ಇತ್ತೀಚಿನ ಸುದ್ದಿ
ರಾಣಿಬೆನ್ನೂರು: ದ್ವಿಚಕ್ರ ವಾಹನದ ಮೇಲೆ ಲಾರಿ ಹರಿದು ಪತಿ ಸ್ಥಳದಲ್ಲೇ ಸಾವು; ಪತ್ನಿ ಗಂಭೀರ
07/07/2022, 22:15

ಹಾವೇರಿ(reporterkarnataka.com):
ದ್ವಿಚಕ್ರ ವಾಹನದ ಮೇಲೆ ಲಾರಿ ಹರಿದು ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರ ಗಾಯಗೊಂಡ ದಾರುಣ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಗಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟವರನ್ನು ಗದಿಗೆಪ್ಪ ತಳವಾರ (55) ಎಂದು ಗುರುತಿಸಲಾಗಿದೆ.ಅವರ ಪತ್ನಿ ಸುಶೀಲಮ್ಮ( 50) ಗಂಭೀರ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಸುಶೀಲಮ್ಮ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲ ಮಾಡಲಾಗಿದೆ.
ಲಾರಿ ಮತ್ತು ಲಾರಿ ಚಾಲಕ ಪೊಲೀಸರುವಶಕ್ಕೆ ತೆಗೆದುಕೊಂಡಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.