7:33 AM Friday3 - October 2025
ಬ್ರೇಕಿಂಗ್ ನ್ಯೂಸ್
ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ…

ಇತ್ತೀಚಿನ ಸುದ್ದಿ

Raichuru | ಪತ್ರಕರ್ತರ ರಕ್ಷಣೆ ಕಾಯ್ದೆ ಜಾರಿಗೆ ಬರಲಿ: ಡಾ. ಎಸ್. ಎಸ್. ಪಾಟೀಲ್ ಹುಬ್ಬಳ್ಳಿ

30/09/2025, 20:56

ವಿರೂಪಾಕ್ಷ ಸ್ವಾಮಿ ಮಸ್ಕಿ ರಾಯಚೂರು

info.reporterkarnataka@gmail.com

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಇತಿಹಾಸವಿದ್ದು ಅಂತಹ ನಿಟ್ಟಿನಲ್ಲಿ ಮಸ್ಕಿ ತಾಲೂಕು ಕರ್ನಾಟಕ ತಾಲೂಕು ಘಟಕದ ವತಿಯಿಂದ ನಾಲ್ಕನೇ ವರ್ಷದ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಪ್ರಜಾ ಪವರ್ ಹಾಗೂ ಎಂ. ಕೆ. ಎಸ್. ವಾಹಿನಿಯ ಸಂಭ್ರಮೋತ್ಸವ ಪತ್ರಕರ್ತರ ಹಬ್ಬ ಕಾರ್ಯಕ್ರಮ ನಡೆಯಿತು.
ಪೂಜ್ಯ ಶ್ರೀ ಅಮರೇಶ್ ಗೌಡನಬಾವಿ (ರಾಜ್ಯ ಉಪಾಧ್ಯಕ್ಷರು) ಎಂ. ಇಸಾಕ್ ತಕಲಕೋಟೆ, ಡಾ. ಎಸ್. ಎಸ್. ಪಾಟೀಲ್ ಹುಬ್ಬಳ್ಳಿ, ಡಾ. ಜಲಾನುದ್ದೀನ್ ಅಕ್ಬರ್, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ್ ಹಾಗೂ ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಶಿವು ಸಾಲಿಮಠ ಸೇರಿದಂತೆ ಅನೇಕರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನು ಡಾ. ಜಲಾನುದ್ದೀನ್ ಅಕ್ಬರ್ ಆಡಿದರು. ಮಂಜುಳಾ ಪ್ರಭುರಾಜ್ , ಎಂ. ಇಸಾಕ್, ವಿರೂಪಾಕ್ಷಯ್ಯ ಸಾಲಿಮಠ, ವೆಂಕನಗೌಡ (ಶಿಕ್ಷಕರು ಸಿಂಧನೂರು) ಪತ್ರಿಕೆ ಬಗ್ಗೆ ಬದಲಾಗುತ್ತಿರುವ ಪತ್ರಿಕೋದ್ಯಮದ ಬಗ್ಗೆ ಮಾತನಾಡಿದರು.
ಡಾ. ಎಸ್. ಎಸ್. ಪಾಟೀಲ್ ಮಾತನಾಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಕರ್ತರಿಗೆ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು, ಪತ್ರಕರ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು, ಪತ್ರಕರ್ತರಿಗೆ ಬಸ್ ಪಾಸ್ ಕೇವಲ ಮಹಿಳೆಯರಿಗೆ ಆಧಾರ್ ಕಾರ್ಡ್ ತೋರಿಸಿದ್ದರು ಅದೇ ರೀತಿಯಲ್ಲಿ ಪತ್ರಕರ್ತರಿಗೂ ಪತ್ರಕರ್ತರ ಐಡಿ ಕಾರ್ಡ್ ತೋರಿಸಿದರೆ ಬಸ್ಸಿನಲ್ಲಿ ಉಚಿತವಾಗಿ ಬಿಡಬೇಕು ಎಂದು ಹೇಳಿದರು.
ಪ್ರಜಾ ಪವರ್ ಎನ್ಕೆಎಸ್ ಸುದ್ದಿ ವಾಹಿನಿ ಸಂಭ್ರಮಾಚರಣೆಗೆ ಶಶಿಗೆ ನೀರು ಹಾಕುವ ಮೂಲಕ ರಿಬ್ಬನ್ ಕಟ್ ಮಾಡುವ ಮೂಲಕ ಮಾಡುವ ಮೂಲಕ ಪತ್ರಕರ್ತರ ಹಬ್ಬ ಆಚರಣೆ ಮಾಡಲಾಯಿತು. ಎಂ. ಕೆ. ಎಸ್. ಸುದ್ದಿ ವಾಹಿನಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದೆ. ನಾವು ಎಲ್ಲರೂ ಮೂಲಕ ಪ್ರಜಾ ಪವರ್ ವಾಹಿನಿ ಎಲ್ಲರೂ ಫಾಲೋ ಮಾಡಿ ಎಂದು ಎಸ್ ಎಸ್ ಪಾಟೀಲ್ ಹೇಳಿದರು.


ಈ ಕಾರ್ಯಕ್ರಮದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು, ಸಿಂಧನೂರು, ಮಾನ್ವಿ, ಸಿರಿವಾರ್, ಬಾಗಲಕೋಟೆ ಇಲ್ಕಲ್ ಪಟ್ಟಣದಿಂದ ಪತ್ರಕರ್ತರು ಆಗಮಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು