2:39 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಪುತ್ತೂರು ‘ಕೈ’ ಜಗಳ ಮತ್ತೆ ಬೀದಿಗೆ: ಇಲ್ಲಿ ಕಾಂಗ್ರೆಸಿಗೆ ಕಾಂಗ್ರೆಸೇ ಶತ್ರು!!

19/11/2022, 20:38

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಪುತ್ತೂರು ಕಾಂಗ್ರೆಸ್ ಜಗಳ ಮತ್ತೆ ಬೀದಿಗೆ ಬಂದಿದೆ. ಒಂದು ರೀತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸೇ ಶತ್ರು. ಇಲ್ಲಿನ ಗುಂಪುಗಾರಿಕೆ, ಒಳಜಗಳ ಪಕ್ಷವನ್ನು ವಿನಾಶದತ್ತ ನೂಕಿದೆ. ವಿಧಾನಸಭೆ ಚುನಾವಣೆ ಹತ್ತಿರ ಬಂದರೆ ಸಾಕು ಟಿಕೆಟ್ ಗಾಗಿ ಗುದ್ದಾಟ, ಕಾಲೆಳೆಯುವುದು ಶುರುವಾಗುತ್ತದೆ. ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟಿಕೆಟ್ ಕದನ ಈಗಾಗಲೇ ಆರಂಭವಾಗಿದೆ.

ಪುತ್ತೂರು ಕ್ಷೇತ್ರ ವಾಸ್ತವದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಇಲ್ಲಿನ ಕಾಂಗ್ರೆಸ್ ಒಳಗಿನ ಒಳಜಗಳ, ಗುಂಪುಗಾರಿಕೆ, ಮುಸ್ಲಿಂಲೀಗ್ ಸ್ಪರ್ಧೆ ಯಿಂದ ಇಲ್ಲಿ ಬಿಜೆಪಿಯ ಕೆ. ರಾಮ ಭಟ್ ಅವರು ಎರಡು ಬಾರಿ ಗೆದ್ದು ಬಂದಿದ್ದರು. ನಂತರ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಪುತ್ತೂರು ಕ್ಷೇತ್ರದಿಂದ ವಿಧಾನಸಭೆಗೆ ಎಂಟ್ರಿ ಕೊಟ್ಟರು.

2008ರ ಚುನಾವಣೆಯಲ್ಲಿ ಬಿಜೆಪಿಯ ಕೆ. ರಾಮ ಭಟ್ ಅವರ ಸ್ವಾಭಿಮಾನಿ ಚಳವಳಿ ಮೂಲಕ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಅವರು ಬಿಜೆಪಿಯ ಮಲ್ಲಿಕಾ ಪ್ರಸಾದ್ ಎದುರು ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ನಂತರ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆದರೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ ಸೋಲು ಅನುಭವಿಸಿ ಬಿಜೆಪಿಯ ಸಂಜೀವ ಮಠಂದೂರು ಗೆಲುವು ಸಾಧಿಸಿದರು. ಇದೀಗ ಮುಂದಿನ ವರ್ಷ ಅಂದರೆ ಬರೇ 6 ತಿಂಗಳ ಅಂತರದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮತ್ತೆ ರಾಜಕೀಯ ರಂಗ ರಂಗೇರಿದೆ. ಟಿಕೆಟ್ ಗಾಗಿ ಕಾದಾಟ, ಗುದ್ದಾಟ ಪ್ರಾರಂಭವಾಗಿದೆ. ಹಲವು ವರ್ಷಗಳಿಂದ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಕಾವು ಹೇಮನಾಥ ಶೆಟ್ಟಿ ಅವರು ಮತ್ತೆ ಹಕ್ಕೊತ್ತಾಯ ಮಂಡಿಸಿದ್ದಾರೆ. ಇದಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಖಡಕ್ ಉತ್ತರ ನೀಡುವ ಮೂಲಕ ಸುದ್ದಿ ಮಾಡಿದ್ದಾರೆ. ಒಟ್ಟಿನಲ್ಲಿ ಟಿಕೆಟ್ ಗುದ್ದಾಟ ಬೀದಿಗೆ ಬಂದಿದೆ.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನಡುವಿನ ಶೀತಲ ಸಮರವೇ ಏರ್ಪಟ್ಟಿದೆ ಎಂದು ಪುತ್ತೂರು ಕಾಂಗ್ರೆಸಿಗರು ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಹೇಮನಾಥ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು, ಅಭ್ಯರ್ಥಿತನದ ಸೀಟು ಬಿಟ್ಟು ಕೊಡ್ಲಿಕ್ಕೆ ಅದೇನು ಬಸ್ಸಿನ ಸೀಟಾ..? ಎಂದು ವ್ಯಂಗ್ಯವಾಡಿದ್ದಾರೆ. ಇಟ್ಟುಕೊಳ್ಳುವ ತಾಕತ್ತಿದ್ರೆ ತಾನೇ ಬಿಟ್ಟುಕೊಡುವ ಪ್ರಶ್ನೆ ಬರೋದು. ಹೇಮನಾಥ ಶೆಟ್ಟಿ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.

‘ ಆವತ್ತು ನಾನು ಕಾಂಗ್ರೆಸ್‌ಗೆ ಆಗ ತಾನೇ ಪಾದಾರ್ಪಣೆ ಮಾಡಿದ್ದೆ. ಬಂದವಳು ನಾನು ನನಗೇ ಸೀಟು ಕೇಳಿಲ್ಲ. ಇನ್ನು ಆ ಸೀಟನ್ನು ಬಿಟ್ಟು ಕೊಡೇನೆ ಅಂತ ಹೇಳಲು ಹೇಗೆ ಸಾಧ್ಯ. ಹೈಕಮಾಂಡ್ ತೀರ್ಮಾನಿಸಿ ಕೊಡುವ ಅಭ್ಯರ್ಥಿತನದ ಸೀಟನ್ನು ಹೇಗೆ ಬಿಟ್ಟು ಕೊಡಲು ಸಾದ್ಯವಾಗುತ್ತದೆ ಎಂದು ಶಕುಂತಳಾ ಶೆಟ್ಟಿ ಪ್ರಶ್ನಿಸುತ್ತಾರೆ.
ನಾನು ಈ ಬಾರಿ ಹೇಮನಾಥ ಶೆಟ್ಟಿ ಅವರಿಗೆ ಅಭ್ಯರ್ಥಿತನ ಬಿಟ್ಟುಕೊಡುವುದಾಗಿ ಪ್ರಮಾಣ ಮಾಡಿಯೇ ಇಲ್ಲ. ಮರ್ಯಾದಸ್ಥರು ಮಾಡುವ ಕೆಲಸವೂ ಅದು ಅಲ್ಲ.

ಹೀಗೆ ಪ್ರಮಾಣ ಮಾಡುವ ಪ್ರಮೇಯವೂ ಬರುವುದಿಲ್ಲ. ಹೈಕಮಾಂಡ್ ಮೂಲಕ ಆಯ್ಕೆಯಾದ ವ್ಯಕ್ತಿ ಇನ್ನೊಬ್ಬರಿಗೆ ಪಕ್ಷದ ಟಿಕೆಟ್ ಕೊಡುವಂತೆ ಸೂಚಿಸಲು ಸಾಧ್ಯವೂ ಇಲ್ಲ ಎಂದು ಶಕುಂತಳಾ ಶೆಟ್ಟಿ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಪ್ರಮಾಣ ಮಾಡುವ ಮೊದಲು ಕಾವು ಹೇಮನಾಥ ಶೆಟ್ಟಿ ಪ್ರಮಾಣ ಮಾಡಿ ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೋಹ ಮಾಡಿಲ್ಲ. ವಿರೋಧ ಪಕ್ಷದವರ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಬೇಕು. ಗೊತ್ತಿದ್ದು ನಾವು ಯಾರನ್ನೂ ಸಣ್ಣವರನ್ನಾಗಿ ಮಾಡುವುದಿಲ್ಲ. ಜನರ ಸೇವೆ ಮಾಡಿದ್ರೆ, ಜನ ನಮ್ಮನ್ನು ನಂಬುವಂತಿದೆ ಅಭ್ಯರ್ಥಿ ಸ್ಥಾನ ಹುಡುಕಿಕೊಂಡು ಬರುತ್ತದೆ. ನನಗೇ ನಾನು ಸೀಟು ಕೇಳದೆ ಇದ್ದರೆ ಬೇರೆಯವರಿಗೆ ಬಿಟ್ಟು ಕೊಡ್ತೀನೆ ಅಂತ ಹೇಳಿಕ್ಕೆ ಆಗಲ್ಲ.

ಪ್ರಮಾಣ ಮಾಡಿದ್ದೇನೆ ಎನ್ನುವ ವಿಚಾರ ಸಂಪೂರ್ಣ ಸುಳ್ಳು
ವಿರೋಧ ಪಕ್ಷದವರ ಸೂಚನೆಯಂತೆ ನಡೆಯುವ ಮೊದಲು ಪಕ್ಷಕ್ಕೆ ನಿಷ್ಠರಾಗಬೇಕು. ಆ ಬಳಿಕ ಅಭ್ಯರ್ಥಿತನದ ಬಗ್ಗೆ ಯೋಚಿಸಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ. ಒಟ್ಟಿನಲ್ಲಿ ಹಲವು ದಶಕಗಳಿಂದ ಇಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಒಳಜಗಳ, ಗುಂಪುಗಾರಿಕೆ ಸದ್ಯ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿ ಕಾಂಗ್ರೆಸನ್ನು ಸೋಲಿಸಲು ಬಿಜೆಪಿ ಬೇಕಾಗಿಲ್ಲ, ಕಾಂಗ್ರೆಸಿಗರೇ ಸಾಕು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು