5:13 PM Monday31 - March 2025
ಬ್ರೇಕಿಂಗ್ ನ್ಯೂಸ್
PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ…

ಇತ್ತೀಚಿನ ಸುದ್ದಿ

ಪುತ್ತೂರು ಸಂತ ಫಿಲೋಮಿನಾ ಕಾಲೇಜು: ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿ ದ್ವಿತೀಯ ಆಂತರಿಕ ಆನ್‌ಲೈನ್‌ ಪರೀಕ್ಷೆ

28/03/2025, 20:15

ಪುತ್ತೂರು(reporterkarnataka.com): ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆಯನ್ನು ಪಡೆದ ಬಳಿಕ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದ್ವಿತೀಯ ಆಂತರಿಕ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಯಿತು.

ಪರೀಕ್ಷಾ ಪ್ರಕ್ರಿಯೆಯ ಗೌಪ್ಯತೆ ಹಾಗೂ ಸಮಗ್ರತೆಗಳನ್ನು ಕಾಪಾಡಿಕೊಳ್ಳಲು ಆನ್‌ಲೈನ್‌ ಪರೀಕ್ಷೆಗಳಿಗೆ ಕಾಲೇಜು ಬಳಸುವ ಸಾಫ್ಟ್‌ವೇರ್ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವುದೇ ಇತರ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದನ್ನು ಅಥವಾ ಯಾವುದೇ ರೀತಿಯ ಅವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಸುರಕ್ಷಿತ ಪರೀಕ್ಷಾ ವಾತಾವರಣವನ್ನು ಖಾತ್ರಿಗೊಳಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಕಂಪ್ಯೂಟರ್‌ನ ವೆಬ್‌ ಕ್ಯಾಮರಾವನ್ನು ಚಾಲ್ತಿಯಲ್ಲಿರಿಬೇಕಾಗಿದ್ದು ಚಲನವಲನಗಳು ಮತ್ತು ಸಂವಹನಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಪರೀಕ್ಷೆಯ ಉತ್ತರಗಳನ್ನು ಸಲ್ಲಿಸಿದ ತಕ್ಷಣವೇ ಮೌಲ್ಯಮಾಪನವನ್ನು ಮಾಡಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಪ್ರಕಟಿಸಲಾಯಿತು.
“ಸ್ವಾಯತ್ತತೆಯನ್ನು ಪಡೆದ ಬಳಿಕ ಕಾಲೇಜನಲ್ಲಿ ಹಲವು ನೂತನ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕಾಲೇಜು ಈಗಾಗಲೇ ಬೋಧನೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಕಾಲೇಜು ಆಧುನಿಕ ಶೈಲಿಯ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳುತ್ತಿದೆ. ಇದು ಕಾಲೇಜಿನ ನಾವೀನ್ಯತೆಯನ್ನು ಪೋಷಿಸುವ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ. ಇಂದು ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರೀಕ್ಷೆಗಳನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಸ್ವಾಯತ್ತ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ದ್ವಿತೀಯ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳನ್ನು ಆನ್‌ಲೈನ್‌ ಮುಖಾಂತರ ನಡೆಸಲಾಗುವುದು. ಈ ಉಪಕ್ರಮವು ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಗೆ ಹಿಡಿದ ಕೈಕನ್ನಡಿಯಾಗಿ ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕ ಮೌಲ್ಯಮಾಪನ ಪದ್ಧತಿಗಳ ಕಡೆಗೆ ನಮ್ಮ ಸುಗಮ ಪರಿವರ್ತನೆಯನ್ನು ಖಾತರಿಪಡಿಸುತ್ತದೆ. ನೈಜ-ಸಮಯದ ಮೌಲ್ಯಮಾಪನ ಮತ್ತು ತಕ್ಷಣದ ಫಲಿತಾಂಶ ಪ್ರಕಟಣೆಯನ್ನು ಬಳಸಿಕೊಳ್ಳುವ ಮೂಲಕ ನಾವು ಕಲಿಕಾನುಭವವನ್ನು ಹೆಚ್ಚಿಸಿದ್ದೇವೆ ಎಂದು ಹೇಳಲು ಸಂತಸವೆನಿಸುತ್ತಿದೆ. ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ ಅವರ ಕ್ರಿಯಾಶೀಲತೆ, ಶೈಕ್ಷಣಿಕ ಶ್ರೇಷ್ಠತೆಯ ದೃಷ್ಟಿಕೋನ ಮತ್ತು ಬದ್ಧತೆಯು ಈ ಉಪಕ್ರಮವನ್ನು ಮುಂದಕ್ಕೆ ಕೊಂಡೊಯ್ದಿದೆ. ಆನ್‌ಲೈನ್ ಪರೀಕ್ಷಾ ಪ್ರಕ್ರಿಯೆಯ ಸುಗಮ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಿಖರವಾದ ಯೋಜನೆ ಮತ್ತು ಸಮರ್ಪಿತ ಪ್ರಯತ್ನಗಳಿಗಾಗಿ ಪರೀಕ್ಷಾಂಗ ಉಪ ಕುಲಸಚಿವರಾದ ಜಾನ್ಸನ್ ಡೆವಿಡ್ ಸಿಕ್ವೇರಾ ಹಾಗೂ ಅಭಿಷೇಕ್ ಸುವರ್ಣ ಅವರಿಗೆ ಅಭಿನಂದನೆಗಳು. ಇವರುಗಳ ಸಂಘಟಿತ ಪ್ರಯತ್ನವು ನಮ್ಮ ಮೌಲ್ಯಮಾಪನ ವಿಧಾನಗಳಲ್ಲಿ ನಾವೀನ್ಯತೆಗಳಿಗೆ ಭದ್ರವಾದ ಅಡಿಪಾಯವನ್ನು ಹಾಕಿದೆ. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತಹ ಹಲವಾರು ಯೋಜನೆಗಳನ್ನು ಅಳವಡಿಸಿಕೊಳ್ಳಲಾಗುವುದು. ನಾವು ಕೈಗೊಂಡ ಎಲ್ಲಾ ಕಾರ್ಯಗಳಿಗೂ ಮಾರ್ಗದರ್ಶನ ನೀಡುತ್ತಿರುವ ಸಂಚಾಲಕರು ಹಾಗೂ ಆಡಳಿತ ಮಂಡಳಿಯವರಿಗೆ ಕೃತಜ್ಞತೆಗಳು ಎಂದು ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು