5:08 PM Tuesday22 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ:… Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ…

ಇತ್ತೀಚಿನ ಸುದ್ದಿ

ರಾಜ್ಯವಿಧಾನ ಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕೌಂಟ್ ಡೌನ್ ಶುರು; ಆಕಾಂಕ್ಷಿಗಳಲ್ಲಿ ತೀವ್ರಗೊಂಡ ಎದೆಬಡಿತ

11/04/2023, 10:49

ಹೊಸದಿಲ್ಲಿ(reporterkarnataka.com): ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ(ಬುಧವಾರ) ಬಿಡುಗಡೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಈ ನಡುವೆ ಟಿಕೆಟ್
ಅಕಾಂಕ್ಷಿಗಳಲ್ಲಿ ಎದೆ ಬಡಿತ ತೀವ್ರಗೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸದಿಲ್ಲಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ರೋಡ್ ಮ್ಯಾಪ್ ಸಿದ್ಧವಾಗಿದೆ. ಕೇಂದ್ರ ಗೃಹ ಸಚಿವರು ಸೋಮವಾರ ದಿಲ್ಲಿಯಿಂದ ಹೊರಗಡೆ ಇದ್ದ ಕಾರಣ ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಇದಕ್ಕೆ ಮುನ್ನ ದೆಹಲಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಕೇಂದ್ರ ಸಂಸದೀಯ ವ್ತವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಮಂಗಳವಾರ ತಡರಾತ್ರಿ ಬಳಿಕ ಯಾವುದೇ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ದಿನ ದಿಲ್ಲಿಯಲ್ಲಿ ಇರದ ಹಿನ್ನೆಲೆಯಲ್ಲಿ ಮಂಗಳವಾರ ಅಮಿತ್ ಶಾ ಅವರೊಂದಿಗೆ ಚರ್ಚಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆ ಪಡೆದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಪಟ್ಟಿ ಈಗಾಗಲೇ ಅಂತಿಮಗೊಂಡಿದೆ. ಕೊನೆಯ ಕ್ಷಣದ ಬದಲಾವಣೆ ಇರಲೂ ಸಾಕು ಎಂದು ಅವರು ನುಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು