9:46 AM Sunday17 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ರಸ ವಿಮರ್ಶೆಯ ಪಾಕವೇ; ಅಕ್ಷರದ ಆನಂದ :ಡಾ. ಸುಬ್ರಹ್ಮಣ್ಯ ಸಿ ಕುಂದೂರು ಅವರ ಲೇಖನ

04/07/2021, 10:42

ಡಾ. ಸುಬ್ರಹ್ಮಣ್ಯ ಸಿ ಕುಂದೂರು
ಜಾಗತೀಕರಣವು ಮಾನವ ಸಮಾಜವನ್ನು ಪಲ್ಲಟಿಸಿದ ಬಗೆಯಲ್ಲಿ ಬಹುನೆಲೆಯ ಸಾಹಿತ್ಯ ಚಿಂತನೆಗಳು ಉಸಿರು ಪಡೆದು. ಸೈದ್ಧಾಂತಿಕ ರೂಪವನ್ನು ಪಡೆದುಕೊಳ್ಳುವ ತವಕದಲ್ಲಿ ಜಾಗತೀಕರಣವನ್ನು ಒಪ್ಪಿಕೊಳ್ಳುವ ಹಾಗೂ ನಿರಾಕರಿಸುವ ಎರಡು ನೆಲೆಯಲ್ಲಿ ಅನುಸಂಧಾನ ನಡೆಯುತ್ತಿದೆ ಆದರೂ ಬೌದ್ಧಿಕ ಚಿಂತನೆಯು ಜಾಗತೀಕರಣದ ಪ್ರಭುತ್ವದಿಂದ ಬಿಡಿಸಿಕೊಂಡು ದೇಶೀಯ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಮೀಮಾಂಸೆಯಾಗಿ ರೂಪಿಸುವಲ್ಲಿ ವಿಫಲವಾದಂತೆ ಕಾಣುತ್ತದೆ. ನಮ್ಮ ಬದುಕಿನ ವಿನ್ಯಾಸವು ಆಧುನಿಕ ಭೌತಿಕತೆ ಹಾಗೂ ಜೀವ ಸಂಬAಧವನ್ನು ನೆಚ್ಚಿಕೊಂಡಿರುವ ಕಾರಣದಿಂದ ನಾವು ಸ್ವಾತಂತ್ರö್ಯರು, ಅಭಿವೃದ್ಧಿ ಹೊಂದಿದÀ ಬುದ್ಧಿವಂತರು ಎಂಬ ಭ್ರಮೆಯನ್ನು ಲೋಕದ ವಾಸ್ತವಕ್ಕೆ ಮುಖಾಮುಖಿಯಾಗಿಸಿ ಕೃಷಿಬದುಕಿನ ವಿವೇಚನೆಯನ್ನು ಶೋಧಿಸುವ ಡಾ. ಯೋಗೀಶ್ ಕೈರೋಡಿ ಅವರು ಅಕ್ಷರವನ್ನು ಕಲಿಸುವ ಮೀಮಾಂಸೆಯನ್ನು ಕಾಪಿಟ್ಟುಕೊಂಡು ಅಕ್ಷರವನ್ನೇ ತಮ್ಮ ಅಭಿವ್ಯಕ್ತಿಯಾಗಿ ಬಳಸಿಕೊಂಡು ಆನಂದ ಪಡುತ್ತಿರುವದು ಹೆಮ್ಮ ಎನಿಸುತ್ತದೆ.

ಕನ್ನಡ ಬೋಧನೆ ಮಾಡುವ ನೆಲೆಯಲ್ಲಿ ಓದು ಬರೆಹವನ್ನು ನೆಚ್ಚಿಕೊಂಡ ಯೋಗೀಶರು ರಸವಿಮರ್ಶೆವನ್ನು ಗಂಭೀರವಾಗಿ ಅಪ್ಪಿಕೊಂಡAತೆ ಕಾಣುತ್ತದೆ. ತರಗತಿಯಲ್ಲಿ ಪಠ್ಯವನ್ನು ವಿದ್ಯಾರ್ಥಿಗೆ ಆಪ್ತವಾಗಿ ಕಲಿಸುವ ಬೌದ್ಧಿಕ ಶ್ರಮ, ಪ್ರಾಮಾಣಿಕತೆ ಹಾಗೂ ಸಾಂಸ್ಕೃತಿಕರಣದ ಪಡಿಯಚ್ಚುಗಳು ಲೇಖನದಲ್ಲಿ ಉಸಿರಾಡುತ್ತವೆ. ಕಾಲ-ಕಾಲಕ್ಕೆ ಲೋಕದಲ್ಲಿ ಉಂಟಾಗುವ ಸಾಂಸ್ಕೃತಿಕ ಚಲನೆಯು ಸ್ಥಳೀಯ ಪರಂಪೆಯನ್ನು ನಾಶ ಮಾಡಿದಂತೆ ಕಾಣುತ್ತದೆ ಹಾಗೂ ಕೆಲವು ಸಾಂಸ್ಕೃತಿಕ ಬಿಕ್ಕಟ್ಟುಗಳು ನಮ್ಮನ್ನು ಮಾತನಾಡುವಂತೆ ಮಾಡುತ್ತದೆ. ಈ ಮಾತುಗಳೇ ಈ ಲೇಖನದಲ್ಲಿ ಭೂಮಿಕೆಯಾಗಿ ತೋರುವುದು ವಿಶೇಷವೆನ್ನಬಹುದು. ಮಾಧÀ್ಯಮಲೋಕ, ಆಧುನಿಕತೆ, ಕೃಷಿ, ಸಂಸ್ಕೃತಿ, ರಂಗಭೂಮಿ ಹಾಗೂ ಅಭಿವೃದ್ಧಿಯ ಕುರಿತ ವಿಚಾರವನ್ನು ಮಂಡಿಸುವಾಗ ಯೋಗೀಶರು ದುಡಿಸಿಕೊಂಡ ಸರಳವಾದ ತಿಳಿಹಾಸ್ಯದ ಅವರದ್ದೇ ಆದ ಭಾಷೆಯು ಈ ಕೃತಿಗೆ ಜೀವಂತಿಕೆಯನ್ನು ತಂದಿದೆ. ನಮ್ಮ ಮನಸ್ಸನ್ನು ಹಿಡಿಯುವ ಶಕ್ತಿ ಅವರ ಬರಹದ ಭಾಷೆಯ ಸೃಜನಾತ್ಮಕತೆಗೆ ಒದಗಿದ್ದು ಬರೆಹಗಾರನ ಸಾಹಿತ್ಯ ಧರ್ಮದ ಧ್ಯಾನ ಸ್ಥಿತಿ ಎನ್ನಬಹುದು.

ಲೋಕವು ಈಗಾಗಲೆ ಒಪ್ಪಿಕೊಂಡಿರುವ ಸಾಂಸ್ಕೃತಿಕ ಯಜಮಾನಿಕೆಯನ್ನು ಗುಣಾತ್ಮಕವಾಗಿ ಅನುಸಂಧಾನ ಮಾಡುತ್ತಿರುವ ಬಹುತೇಕ ಲೇಖನಗಳು ಬಹುಸ್ತರವಾದ ಜೀವಪರತೆಯನ್ನು, ಕಾಯಕವನ್ನು, ವ್ಯಕ್ತಿಯ ಅಂತರAಗದ ಶೋಧವನ್ನು ತರ್ಕಿಸುವಲ್ಲಿ ವಿಫಲತೆಯನ್ನು ಕಾಣುತ್ತದೆ. ಇದು ಲೇಖಕರನ್ನು ಪ್ರಭಾವಿಸಿದ ನವೋದಯ ಸಾಹಿತ್ಯದ ಪ್ರಜ್ಞೆ ಎನ್ನಬಹುದು. ಇಲ್ಲಿಯ ಬಹುತೇಕ ಲೇಖನಗಳು ಸಾಮಾಜಿಕ ಸಮಸ್ಯೆಯನ್ನು ಪರಂಪರೆಯ ಚೌಕಟ್ಟಿನಲ್ಲಿ ಪರಿಚಯ ಮಾಡಿಕೊಡುತ್ತವೆ ಮತ್ತು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲು ಸಿದ್ಧಗೊಂಡAತೆ ಕಂಡರೂ ಜಡ್ಡುಗಟ್ಟಿದ ಸಮಾಜದ ವಿನ್ಯಾಸವನ್ನು ಪ್ರಶ್ನಿಸುವ ಮತ್ತು ಸುಧಾರಣೆಯ ಸ್ಪರ್ಶವನ್ನು ಒದಗಿಸುವ ತಾತ್ವಿಕಯು ಅಲ್ಲಲ್ಲಿ ಇಣುಕಿ ಮರೆಯಾಗುತ್ತಿರುವುದು ಸಾಮಾಜಿಕ ಮೌಲ್ಯವೊಂದು ಜಾಗತೀಕರಣದ ಮೂಸೆಯಲ್ಲಿ ಪಲ್ಲಟವಾಗುವ ಮತ್ತು ಬಹುರೂಪತೆಯನ್ನು ಪಡೆಯುವುದನ್ನು ಸೂಚಿಸುತ್ತದೆ. ಈ ಲೇಖನದಲ್ಲಿ ಅನುಸಂದಾನಕೆÀ್ಕ ಒಳಗಾಗುವ ಪರಿಕಲ್ಪನೆಯು ಸೈದ್ಧಾಂತಿಕತೆಯಾಗುವುದರ ದಾರಿಯಲ್ಲಿ ಗಟ್ಟಿಯಾದ ಹೆಜ್ಜೆಯನ್ನು ಹಾಕುವುದಿಲ್ಲ, ಬದಲಿಗೆ ಲೋಕದಲ್ಲಿ ಚರ್ಚೆಯಾಗುತ್ತಿರುವ ಬಾಯಿ ಮಾತುಗಳು, ಸಂವಾದಗಳು ಯೋಗೀಶರ ಬರೆಹದಲ್ಲಿ ಸೇರಿಕೊಂಡು ಪ್ರಭುತ್ವ ಪಡೆದು ಪರಿಕಲ್ಪನೆಗೆ ಆಯ-ಪಾಯವನ್ನು ಒದಗಿಸಿರುವುದು ಕಾಣುತ್ತದೆ. ಆಧುನಿಕತೆಯ ಸ್ಪರ್ಶಕ್ಕೆ ಒಳಗಾಗಿ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವ ಯುವ ಸಮುದಾಯಗಳ ಬಗ್ಗೆ ಲೇಖಕರಲ್ಲಿ ಆತಂಕವಿದೆ. ಈ ಆತಂಕವೇ ನಮ್ಮ ನೆಲದ ಪರಂಪರೆಯನ್ನು ಗುಣಾತ್ಮಕವಾಗಿ ನಿರೂಪಿಸುವಂತೆ ಮಾಡಿದೆ. ಲೋಕದ ವಿಚಾರಗಳನ್ನು ಕೃಷಿ ಬದುಕಿನ ತಕ್ಕಡಿಯಲ್ಲಿಟ್ಟು ತೂಗುವಾಗ ಸಮಾನತೆಯನ್ನು ಕಾಪಿಟ್ಟುಕೊಂಡಿರುವುದೇ ಈ ಕೃತಿಯ ಗೆಲುವು ಎಂದು ಗ್ರಹಿಸಬಹುದು.

ಕೃತಿ ವಿಚಾರ ಎಂಬ ಅಧ್ಯಾಯದಲ್ಲಿ ಕೃತಿಯೊಂದರ ಮುನ್ನುಡಿಯಂತೆ ಚರ್ಚಿಸುವ ನೆಲೆಯಲ್ಲಿ ಸಮಕಾಲೀನ ಕೆಲವು ಕೃತಿಗಳ ತಾತ್ವಿಕತೆಯನ್ನು ಯೋಗೀಶರು ಗುರುತಿಸಿದ್ದಾರೆ. ರಸವಿಮರ್ಶೆಯ ಪ್ರಜ್ಞೆಯು ಕೃತಿಗಳನ್ನು ಮೌಲ್ಯಮಾಪನ ಮಾಡುವಲ್ಲಿ ಬಳಕೆಯಾಗಿರುವುದರಿಂದ ಆಶಯದ ನೆಲಯ ವಿಶ್ಲೇಷಣೆಯು ಪರಂಪAರೆಯನ್ನು ಹೊತ್ತುಕೊಂಡAತೆ, ಗ್ರಹಿಕೆಗೆ ಸಿಗುವುದಲ್ಲದೆ, ಕೃತಿಯೊಂದರ ಗುಣಾತ್ಮಕ ತಾತ್ವಿಕತೆಯೇ ಓದುಗನಿಗೆ ಆಸಕ್ತಿಯನ್ನು ಹುಟ್ಟಿಸುತ್ತದೆ ಇದು ಯೋಗೀಶರ ಬರೆಹದ ಶಕ್ತಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು