೊಡಗಿನಿಂದ ಬಂದವರು. ಕೊಡಗು ಸಮುದಾಯದಿಂದ ಬಂದ ಮೊದಲ ಸೂಪರ್‌ ಸ್ಟಾರ್‌ ಪ್ರೇಮಾ ಅವರು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ನಿಧಿ ಸುಬ್ಬಯ್ಯ ಟಾಂಗ್‌ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿಕೆಗೆ ತನಿಷಾ ಕುಪ್ಪಂಡ ಅವರು ಪ್ರತಿಕ್ರಿಯಿಸಿದ್ದು, ಕೆಲವೊಮ್ಮೆ ಕೆಲವೊಂದು ಸ್ಟೇಟ್‌ಮೆಂಟ್‌ಗಳಿಗೆ ನಗಬೇಕೋ ಅಥವಾ ಅಳಬೇಕೋ ಗೊತ್ತಾಗುವುದಿಲ್ಲ. ನಮ್ಮ ಕೊಡವ ಕಮ್ಯೂನಿಟಿಯಲ್ಲಿ ಅಲ್ಲಿಂದ ಬಂದು ರಶ್ಮಿಕಾ ಹೆಸರು ಮಾಡಿದ್ದಾರೆ ಅಂದ್ರೆ ಹೌದು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡ್ತಿದ್ದಾರೆ ಅನ್ನೋದಕ್ಕೆ ಒಬ್ಬ ನಟಿಯಾಗಿ ನನಗೆ ಖುಷಿ ಇದೆ. ಆದರೆ ರಶ್ಮಿಕಾ ಮಂದಣ್ಣ ಅವರೇ ಮೊದಲ ವ್ಯಕ್ತಿ ಆಗಿದ್ರು ಅಂದ್ರೆ ಅವರಿಗೆ ಒಂದು 200 ವರ್ಷ ಆಗಿರಬೇಕು ಏನೋ ಈಗ. ನಮ್ಮಲ್ಲಿ ಬಹಳಷ್ಟು ಹೆಸರು ಮಾಡಿದ ನಟಿ ಪ್ರೇಮಾ ಅವರು ಇದ್ದಾರೆ. ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ, ರೀಷ್ಮಾ ನಾಣಯ್ಯ ಸೇರಿದಂತೆ ಹಲವು ನಟಿಯರು ನಮ್ಮ ಸಮುದಾಯದಿಂದ ಬಂದವರು ಇದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು