ಇತ್ತೀಚಿನ ಸುದ್ದಿ
ರಾಜಕೀಯ ಕೂಡ ಕ್ರಿಕೆಟ್ ತರಹ; ಆದರೆ, ಇಲ್ಲಿ ಬಾಲ್ ಎಲ್ಲಿಂದ ಬರುತ್ತೆ ಎನ್ನುವುದೇ ಗೊತ್ತಾಗೊಲ್ಲ: ಸ್ಪೀಕರ್ ಯು.ಟಿ. ಖಾದರ್ ಚಟಾಕಿ
06/01/2024, 12:41
ಮಂಗಳೂರು(reporterkarnataka.com): ರಾಜಕೀಯ ಕೂಡ ಕ್ರಿಕೆಟ್ ಆಟದಂತೆ. ನೈಜ ಕ್ರಿಕೆಟ್ ನಲ್ಲಿ ಬಾಲ್ ಎಲ್ಲಿಂದ ಬರುತ್ತದೆ ಎಂದು ಗೊತ್ತಾಗುತ್ತದೆ. ಆದರೆ ರಾಜಕೀಯ ಕ್ರಿಕೆಟ್ ನಲ್ಲಿ ಬಾಲ್ ಎಲ್ಲಿಂದ ಬರುತ್ತೆ ಎನ್ನುವುದೇ ಗೊತ್ತಾಗೊಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಾರ್ಮಿಕವಾಗಿ ನುಡಿದರು.
ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್-2024
ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಹೊಣೆಗಾರಿಕೆ ಅರಿತು ಪತ್ರಕರ್ತರು ಕಾರ್ಯನಿರ್ವಹಿಸಬೇಕು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಬ್ರ್ಯಾಂಡ್ ಮಂಗಳೂರು ಸ್ಲೋಗನ್ ಮೂಲಕ ಇಲ್ಲಿನ ಪತ್ರಕರ್ತರು ಕರಾವಳಿಯ ರಾಯಭಾರಿಗಳಾಗಿದ್ದಾರೆ. ಪತ್ರಕರ್ತರ ಸಂಘಗಳ ಅನ್ಯೋನ್ಯ ಚಟುವಟಿಕೆಗಳಿಗೆ ಎಲ್ಲರಿಗೂ ಮಾದರಿಯಾಗಿದ್ದು, ಇದು ಸಾಮಾಜಿಕ ಹಿತಾಸಕ್ತಿಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.