ಇತ್ತೀಚಿನ ಸುದ್ದಿ
ರಾಜ್ಯ ಬಂದ್: ರಕ್ತ ಕೊಡ್ತೀವಿ, ನೀರು ಕೊಡೊಲ್ಲ ಎಂದು ಕೈ ಕೊಯ್ದುಕೊಂಡ ಕಾವೇರಿ ಹೋರಾಟಗಾರ
29/09/2023, 15:53
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಕ್ತ ಕೊಡ್ತೀವಿ, ನೀರು ಕೊಡಲ್ಲ ಎಂದು ಕಾವೇರಿ
ಹೋರಾಟಗಾರರೊಬ್ಬರು ಕೈ ಕೊಯ್ದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಕಳಸ ತಾಲೂಕಿನಲ್ಲಿ ನಡೆಯಿತು.
ಪ್ರತಿಭಟನೆ ವೇಳೆ ಕನ್ನಡ ರಾಜು ಎಂಬವರು ಕೈ ಕೊಯ್ದುಕೊಂಡು ರಕ್ತ ಚೆಲ್ಲಿದರು.
ಕನ್ನಡ ರಾಜು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.
ರೈತ ಸಂಘ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಏಕಾಏಕಿ ಹೋರಾಟಗಾರರೊಬ್ಬರು ಕೈಕೊಯ್ದುಕೊಂಡರು.