6:03 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ರಮೇಶ್ ಕುಮಾರ್ ಚರಿತ್ರೆ ಬಹಿರಂಗಪಡಿಸುವ ಸಮಯ ಬಂದಿದೆ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಾಗ್ದಾಳಿ 

31/03/2022, 20:57

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com

ಶಾಸಕ ರಮೇಶ್ ಕುಮಾರ್ ತಾಳ್ಮೆ ಮೀರಿ ಆಟ ಆಡುತ್ತಿದ್ದಾರೆ .ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮೇಲೆ ಒಲವು ತೋರು ತಿದ್ದಾರೆ . ಅವರ ಚರಿತ್ರೆ ಬಹಿರಂಗ ವಾಗಿ ಬಿಚ್ಚಿಡುವ ಸಮಯ ಬಂದಿದೆ ಎಂದು ಮಾಜಿ ಸಂಸದ ಕೆ.ಎಚ್ . ಮುನಿಯಪ್ಪ ಎಚ್ಚರಿಕೆ ನೀಡಿದರು. 

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ನಿಂದ ಆರಂಭಿಸಿ 7 ಭಾರಿ ಲೋಕಸಭಾ ಸದಸ್ಯನಾಗಿದ್ದೇನೆ. ರಮೇಶ್ ಕುಮಾರ್ ಕಾಂಗ್ರೆಸ್ ನಿಂದ ದೇವೇಗೌಡರ ಜೊತೆಗೆ ಹೋಗಿದ್ದರು. ಮತ್ತೆ ಕಾಂಗ್ರೆಸ್‌ಗೆ ಬಂದು ಅಧಿಕಾರ ಸಿಕ್ಕಿದ್ದರು ತೆವಲಿಗೆ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟಿಲ್ಲ . ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಸರಿ ಇಲ್ಲ ಎಂದು ಬಿಜೆಪಿಯನ್ನು ಗೆಲ್ಲಿಸಿದೆಯಲ್ಲ, ಈಗ ಬಿಜೆಪಿಗೆ ಹೋಗು ಚುನಾವಣೆಗೆ ನಿಂತಿಕೊ. ನಾನು ನೋಡೆ ಬಿಡುತ್ತೇನೆ ಎಂದ ಅವರು, ಇನ್ನು ಕಾಂಗ್ರೇಸ್ ಪಕ್ಷದಲ್ಲಿ ಏಕೆ ಇದ್ದೀಯ ? ನಿನಗೆ ಮಾನ ಮಾರ್ಯದೆ ಏನಾದರೂ ಇದೆಯಾ ? ಈಗ ಮತ್ತೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತೀಯಾ. ನಿನಗೆ ಸ್ವಲ್ಪವಾದರೂ ನಾಚಿಕೆಯಾಗಲ್ಲವಾ ಎಂದು ಪ್ರಶ್ನಿಸಿದರು. 

ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕೊಟ್ಟು ಆಟ ಆಡುತ್ತಿದ್ದೀಯಾ ? ಶ್ರೀನಿವಾಸ ಪುರಕ್ಕೆ ಬಂದು ಬಹಿರಂಗ ಸಭೆಯಲ್ಲಿ ಮಾತನಾಡುತ್ತೇನೆ. ನಿನ್ನ ಬಣ್ಣ ಬಯಲು ಮಾಡುತ್ತೇನೆ. ನಾನು ಮುಳುಗುತ್ತಿದ್ದೇನೆ . ಇದ್ದವರನ್ನು ಜೊತೆಯಲ್ಲಿಯೇ ಮುಳುಗಿಸುತ್ತೇಯಾ , ಕಾಂಗ್ರೇಸ್ ಪಕ್ಷವನ್ನು ಮುಳುಗಿಸಬೇಕೆಂದು ತೀರ್ಮಾನಿಸಿದ್ದಿಯಾ ? ಎಂದು ಪ್ರಶ್ನಿಸಿದರು.

ಕೊತ್ತೂರು ಮಂಜುನಾಥ್ ಸುಳ್ಳು ಜಾತಿ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದೆ , ಹೈ ಕೋರ್ಟಿನಲ್ಲಿ ಛೀಮಾರಿ ಹಾಕಿಸಿ ಕೊಂಡಿದ್ದಾಯಿತು . ಹೋದರೂ ಅಷ್ಟೆ ಸತ್ಯಕ್ಕೆ ಗೆಲುವು ಸಿಗುದು . ಮುನಿಯಪ್ಪ ಅವರನ್ನೆ ಸೋಲಿಸುವುದೇ ನನ್ನ ಗುರಿ ಎಂದು ಹೇಳಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದವರು ಈಗ ಕಾಂಗ್ರೇಸ್ ಪಕ್ಷಕ್ಕೆ ಬರಬೇಕೆಂದು ಶತಪ್ರಯತ್ನ ಮಾಡುತ್ತಿದ್ದೀರಾ ನಿಮಗೆ ನಾಚಿಕೆ ಅಗಲ್ಲವೇ ಎಂದು ಟೀಕಿಸಿದರು . ರೈತ ನಾಯಕರನ್ನು ದರಿದ್ರ ಎನ್ನುತ್ತೀಯ ನೀವು ದರಿದ್ರವನ್ನು ತಂದು ಹಾಕಿದ್ದೀರ ಮೊದಲು ಅದನ್ನು ಕ್ಷೇತ್ರದಿಂದ ಹೊರಹಾಕಿ ಸ್ವಚ್ಚ ಪಡೆಸಿ , ನನ್ನ ಬಗ್ಗೆ ಅಧಿಕಾರ ದಲ್ಲಿದ್ದಾಗ ರಸ್ತೆ , ರೈಲು , ಕೈಗಾರಿಕ ‘ ಗಳು , ಉದ್ಯೋಗ ಖಾತ್ರಿ ಸೇರಿದಂತೆ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಇತಿಹಾಸ ತಿಳಿಸುತ್ತದೆ ಎಂದರು . ಸ್ವತಂತ್ರವಾಗಿ ಗೆಲ್ಲುವುದಾಗಿ ಹೇಳುತ್ತಿರುವಾಗ ಕಾಂಗ್ರೇಸ್ ಪಕ್ಷಕ್ಕೆ ಏಕೆ ಬರುತ್ತಿದ್ದೀಯ ? ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು . ಎಷ್ಟು ಮನೆಗಳನ್ನು ಹಾಳು ಮಾಡಿದ್ದೀಯಾ ? ಎಷ್ಟು ಅಟ್ರಾಸಿಟಿ ಕೇಸ್‌ಗಳು ಹಾಕಿಸಿದ್ದಾರೆ . ನಾನು 7 ಭಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರೂ ಸಹ ಒಂದು ಬಾರಿಯೂ ಅಟ್ರಾಸಿಟಿ ಕೇಸ್ ಹಾಕಿಸಿಲ್ಲ. 30 ವರ್ಷಗಳ ರಾಜಕೀಯ ಮಾಡಿದ್ದೇನೆ , ಜಗಜೀವನ್ ರಾಮ್ ಮತ್ತು ಶಂಕರಾನಂದ ಹೊರತು ಪಡೆಸಿದರೆ 7 ಭಾರಿ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದಿಲ್ಲ ಎಂದು ಹೆಮ್ಮೆಯಿಂದ ನುಡಿದ ಅವರು ನಾನು ಇರುವವರೆಗೂ ನಿಮ್ಮ ಆಟಗಳು ನಡೆಯುವುದಿಲ್ಲ ಎಂದು ಎಚ್ಚರಿಸಿದರು . ಡಾ.ಸುಧಾಕರ್‌ ಅವರ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಾಗಿತ್ತು. ಅವರ ತಾತ , ಅವರ ತಂದೆ ಚೌಡ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಿ ದ್ದವರು. ಅಪಪ್ರಚಾರಗಳಿಗೆ ಕಿವಿ ಕೊಟ್ಟು ದೂರ ಸರಿದಿದ್ದಾರೆ ಎಂದ ಅವರು, ಇಂದು ಬಿಜೆಪಿಯನ್ನು ಗೆಲ್ಲಿಸಿದವರು ಬಹುತೇಕ ಪಶ್ಚಾತಾಪ ಪಡುತ್ತೀರಿ , ಮುಸ್ಲಿಂ ಭಾಂದವರಿಗೆ ಇಂದು ನೆಮ್ಮದಿ ಶಾಂತಿಗಳು ಇಲ್ಲವಾಗಿದೆ ಎಂದರು. 

ಮುಂಬರಲಿರುವ ಚುನಾವಣೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ 11 ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವುದು ಖಚಿತ , ಅಲ್ಪಸಂಖ್ಯಾತರಿಗೆ ಒಂದು ಸ್ಥಾನ , ಹಿಂದುಳಿದ ವರ್ಗದವರಿಗೆ ಒಂದು ಸ್ಥಾನ ಕೊಡಲೇ ಬೇಕು. ಕಳೆದ ಭಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸೋತರು ಸಹ ನಮಗೆ 9 ಕ್ಷೇತ್ರ ಗಳಲ್ಲಿ ಗೆಲುವು ಸಾಧ್ಯವಾಯಿತು. ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ . ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು , ದಲಿತರು , ಹಿಂದುಳಿದವರ್ಗದವರು ಇದ್ದಾರೆ ಅವರಿಗೆ ಸಮಾಜಿಕ ನ್ಯಾಯ ನ್ಯಾಯಾ ದೊರಕಿಸಿ ಕೊಡ ಬೇಕಾಗಿದೆ . ಸಮಾನತೆ ಕಲಿಸ ಬೇಕಾಗಿದೆ . ಶಾಂತಿ ಸೌಹಾರ್ದತೆ ಯನ್ನು ಕಾಪಾಡ ಬೇಕಾಗಿದೆ ಎಂದರು . ಜೆಪಿಗೆ ಅಧಿಕಾರದ ಅಮಲು ಏರಿ ಹಾದಿ ತಪ್ಪಿ ನಡೆಯುತ್ತಿದೆ . ಬಿಜೆಪಿಯನ್ನು ಗೆಲ್ಲಿಸಿ ಈಗಾ ಕಾಂಗ್ರೆಸ್ ಕಡೆ ಮುಖ ಮಾಡುತ್ತಿ ರುವರು ಕಾಂಗ್ರೇಸ್ ಸೇರಲು ನಾಲಯಕ್ಕಾಗಿದ್ದಾರೆ . ಇಂಥಹವರಿ ಕಾಂಗ್ರೇಸ್ ಪಕ್ಷಕ್ಕೆ ಅಗತ್ಯವಿಲ್ಲ ಎಂದ ಅವರು ತಾಳ್ಮೆ ಮಿತಿ ಮೀರಿದ ಹಿನ್ನಲೆಯಲ್ಲಿ ತುಟಿ ಬಿಚ್ಚಬೇಕಾಗಿ ಕ ಬಂದಿದೆ . ನನಗೂ ಮಾತನಾಡು ವುದಕ್ಕೆ ಬರುತ್ತದೆ ಎಂದರು ಪ್ರಶ್ನೆಯೊಂದಕ್ಕೆ ಕಾಂಗ್ರೇಸ್ ಪಕ್ಷವು ಸಮುದ್ರ ಇದ್ದಂತೆ , 10 ಮಂದಿ ಅಕಾಂಕ್ಷಿಗಳಿಗೆ ಸಂಘಟನೆ ಮಾಡಲು ತಿಳಿಸಿದ್ದರೂ ಸಹ ಅವರಲ್ಲಿ ಉತ್ತಮರಾದ ಒಬ್ಬರಿಗೆ ಮಾತ್ರ ನೀಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್ , ಶೇಷಾ ಪುರ ಗೋಪಾಲ್ , ರಾಮಲಿಂಗಾ ರೆಡ್ಡಿ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಳಸನೂರು ಗೋಪಾಲ ಕೃಷ್ಣ , ಮುನಿರಾಜು , ಮಾಜಿ ಕೆಯುಡಿಎ ಅಧ್ಯಕ್ಷ ಅಥಾವ ಯಲ್ಲಾ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ . ಮಾಜಿ ನಗರಸಭಾ ಸದಸ್ಯ ಲಾಲ್ ಬಹುದ್ದೂರ್ ಶಾಸ್ತ್ರಿ , ಯಲ್ಲಪ್ಪ , ಎಸ್.ಟಿ. ಘಟಕದ ಅಧ್ಯಕ್ಷ ನಾಗರಾಜ್ ಜಯಕೃಷ್ಣ , ಶಿವ ಕುಮಾರ್‌ ಹಾಜರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು