10:46 PM Wednesday25 - February 2026
ಬ್ರೇಕಿಂಗ್ ನ್ಯೂಸ್
ಖಾಲಿಯಿರುವ ಹುದ್ದೆಗಳ ಹಂತ ಹಂತವಾಗಿ ಭರ್ತಿ: ಕಾರ್ಕಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ, ಡಿಸಿಎಂ ಕುರ್ಚಿ ಕಾಳಗದಲ್ಲಿ ಬ್ಯುಸಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ

ಇತ್ತೀಚಿನ ಸುದ್ದಿ

ರಶ್ಮಿಕಾ ಮಂದಣ್ಣ – ವಿಜಯ್‌ ದೇವರಕೊಂಡ ವಿವಾಹೋತ್ಸವ: ಕೊಡಗಿನ ಬೆಡಗಿಗೆ ಪ್ರಧಾನಿ ವಿಶೇಷ ಉಡುಗೊರೆ

25/02/2026, 20:37

ನವದೆಹಲಿ(reporterkarnataka.com): ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಮತ್ತು ರೌಡಿ ಬಾಯ್‌ ವಿಜಯ್‌ ದೇವರಕೊಂಡ ಅವರು ನಾಳೆ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ಇಬ್ಬರ ಮದುವೆ ನಡೆಯುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಶ್ಮಿಕಾ ಮತ್ತು ವಿಜಯ್ ಮಂದುವೆಗೆ ಶುಭ ಹಾರೈಕೆ ಬಂದಿದೆ.
ಪತ್ರದ ಮೂಲಕ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಮದುವೆಯನ್ನು ದೈವಿಕ ಸ್ಕ್ರಿಪ್ಟ್‌ ಎಂದು ಕರೆದಿದ್ದಾರೆ.

*ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲಿ ಏನಿದೆ:?*

“ಶ್ರೀಮತಿ ಮಾಧವಿ ಮತ್ತು ಶ್ರೀ ಗೋವರ್ಧನ್ ರಾವ್ ದೇವರಕೊಂಡ ಜೀ (ವಿಜಯ್‌ ದೇವರಕೊಂಡ ಪೋಷಕರು) ಅವರಿಗೆ, ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಈ ಅತ್ಯಂತ ಸಂತಸದ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೂ ನಿಮ್ಮ ಕುಟುಂಬಕ್ಕೆ ಶುಭಾಶಯಗಳು”

*ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!*
“ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದ ಒಂದು ಸುಂದರವಾದ ಹೊಸ ಅಧ್ಯಾಯದ ಆರಂಭವಾಗಿದೆ. ‘ಸಖಾ ಸಪ್ತಪದಾ ಭವ’ ಎಂಬ ಮಂತ್ರದ ಆಶಯದಂತೆ, ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ಈ ದಂಪತಿಗಳು ಜೀವನಪರ್ಯಂತ ಪರಸ್ಪರ ಉತ್ತಮ ಸ್ನೇಹಿತರಾಗಲಿ..”
ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡ ರಶ್ಮಿಕಾ-ವಿಜಯ್; ಕಾರಣ ಇದು
“ವಿಜಯ್ ಮತ್ತು ರಶ್ಮಿಕಾ ಅವರಿಗೆ ಸಿನಿಮಾಗಳ ಸ್ಕ್ರಿಪ್ಟ್ ಹೊಸದೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿರುವ ಅವರ ನಿಜಜೀವನದ ಈ ‘ದೈವಿಕ ಸ್ಕ್ರಿಪ್ಟ್’, ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಮಿಗಿಲಾದ ಪ್ರಭೆಯನ್ನು ಬೀರುವುದರಲ್ಲಿ ಸಂಶಯವಿಲ್ಲ. ಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಂಡ ಕನಸುಗಳಿಂದ ಹಾಗೂ ಅವುಗಳ ಈಡೇರಿಕೆಯಿಂದ ತುಂಬಿರಲಿ”
“ಪರಸ್ಪರ ಕಾಳಜಿ ಮತ್ತು ಪ್ರೀತಿಯಿಂದ ಅವರು ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಲೋಪದೋಷಗಳನ್ನು ಪ್ರೀತಿಯಿಂದ ಸ್ವೀಕರಿಸಲಿ ಮತ್ತು ಒಬ್ಬರ ಬಲದಿಂದ ಇನ್ನೊಬ್ಬರು ಕಲಿಯುತ್ತಾ ಜೀವನದ ಹಾದಿಯಲ್ಲಿ ನಿಜವಾದ ಪಾಲುದಾರರಾಗಿ ಮುನ್ನಡೆಯಲಿ. ಈ ಮಹತ್ವದ ಸಂದರ್ಭದಲ್ಲಿ ನವದಂಪತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಆಶೀರ್ವಾದಗಳು ಹಾಗೂ ಶುಭ ಹಾರೈಕೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

*ಎರಡು ಸಂಪ್ರದಾಯದಂತೆ ನಡೆಯಲಿರುವ ಮದುವೆ*
ಇನ್ನು, ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಅವರು ಎರಡು ಬಾರಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ವಿಜಯ್‌ ದೇವರಕೊಂಡ ಅವರಿಗಾಗಿ ಮೊದಲು ತೆಲುಗು ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ನಂತರ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಇನ್ನೊಮ್ಮೆ ಕಲ್ಯಾಣ ನೆರವೇರಲಿದೆ. ಬಂಧುಗಳು. ಅತ್ಯಾಪ್ತರು, ಸ್ನೇಹಿತರು ಸೇರಿದಂತೆ 100 ಜನ ಗಣ್ಯರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು