ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರ ಬದಲಾಯಿಸಿ: ಎಂ ಬಿ. ಸದಾಶಿವ
27/07/2022, 17:58
ಸುಳ್ಯ(reporterkarnataka.com): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವರನ್ನು ತಕ್ಷಣ ಬದಲಾಯಿಸಿ ಎಂದು ಜನತಾ ದಳ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಆಗ್ರಹಿಸಿದ್ದಾರೆ.
ಬುಧವಾರ ಮಾಧ್ಯಮದ ಜತೆ ಮಾತನಾಡಿದ ಅವರು ಬೆಳ್ಳಾರೆ ಪರಿಸರದಲ್ಲಿ ವಾರದ ಅಂತರದಲ್ಲಿ ಎರಡು ಹತ್ಯೆ ನಡೆದಿದೆ. ಮಸೂದ್ ಎಂಬವರ ಹತ್ಯೆಯ ಬಳಿಕ ಪ್ರವೀಣ್ ಅವರ ಹತ್ಯೆ ನಡೆದಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಅಸಮರ್ಥ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಕ್ಷಣ ಬದಲಾಯಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ ಎಂದು ನುಡಿದರು.
ಹತ್ಯೆಗೀಡಾದ ಪ್ರವೀಣ್ ಹಾಗೂ ಮಸೂದ್ ಕುಟುಂಬಕ್ಕೆ ಸರಕಾರ ತಲಾ 25 ಸಾವಿರ ರೂ. ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಹಿತಕರ ಘಟನೆಗಳಿಂದ ಸುಳ್ಯದ ಶಾಂತಿ – ಸೌಹಾರ್ದತೆಗೆ ಧಕ್ಕೆಯಾಗಿದೆ. ಮುಂದೆ ಎಂದೂ ಇಂತಹ ಘಟನೆ ಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ನುಡಿದರು.