ಇತ್ತೀಚಿನ ಸುದ್ದಿ
ರಂಗ ಭೂಮಿಯ ಖ್ಯಾತ ಕಲಾವಿದ ಆರ್. ಎಸ್ ರಾಜಾರಾಮ್ ನಿಧನ
10/05/2021, 22:05
ಬೆಂಗಳೂರು(reporterkarnatakanews): ಅನೇಕ ಧಾರಾವಾಹಿ, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಆರ್.ಎಸ್.ರಾಜಾರಾಮ್ (84)ಅವರು ಕೋವಿಡ್ ನಿಂದ ನಿಧನರಾಗಿದ್ದಾರೆ. ಕರ್ನಾಟಕ ಸರಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದ್ದಿದ್ದರು.
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ 1938ರ ಜುಲೈ 10ರಂದು ಜನಿಸಿದ ರಾಜಾರಾಂ ಅವರ ತಂದೆ ಜಿ.ಎಸ್. ರಘುನಾಥರಾವ್.ತಾಯಿ ಶಾರದಾಬಾಯಿ.
ಅವರ ನಿಧನಕ್ಕೆ ನಟ ನಟಿಯರು ಸೇರಿದಂತೆ, ಕನ್ನಡ ಚಿತ್ರ ರಂಗ, ಸಂತಾಪ ಸೂಚಿಸಿದ್ದಾರೆ.