ಇತ್ತೀಚಿನ ಸುದ್ದಿ
ಪುತ್ತೂರು: ಪಿಕಪ್ ಜೀಪು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು: ಮತ್ತೋರ್ವ ಗಂಭೀರ
12/02/2026, 11:35
ಪುತ್ತೂರು(reporterkarnataka.com): ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪಿಕಪ್ ಜೀಪು ನಿಯಂತ್ರಣ ಕಳದುಕೊಂಡು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊರ್ವ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲ್ಲೂಕಿನ ಅಳಕೆಯಲ್ಲಿ ನಡೆದಿದೆ.
ಸ್ವತ ಅಳಕೆ ನಿವಾಸಿಯಾಗಿರುವ ಹರೀಶ್ಚಂದ್ರ ಅವರ ಪುತ್ರ ಹೇಮಚಂದ್ರ (31) ಮೃತ ಚಾಲಕನಾಗಿದ್ದು ಉಮ್ಮರಬ್ಬ ಎಂಬುವರು ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













