1:34 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

Raichuru | ಮಸ್ಕಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ: ಯೋಧರಿಗೆ ಸನ್ಮಾನ

26/07/2025, 22:52

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ಮಸ್ಕಿ ಪ್ರಭುವಿತಂ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯೋತ್ಸವ ದಿವಸ್ ಕಾರ್ಯಕ್ರಮವನ್ನು ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸೈನ್ಯದಲ್ಲಿ ಅಂದು ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸೋಣ. ಕಾರ್ಗಿಲ್ ವಿಜಯೋತ್ಸವ ದಿನ
ದೇಶದ ಸಂರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರಿಗೆ ಭಕ್ತಿಪೂರ್ವಕ ನಮನಗಳು ಎಂದರು.
1999 ರ ಕಾರ್ಗಿಲ್ ಯುದ್ಧವು ಭಾರತದ ಇತಿಹಾಸದಲ್ಲೇ ಅತ್ಯಂತ ಸಾಹಸಿಕ ಮತ್ತು ಶೂರವೀರರ ಹೋರಾಟದ ಅಧ್ಯಾಯವಾಗಿದೆ. ಹಿಮಪಾತ, ದಟ್ಟ ಪರ್ವತಗಳು ಮತ್ತು ಅಸಹನೀಯ ವಾತಾವರಣದಲ್ಲಿಯೂ ನಮ್ಮ ಯೋಧರು ತಮ್ಮ ಜೀವದ ಹಂಗು ಕಾಣದೆ ಶತ್ರುಗಳಿಗೆ ತಕ್ಕ ಉತ್ತರ ನೀಡಿ, ವಿಜಯದ ಧ್ವಜ ಹಾರಿಸಿದರು ಎಂದು ಅವರು ಕೊಂಡಾಡಿದರು.
ಶತ್ರುಗಳನ್ನು ಶೌರ್ಯದಿಂದ ಹಿಮ್ಮೆಟ್ಟಿಸಿ, ತವರಿಗೆ ಹಿಂತಿರುಗದೆ ದೇಶದ ಭೂಭಾಗವನ್ನು ರಕ್ಷಿಸಲು ಜೀವವನ್ನೇ ತ್ಯಾಗ ಮಾಡಿದ ವೀರಪುತ್ತರು – ಅವರು ಸ್ಮರಣೆಗೂ ಮೀರಿದ ಮಹಾಪುರುಷರು ಎಂದರು.
ಅವರ ತ್ಯಾಗ, ಬಲಿದಾನ ಮತ್ತು ರಾಷ್ಟ್ರಪ್ರೇಮ – ಇವುವೆಲ್ಲಾ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವುದು. ಅವರ ವೀರಗಾಥೆಗಳು ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.


ಭಾರತ ಮಾತೆಗೆ ಜೀವ ಅರ್ಪಿಸಿದ ವೀರರನ್ನು ಮರೆಯಲಾರೆವು. ವೀರ ಯೋಧರ ಬಲಿದಾನಕ್ಕೆ ನಮನಗಳು ಎಂದು ಹೇಳಿದರು.
ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಕಾರ್ಗಿಲ್ ವಿಜಯೋತ್ಸವ ಕುರಿತಾಗಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್”. ನಮ್ಮ ವೀರ ಯೋಧರ ತ್ಯಾಗ, ಬಲಿದಾನ ಹಾಗೂ ಶೌರ್ಯದಿಂದ ಪ್ರಾಣ ಅರ್ಪಿಸಿ ದೇಶ ಗೆಲ್ಲಿಸಿ, ಭಾರತಾಂಬೆಯ ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿದ ಐತಿಹಾಸಿಕ ದಿನವಿಂದು. ನಮ್ಮ ಸೈನ್ಯದ ಐತಿಹಾಸಿಕ ವಿಜಯವನ್ನು ಸಂಭ್ರಮಿಸೋಣ. ಅಂದು ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಲ್ಲಯ್ಯ ಅಂಬಾಡಿ, ಮುಖಂಡರಾದ ಡಾ. ಬಿ.ಎಚ್. ದಿವಟರ, ಮಾಜಿ ಸೈನಿಕರಾದ ರಾಜಪ್ಪ ಮಜ್ಜಿಗೆ ಹಾಗೂ ಶಂಕ್ರಪ್ಪ ಮಾಜಿ ಯೋಧರು, ಕಾಲೇಜಿನ ಕಾರ್ಯದರ್ಶಿಗಳಾದ ಶಿವರಾಜ್ ಅರಸೂರು, ಕಾಲೇಜಿನ ಪ್ರಿನ್ಸಿಪಲ್ ಕಿರಣ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು