ಇತ್ತೀಚಿನ ಸುದ್ದಿ
ರಾಮನಗರ: ಮೇಕೆದಾಟು ಸಂಗಮದಲ್ಲಿ ಈಜುತ್ತಿದ್ದ ಬೆಂಗಳೂರಿನ 5 ಮಂದಿ ವಿದ್ಯಾರ್ಥಿಗಳು ನೀರುಪಾಲು
01/05/2024, 17:45

ಬೆಂಗಳೂರು(reporterkarnataka.com):ರಾಮನಗರ ಜಿಲ್ಲೆಯ ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದ ಬೆಂಗಳೂರಿನ 5 ಮಂದಿ ವಿದ್ಯಾರ್ಥಿಗಳು ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ಮೇಕೆದಾಟು ಸಂಗಮದ ಕಾವೇರಿ ನದಿಯಲ್ಲಿ ಮೋಜಿಗಾಗಿ ಈಜುತ್ತಿದ್ದಾಗ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಈಜಲೆಂದು ಮೇಕೆದಾಟು ಸಂಗಮದಲ್ಲಿ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಐವರೂ ಸಾವನ್ನಪ್ಪಿದ್ದಾರೆ.
ನೀರುಪಾಲಾಗಿದ್ದ ವಿದ್ಯಾರ್ಥಿಗಳ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕಾವೇರಿ ನದಿಯಿಂದ ಹೊರತೆಗೆದಿದೆ. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿದ್ದಾರೆ.