ಇತ್ತೀಚಿನ ಸುದ್ದಿ
ಪುತ್ತೂರು: ಒಳಿತು ಮಾಡು ಮನುಷ್ಯ ತಂಡದ 19ನೇ ಕಾರ್ಯಕ್ರಮ; 56 ಸಾವಿರ ಮೊತ್ತದ ಆಹಾರ ಕಿಟ್ ವಿತರಣೆ
30/12/2022, 21:04
ಪುತ್ತೂರು(reporterkarnataka.com): ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಕ್ಷಮ ಪುತ್ತೂರು ಘಟಕದ ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 19ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮ ಶುಕ್ರವಾರ ಪುತ್ತೂರಿನ ” ಅನುರಾಗ ವಠಾರ”ದಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶರತ್ ಕುಮಾರ್ ಮಾತನಾಡಿ,
ಸೇವೆ ಎಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯಬೇಕು ಎಂದು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಜನರು ಸೇವೆ ಮಾಡುವ ಮೂಲಕ ಒಳಿತು ಮಾಡು ಮಾನುಷ ಸಹಾಯ ಸೇವಾ ನಿಧಿ ಟ್ರಸ್ಟ್ ಇದೆ ಕಾರ್ಯವನ್ನು ಮಾಡುತ್ತಿದೆ. ಯಾವುದೇ ಸಂಘಟನೆಗಳ ಸಹಯೋಗ ಇಲ್ಲದೆ,ಸೇವೆ ಮಾಡುತ್ತಿದೆ.ಇನಷ್ಟು ಉತ್ತಮ ಕಾರ್ಯಗಳನ್ನು ಮಾಡುವಂತ ಗಲಿ ಎಂದು ಶುಭ ಹಾರೈಸಿದರು
ಇನೋರ್ವ ಮುಖ್ಯ ಅತಿಥಿ ನಗರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಮಾತನಾಡಿ, ಬಲಗೈಯಲ್ಲಿ ಕೊಟ್ಟದ್ದು ಎಡಕೈಗೆ ಗೊತ್ತಾಗಬಾರದು ಎಂದು ಹೇಳುತ್ತಾರೆ. ಪ್ರಚಾರವಿಲ್ಲದೆ ಮಾಡುವ ಕಾರ್ಯಕ್ರಮಗಳಿಂದ ಸಮಾಜ ಕಲ್ಯಾಣ ಆಗಲು ಪೂರಕ. ಇಂತಹ ಕಾರ್ಯಕ್ರಮ ದೇವರು ಮೆಚ್ಚುವ ಕಾರ್ಯ ಎಂದರು.











ಕಾರ್ಯಕ್ರಮದಲ್ಲಿ 56,000 ಸಾವಿರ ಮೊತ್ತದ 56 ಆಹಾರ ಕಿಟ್ ವಿತರಣೆ ಮಾಡಲಾಯಿತು ಹಾಗೂ 60 ಜನರಿಗೆ ಬಿಪಿ, ಸುಗರ್ ತಪಾಸಣೆ ಮಾಡಲಾಯ್ತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಗಳದ ಕಲಾವಿದ ಕೃಷ್ಣಪ್ಪ ಶಿವಾನಗರ, ಚೇತನ್ ಕುಮಾರ್ ಪುತ್ತೂರು, ಶೋಭಾ ಮಡಿವಾಳ ಹಾಗೂ ಯೋಜನಾಧಿಕಾರಿ ಸೌಜನ್ಯ ಆರ್ಲಪದವು ಹಾಜರಿದ್ದರು.
ಪ್ರಾರ್ಥನೆಯನ್ನು ಮಾಲಿನಿ, ಹರ್ಷಿತಾ, ಮಮತಾ, ಸ್ವಾಗತವನ್ನು ಶೀಲಾ, ಧನ್ಯವಾದವನ್ನು ಶೃತಿಕಾ ಹಾಗೂ ಶುಭಾ ಕಾರ್ಯಕ್ರಮ ನಿರೂಪಿಸಿದರು.














