7:39 PM Saturday9 - August 2025
ಬ್ರೇಕಿಂಗ್ ನ್ಯೂಸ್
Bangalore | ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ವಂದೇ ಭಾರತ್ ಎಕ್ಸ್ ಪ್ರೆಸ್… ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:…

ಇತ್ತೀಚಿನ ಸುದ್ದಿ

ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ ಪಾತ್ರವೇ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

08/08/2025, 19:14

ಬೆಂಗಳೂರು(reporterkarnataka.com): ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಇದನ್ನು ಅಧಿಕಾರಿಗಳೇ ತಯಾರು ಮಾಡುತ್ತಾರೆ. ಆದ್ದರಿಂದ ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಬಾಂಬ್‌ ಹಾಕಿಲ್ಲ. ಅದು ಠುಸ್‌ ಪಟಾಕಿಯಾಗಿದೆ. ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ಗೆ ಬಿಎಲ್‌ಎಗಳನ್ನು (ಬೂತ್‌ ಲೆವೆಲ್‌ ಏಜೆಂಟ್‌) ಕಾಂಗ್ರೆಸ್‌ ನೀಡಿದೆ. ಮತದಾರರ ಪಟ್ಟಿಯ ಮೊದಲ ಪ್ರತಿಯನ್ನು ಬಿಎಲ್‌ಎಗೆ ನೀಡಲಾಗುತ್ತದೆ. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್‌ಎ ಮಾಡುತ್ತಾರೆ. ಇಂತಹ ಬಿಎಲ್‌ಎಗಳನ್ನು ನೇಮಿಸಿದ ಕಾಂಗ್ರೆಸ್‌ ಏನು ತಪ್ಪು ಮಾಡಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಡಿ.ಕೆ.ಶಿವಕುಮಾರ್‌ ಅವರ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೇ ಇಲ್ಲ. ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ಬೋಗಸ್‌ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಎಚ್‌ಬಿಆರ್‌ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು? ಸೋತ ಕೂಡಲೇ ಚುನಾವಣಾ ಆಯೋಗ ಸರಿ ಇಲ್ಲ ಎನ್ನುತ್ತಾರೆ ಎಂದರು.
2023ರ ವಿಧಾನಸಭಾ ಚುನಾವಣೆ ಬಳಿಕ, 2024ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಒಂದೇ ವರ್ಷದಲ್ಲಿ ಕೆಲವು ಹೊಸ ಮತದಾರರು ಬಂದಿದ್ದಾರೆ. ಪದ್ಮನಾಭನಗರದಲ್ಲಿ 57,000 ಮತ ನನಗೆ ಬಂದಿದೆ. ಇನ್ನೂ 20,000 ಬರಬೇಕಿತ್ತು. ಆದರೆ ಬೇರೆ ಕಡೆಯಿಂದ ಮುಸ್ಲಿಮರನ್ನು ತಂದು ಇಲ್ಲಿಗೆ ಸೇರಿಸಿದ್ದಾರೆ. ಕಂದಾಯ ಇಲಾಖೆ ಎಲ್ಲ ಚುನಾವಣೆ ನಡೆಸುತ್ತದೆ. ಎಲ್ಲರೂ ಕಾಂಗ್ರೆಸ್‌ ಸರ್ಕಾರದವರೇ ಆಗಿರುವಾಗ ಅಕ್ರಮವಾಗಲು ಹೇಗೆ ಸಾಧ್ಯ? ಈ ಹಿಂದೆ ಕಾಂಗ್ರೆಸ್‌ ಎಲ್ಲ ಕಡೆ ಅಧಿಕಾರದಲ್ಲಿದ್ದಾಗ ಕಳ್ಳ ಮತದಾನ ಸಾಮಾನ್ಯವಾಗಿತ್ತು. ಮತ ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಪೂಲನ್‌ ದೇವಿಯಂತಹ ಡಕಾಯಿತರ ಆಡಳಿತವೇ ಎಲ್ಲ ಕಡೆ ನಡೆಯುತ್ತಿತ್ತು. ಅಂತಹ ಚುನಾವಣೆ ರಾಹುಲ್‌ ಗಾಂಧಿಗೆ ಈಗ ಬೇಕಿದೆ ಎಂದರು.
ಇಂದಿರಾ ಗಾಂಧಿ ಚುನಾವಣಾ ಅಕ್ರಮ ಮಾಡಿ ಗೆದ್ದು ಅನರ್ಹರಾಗಿದ್ದರು. ಅದೇ ರೀತಿ ನರೇಂದ್ರ ಮೋದಿಗೆ ಆಗಿಲ್ಲ. ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ. ಚುನಾವಣೆಯಲ್ಲಿ ಅಕ್ರಮ ಮಾಡಿಯೇ ಎಲ್ಲರೂ ಗೆದ್ದಿದ್ದಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು