10:16 PM Monday20 - January 2025
ಬ್ರೇಕಿಂಗ್ ನ್ಯೂಸ್
ನಂಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿಸಿಎಂ ಡಿ.ಕೆ.… ಮಹಾತ್ಮ ಗಾಂಧಿ ರಿಯಲ್ ಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕ ಅವರು ನಕಲಿ ಗಾಂಧಿಗಳು:… ಬೆಂಗಳೂರು ಐಟಿ ಹಬ್, ವ್ಯೂಹಾತ್ಮಕ ನಗರ; ಇಲ್ಲೇ ಐಕ್ಯಾಟ್ ಕೇಂದ್ರ ಖಚಿತ: ಕೇಂದ್ರ… ಮುಡಾ ಕುರಿತು ಇಡಿ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ 5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ… ಮಂಗಳೂರಿನ ಜನತೆಗೆ ಕಲುಷಿತ ನೀರು ಪೂರೈಕೆ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ… ಭಾರತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ನಿಂದ ಹಣಕಾಸಿನ ಸೇವೆಗಳಿಗಾಗಿ ಅತಿದೊಡ್ಡ ಡಿಜಿಟಲ್… ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ…

ಇತ್ತೀಚಿನ ಸುದ್ದಿ

ರಾಹುಲ್ ಉಡುಗೆ ಬಗ್ಗೆ ವ್ಯಂಗ್ಯವಾಡುವ ಬಿಜೆಪಿ ಮೋದಿಯವರ ದುಬಾರಿ ಸೂಟಿನ ಬಗ್ಗೆಯೂ ಮಾತನಾಡಲಿ; ದಿನೇಶ್ ಗುಂಡೂರಾವ್ 

10/09/2022, 16:55

ಬೆಂಗಳೂರು(reporterkarnataka.com):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದುಬಾರಿ ಟಿ- ಶರ್ಟ್ ಬಗ್ಗೆ ವ್ಯಂಗ್ಯವಾಡುವ ಬಿಜೆಪಿ , ಮೋದಿಯವರ ದುಬಾರಿ ಸೂಟಿನ ಬಗ್ಗೆಯೂ ವ್ಯಂಗ್ಯವಾಡಲಿ. ಸ್ವಯಂಘೋಷಿತ ಫಕೀರ ಮೋದಿಯವರು ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸುತ್ತಾರೆ. ಅದು  ಬಿಜೆಪಿ ಯವರ ಕಣ್ಣಿಗೆ ಕಾಣುವುದಿಲ್ಲವೆ..? ‘ ಎಂದು ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಈ ಕುರತು ಟ್ವೀಟ್ ಮಾಡಿರುವ ಅವರು,‘ಬಿಜೆಪಿ ಯವರಿಗೆ ರಾಹುಲ್ ಗಾಂಧಿಯವರ ಉಡುಗೆ ತೊಡುಗೆ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ.?’ ಎಂದು ಕಿಡಿಕಾರಿದ್ದಾರೆ.

‘ಫಕೀರ ಎಂದರೆ ಸಂತನ ಪ್ರತಿರೂಪ. ಫಕೀರ ಎಂದು ಕರೆಸಿಕೊಳ್ಳುವವರು ಆಡಂಬರ-ಐಷಾರಾಮಿ ಬದುಕು ಸಾಗಿಸಬಾರದು. ಬಿಜೆಪಿ ಯವರು ಮೊದಲು ಸ್ವಯಂಘೋಷಿತ ಫಕೀರ ಮೋದಿಯವರಿಗೆ ದುಬಾರಿ ಜೀವನ ತ್ಯಜಿಸಲು ಹೇಳಲಿ. ನಂತರ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಿ. ಬಿಜೆಪಿ ಯವರ ತಟ್ಟೆಯಲ್ಲೇ ಹೆಗ್ಗಣ ಬಿದ್ದು ಕೊಳೆತು ನಾರುತ್ತಿದೆ. ಹೀಗಿರುವಾಗ ಇನ್ನೊಬ್ಬರ ತಟ್ಟೆಯ ಚಿಂತೆ ಯಾಕೆ.? ಎಂದು ದಿನೇಶ್ ಗುಂಡೂರಾವ್ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು