ಇತ್ತೀಚಿನ ಸುದ್ದಿ
ಮಳೆ ನೀರಿನಿಂದ ತುಂಬಿ ಸಂಚಾರ ಸ್ಥಗಿತಗೊಂಡ ಬಜಾಲ್ ಅಂಡರ್ ಪಾಸ್: ಪಾಲಿಕೆ ಕಮಿಷನರ್ ಸ್ಥಳಕ್ಕೆ ಭೇಟಿ; ಪರಿಶೀಲನೆ
26/06/2024, 16:45
ಮಂಗಳೂರು(reporterkarnataka.com):ನಗರದ ಹೊರವಲಯದ ಪಡೀಲ್ ಸಮೀಪದ ಬಜಾಲ್ ನ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ಹಾಗೂ ಪಾಲಿಕೆಯ ಚೀಫ್ ಎಂಜಿನಿಯರ್ ನರೇಶ್ ಶೆಣೈ ಉಪಸ್ಥಿತರಿದ್ದರು.
ಕಳೆದ ಸರಿ ಸುಮಾರು 10-15 ವರ್ಷಗಳಿಂದ ಬಜಾಲ್ ಅಂಡರ್ ಪಾಸ್ ಸಮಸ್ಯೆ ಜೀವಂತವಾಗಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಬಜಾಲ್, ಜಲ್ಲಿಗುಡ್ಡೆ, ವೀರನಗರ, ವಿಜಯನಗರ ಕಡೆಗೆ, ಎಕ್ಕೂರು, ಜಪ್ಪಿನ ಮೊಗರು ಪ್ರಯಾಣಿಸುವವರು ಇದೇ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕು. ಅಷ್ಟೇ ಅಲ್ಲದೆ ಜಂಕ್ಷನ್ ರೈಲ್ವೆ ಸ್ಟೇಷನಿಗೆ ಕೂಡ ಇದೇ ದಾರಿಯಾಗಿ ಸಾಗಬೇಕು. ಇದೀಗ ಸಂಚಾರ ಕಡಿತಗೊಂಡಿದೆ. ವಾಹನ ಕೆಟ್ಟು ನಿಂತಿದೆ. ಬಸ್ ಸಂಚಾರ ನಿಂತಿದೆ. ಜತೆಗೆ ಕಾಲ್ನಡಿಗೆಯಲ್ಲಿ ಕೂಡ ಈ ಅಂಡರ್ ಪಾಸ್ ಮೂಲಕ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಎರಡೆರಡು ಪಂಪ್ ಅಳವಡಿಸಿ ನೀರು ಖಾಲಿ ಮಾಡುವ ಕ್ರಿಯೆ ನಡೆಯುತ್ತಿತ್ರು. ಪಂಪ್ ಗೆ ಬಾಡಿಗೆ ಮತ್ತು ಡೀಸೆಲ್ ಹಣವನ್ನು ಸ್ಥಳೀಯಾಡಳಿತ ಭರಿಸಬೇಕಾಗಿದೆ. ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣವನ್ನು ನೀರು ಖಾಲಿ ಮಾಡಲು ಉಪಯೋಗಿಸುತ್ತಿದ್ದರು. ಈ ವರ್ಷವೂ ಅದರ ಪುನರಾವರ್ತನೆ ಆಗಲಿದೆ.