ಇತ್ತೀಚಿನ ಸುದ್ದಿ
ಪುತ್ತೂರು ನಿವಾಸಿಗೆ 2.37 ಲಕ್ಷ ರೂ. ಆನ್ ಲೈನ್ ವಂಚನೆ: ಕೃಷ್ಣರಾಜ ಪೇಟೆಯ ಆರೋಪಿ ಬಂಧನ
12/02/2026, 21:26
ಪುತ್ತೂರು(reporterkarnataka.com): ಆನ್ ಲೈನ್ ವಂಚನೆ ಪ್ರಕರಣ ಸಂಬಂಧಿಸಿದಂತೆ ಮಂಡ್ಯ ಕೃಷ್ಣರಾಜ ಪೇಟೆಯ ನಿವಾಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಯಶೋಧರ ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ ವಿವಿಧ ಮೊಬೈಲ್ ನಂಬರ್ ಗಳಿಂದ ದೂರವಾಣಿ ಕರೆ ಮಾಡಿ, ತಾನು Insurance ಕಂಪೆನಿಯೊಂದರಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, Insurance ಮಾಡಿಸಿಕೊಡುವುದಾಗಿ ಹಾಗೂ ಆ ಬಗ್ಗೆ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಈ ಬಗ್ಗೆ
ಪಿರ್ಯಾದಿದಾರರು ಯಶೋಧರ ನಿರಾಕರಿಸಿರುತ್ತಾರೆ. ಆ ಬಳಿಕ ಆರೊಪಿಯು ಇನ್ಸುರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿ, ಯಶೋಧರ ಅವರ Credit Card ನಂಬರ್ ಹಾಗೂ OTP ಪಡೆದು,ಯಶೋಧರರ Credit Card ನಿಂದ 2,37,036/- ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುತ್ತಾನೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2025, U/S: 66(D) IT ACT & 318(4), 319(2) BNS ರಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ ಮೂಲದ ಹಾಗೂ ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸಿಸುತ್ತಿರುವ ಆರೋಪಿ ಅವಿನಾಶ್ ರಮೇಶ್ ಗೌಡ (24) ಎಂಬಾತನನ್ನು ಫೆ. 11ರಂದು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.













