2:18 AM Friday28 - November 2025
ಬ್ರೇಕಿಂಗ್ ನ್ಯೂಸ್
Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ… Bhadravathi | ಪತಿಯ ಕಿರುಕುಳ: ಡೆತ್ ನೋಟ್ ಬರೆದು ನಾಲೆಗೆ ಹಾರಿ ನವ… ವಿದ್ಯುತ್ ಲಿಂಕ್ ಲೈನ್‌ ಸ್ಥಾಪಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ: ಸಚಿವ ಕೆ.ಜೆ.ಜಾರ್ಜ್

ಇತ್ತೀಚಿನ ಸುದ್ದಿ

ರಾಜ್ಯ ಸಿವಿಲ್ ಸೇವೆ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಅನ್ಯಾಯ: ಬಿಜೆಪಿ ಶಾಸಕ ಡಿ.ಎಸ್.ಅರುಣ್ ಅಸಮಾಧಾನ

16/12/2024, 17:30

ಬೆಳಗಾವಿ ಸುವರ್ಣಸೌಧ(reporterkarnataka.com): ರಾಜ್ಯ ಸರ್ಕಾರದ ಸಿವಿಲ್‌ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಹುದ್ದೆಗಳನ್ನು ಮೀಸಲಿರಿಸುವ ನಿಯಮಕ್ಕೆ ಸರ್ಕಾರ ತಡೆಯೊಡ್ಡಿದ ವಿಚಾರವನ್ನು
ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳದ ಡಿ.ಎಸ್.ಅರುಣ್
ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.ಸಿವಿಲ್‌ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಸಾಮಾನ್ಯವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಎಲ್ಲ ಇಲಾಖೆಗಳ ಮಂಜೂರಾದ ವೃಂದ ಬಲದಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಿ ಸೆಪ್ಟೆಂಬರ್‌ 9ರಂದು ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿರುವುದು ತಿಳಿದು ಬಂದಿರುವ ಕುರಿತು ಮಾಹಿತಿ ನೀಡಿ, ಯಾವ್ಯಾವ ಕ್ರೀಡೆಯಿಂದ ಸಾಧಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕ್ರೀಡಾ ಇಲಾಖೆ ನಡುವೆ ಗೊಂದಲ ಸೃಷ್ಟಿಯಾಗಿದ್ದು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9ಕ್ಕೆ ಮಾಡಿರುವ ತಿದ್ದುಪಡಿಯನ್ನು ಪುನರ್‌ ಪರಿಶೀಲಿಸಲು ಮುಂದಾಗಿರುವ ವಿಚಾರವನ್ನು ಮಾನ್ಯ ಶಾಸಕರು ಪ್ರಸ್ತಾಪಿಸಿದರು. ಕಾಮನ್‌ವೆಲ್ತ್‌ ಏಷಿಯನ್‌ ಗೇಮ್ಸ್‌, ಒಲಂಪಿಕ್ಸ್‌ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳ ಯಾವ್ಯಾವ ಕ್ರೀಡೆಯಲ್ಲಿ ಎಷ್ಟೆಷ್ಟು ಅಂಕ ಗಳಿಸುತ್ತಾರೆ ಇದನ್ನು ಯಾವ ರೀತಿ ಅಂದಾಜಿಸಬೇಕು ಎಂಬ ಗೊಂದಲಗಳು ಸರ್ಕಾರದ ಮಟ್ಟದಲ್ಲಿದ್ದು, ಶೀಘ್ರದಲ್ಲಿ ಪ್ರಮುಖ ವಿಚಾರವಾಗಿರುವ ಸದರಿ ವಿಷಯವನ್ನು ಬಗೆಹರಿಸಿ ಕ್ರೀಡಾ ಸಾಧಕರಿಗೆ ಅನ್ಯಾಯವಾಗದಂತೆ, ನಿರ್ದಿಷ್ಟ ಕಾಲಮಿತಿಯೊಳಗೆ ಸರ್ಕಾರ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ನೀಡಬೇಕಿದ್ದ ಶೇ 2ರ ಮೀಸಲಾತಿಯನ್ನು ನೀಡಿ, ಕ್ರೀಡಾ ಸಾಧಕರಿಗೆ ಪ್ರೋತ್ಸಾಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು, ಡಿ.ಎಸ್ ಅರುಣ್ ಅವರು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು.

*ಡಿ.ಎಸ್.ಅರುಣ್*
ಮಾನ್ಯ ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು

ಇತ್ತೀಚಿನ ಸುದ್ದಿ

ಜಾಹೀರಾತು