ಇತ್ತೀಚಿನ ಸುದ್ದಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆ ಕೊಡಗಿನ ವಿದ್ಯಾರ್ಥಿಗಳಿಂದ ರಕ್ಷಾ ಬಂಧನ ಆಚರಣೆ: ಬಾಳುಗೋಡು ವಸತಿ ಶಾಲೆಯ ಸಂಭ್ರಮ
12/08/2025, 15:17

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸಿಂಧು ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಖೆಯ ವಿದ್ಯಾರ್ಥಿಗಳಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಕ್ಷಾ ಬಂಧನ ಆಚರಿಸಿದರು.
ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಾ ಬಂದಿದ್ದು ಈ ಭಾರಿ ಬುಡಕಟ್ಟು ವಿದ್ಯಾರ್ಥಿಗಳಿಗೆ ರಾಜ್ಯದಿಂದ ರಾಯಚೂರು, ಬೆಳಗಾವಿ, ಕೋಲಾರ ಹಾಗೂ ಕೊಡಗು ಜಿಲ್ಲೆಗಳಿಂದ ಬುಡಕಟ್ಟು ಸಮುದಾಯದ ವಸತಿ ಶಾಲೆಗೆ ಈ ಅವಕಾಶ ಕಲ್ಪಿಸಲಾಗಿತ್ತು. ವಿರಾಜಪೇಟೆಯ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆ ಸಂಗೀತ ಶಿಕ್ಷಕಿ ಕುಮಾರಿ ಕೋಮಲ್, ವಿದ್ಯಾರ್ಥಿಗಳಾದ ಆರನೇ ತರಗತಿಯ ಎಂ. ಎಲ್. ಪ್ರತೀಕ್ಷಾ, ಏಳನೇ ತರಗತಿ ಸಿ. ಎಲ್. ಕನ್ನಿಕಾ, 8ನೇ ತರಗತಿಯ ತನ್ವಿ ತಂಗಮ್ಮ, 9ನೇ ತರಗತಿಯ ಹೆಚ್. ಕೆ. ನೇಹಾ ಮತ್ತು 10ನೇ ತರಗತಿಯ ಕೆ. ಎಂ ಪ್ರಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.