11:09 AM Thursday17 - April 2025
ಬ್ರೇಕಿಂಗ್ ನ್ಯೂಸ್
ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ…

ಇತ್ತೀಚಿನ ಸುದ್ದಿ

ಪುತ್ತೂರು ಜಾತ್ರೆ: ಮುಳಿಯ ಜ್ಯುವೆಲ್ಲರ್ಸ್ ಕ್ಯಾಲೆಂಡರ್‌ನಲ್ಲಿ ಶ್ರೀ ಮಹಾಲಿಂಗೇಶ್ವರ ಪೇಟೆ ಸವಾರಿ ಮಾರ್ಗ!

08/04/2025, 19:43

ಪುತ್ತೂರು(reporterkarnataka.com):ಜಾತ್ರೆಯ ಅಂಗವಾಗಿ ನಡೆಯುವ ಪೇಟೆ ಸವಾರಿಯು ಭಕ್ತರು ಮತ್ತು ಸಾರ್ವಜನಿಕರನ್ನು ಒಂದುಗೂಡಿಸುವ ವಿಶಿಷ್ಟ ಆಚರಣೆ. ಈ ಬಾರಿಯ ಜಾತ್ರೋತ್ಸವದ ಪೇಟೆ ಸವಾರಿಯ ರೂಟ್ ಮ್ಯಾಪ್ ಅನ್ನು ಒಳಗೊಂಡ ವಿಶೇಷ ಕ್ಯಾಲೆಂಡರ್ ಅನ್ನು ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯು ಬಿಡುಗಡೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಈ ಭಾಗದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅನನ್ಯ ಸಂಗಮ. ಜಾತ್ರೆಯ ಅಂಗವಾಗಿ ನಡೆಯುವ ಪೇಟೆ ಸವಾರಿಯು ಭಕ್ತರು ಮತ್ತು ಸಾರ್ವಜನಿಕರನ್ನು ಒಂದುಗೂಡಿಸುವ ವಿಶಿಷ್ಟ ಆಚರಣೆ. ಈ ಬಾರಿಯ ಜಾತ್ರೋತ್ಸವದ ಪೇಟೆ ಸವಾರಿಯ ರೂಟ್ ಮ್ಯಾಪ್ ಅನ್ನು ಒಳಗೊಂಡ ವಿಶೇಷ ಕ್ಯಾಲೆಂಡ‌ರ್ ಅನ್ನು ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಲರ್ಸ್‌ ಸಂಸ್ಥೆಯು ಬಿಡುಗಡೆ ಮಾಡಿದೆ.

ಮುಳಿಯ ಜ್ಯುವೆಲ್ಲರ್ಸ್, ಪುತ್ತೂರಿನಲ್ಲಿ ಹಲವು ದಶಕಗಳಿಂದ ವಿಶ್ವಾಸಾರ್ಹ ಸೇವೆ ನೀಡುತ್ತಾ ಬಂದಿರುವ ಸಂಸ್ಥೆ. ಕೇವಲ ಆಭರಣ ವ್ಯಾಪಾರದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದೆ. ಅದರ ಮುಂದುವರಿಕೆಯಾಗಿ, ಈ ವರ್ಷದ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪೇಟೆ ಸವಾರಿಯ ನಿಖರವಾದ ಮಾರ್ಗವನ್ನು ತಿಳಿಸುವ ಕ್ಯಾಲೆಂಡರ್ ಅನ್ನು ಹೊರತರುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ.
ಏ 10 ರಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಂಡು ಏ 18ರ ವರೆಗೆ ಪುತ್ತೂರು ನಗರದ ವಿವಿಧ ಮಾರ್ಗಗಳಲ್ಲಿ ಹಾದು ಹೋಗುತ್ತದೆ. ಪ್ರತಿದಿನ ಪ್ರತ್ಯೇಕ ರಸ್ತೆಗಳಲ್ಲಿ ದೇವರ ಪೇಟೆ ಸವಾರಿ ಸಾಗಲಿದ್ದು ಈ ವೇಳೆ ನಿಗದಿತ ದೇವರ ಕಟ್ಟೆಗಳಲ್ಲಿ ದೇವರಯ ಕಟ್ಟೆ ಪೂಜೆ ಸ್ವೀಕರಿಸಲಿದ್ದಾರೆ.
ಈ ಕ್ಯಾಲೆಂಡರ್‌ನಲ್ಲಿ ಪೇಟೆ ಸವಾರಿಯು ಯಾವ ದಿನಾಂಕದಂದು ಯಾವ ಮಾರ್ಗದಲ್ಲಿ ನಡೆಯಲಿದೆ ಎನ್ನುವುದನ್ನು, ಅದು ಪ್ರಾರಂಭವಾಗುವ ಸ್ಥಳ, ಹಾದುಹೋಗುವ ಮುಖ್ಯ ರಸ್ತೆಗಳು ಮತ್ತು ತಲುಪುವ ಅಂತಿಮ ಸ್ಥಳದ ಸ್ಪಷ್ಟವಾದ ಮಾಹಿತಿಯನ್ನು ನೀಡಲಾಗಿದೆ. ಮಾರ್ಗವನ್ನು ಕೆಂಪು ಬಣದಲ್ಲಿ ದಪ್ಪಾಕ್ಷರದಲ್ಲಿ ಬರೆಯಿಸಲಾಗಿದ್ದು, ಸುಲಭದಲ್ಲಿ ಕಣ್ಣಿಗೆ ಗೋಚರಿಸುವಂತೆ ಪ್ರಕಟಿಸಲಾಗಿದೆ.
ಇದರ ಜೊತೆಗೆ ಜಾತ್ರೋತ್ಸವದ ಇತರ ಪ್ರಮುಖ ವಿವರಗಳನ್ನು ಸಹ ನಮೂದಿಸಲಾಗಿದೆ. ಗೊನೆ ಮುಹೂರ್ತ, ಧ್ವಜಾರೋಹಣ, ರಥೋತ್ಸವ, ಧ್ವಜಾವರೋಹಣ ಇತ್ಯಾದಿ ಮಾಹಿತಿಗಳು ಅದರಲ್ಲಿದೆ. ಈ ರೂಟ್ ಮ್ಯಾಪ್ ಭಕ್ತರಿಗೆ ಸವಾರಿಯ ಮಾರ್ಗವನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಪೇಟೆ ಸವಾರಿಯ ಸಂದರ್ಭದಲ್ಲಿ ಸಂಭವಿಸಬಹುದಾದ ಟ್ರಾಫಿಕ್ ಬದಲಾವಣೆಗಳ ಬಗ್ಗೆಯೂ ಇದು ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡುತ್ತದೆ.
ಮುಳಿಯ ಜ್ಯುವೆಲ್ಲರ್ಸ್ ಈ ಉಪಕ್ರಮಕ್ಕೆ ಪುತ್ತೂರಿನ ನಾಗರಿಕರು ಮತ್ತು ಭಕ್ತ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾತ್ರೋತ್ಸವದಂತಹ ಮಹತ್ವದ ಸಂದರ್ಭದಲ್ಲಿ ಉಪಯುಕ್ತ ಮಾಹಿತಿಯನ್ನು ಒದಗಿಸುವ ಮೂಲಕ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯು ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಯಾಲೆಂಡರ್ ಕೇವಲ ಮಾಹಿತಿಯ ಕಣಜವಾಗಿರದೆ. ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಒಂದು ಮಾರ್ಗದರ್ಶಕವಾಗಿಯೂ ಕಾರ್ಯನಿರ್ವಹಿಸಲಿದೆ.
ಒಟ್ಟಾರೆಯಾಗಿ, ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪೇಟೆ ಸವಾರಿಯ ರೂಟ್ ಮ್ಯಾಪ್ ಅನ್ನು ಒಳಗೊಂಡ ಮುಳಿಯ ಜ್ಯುವೆಲ್ಲರ್ಸ್‌ ಕ್ಯಾಲೆಂಡ‌ರ್ ಬಿಡುಗಡೆಯು ಒಂದು ಸ್ವಾಗತಾರ್ಹ ಮತ್ತು ಉಪಯುಕ್ತ ಕಾರ್ಯಕ್ರಮವಾಗಿದೆ. ಈ ಪ್ರಯತ್ನವು ಜಾತ್ರೆಯ ಯಶಸ್ಸಿಗೆ ಮತ್ತು ಭಕ್ತರ ಅನುಕೂಲಕ್ಕೆ ಸಹಕಾರಿಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

(((((ಕೋಟ್ )))
ಪುತ್ತೂರು ನಗರದ ನಿವಾಸಿಗಳಿಗೆ ದೇವರ ಪೇಟೆ ಸವಾರಿಯು ಯಾವ ಮಾರ್ಗದಲ್ಲಿ ಸಾಗುತ್ತದೆ ಎಂಬುದು ತಿಳಿದಿದ್ದರೊ, ಪುತ್ತೂರಿನ ಹೊರಗಿನ ಭಕ್ತರು ಮತ್ತು ಗ್ರಾಹಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವುದು ಕಡಿಮೆ. ಜಾತ್ರೆಯ ಸಮಯದಲ್ಲಿ ಪುತ್ತೂರಿಗೆ ಬರುವ ಅವರು ದೇವರ ಪೇಟೆ ಸವಾರಿ ಮತ್ತು ಕಟ್ಟೆಪೂಜೆಯಲ್ಲಿ ಭಾಗವಹಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ಹಾಗೂ ಯಾವ ದಿನಾಂಕದಂದು ಬಂದರೆ ಉತ್ತಮ ಎನ್ನುವುದನ್ನು ಮುಂಚಿತವಾಗಿ ನಿರ್ಧರಿಸಿಕೊಳ್ಳಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಈ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಲಾಗಿದೆ. ನಾನು ದೇವಸ್ಥಾನದ ವ್ಯವಸ್ಥಾಪನಾ ಮೆಂಡಳಿಯ ಅಧ್ಯಕ್ಷನಾಗಿದ್ದಾಗ, ಇಂತಹದೊಂದು ಕ್ಯಾಲೆಂಡ‌ರ್ ಇದ್ದರೆ ದೂರದ ಊರುಗಳಲ್ಲಿರುವ ಮಹಾಲಿಂಗೇಶ್ವರನ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಅನಿಸಿತು. ಅದಕ್ಕಾಗಿಯೇ ಈ ಪ್ರಯತ್ನವನ್ನು ಮಾಡಿದ್ದೇವೆ. ಗ್ರಾಹಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

– ಕೇಶವ ಪ್ರಸಾದ್‌ ಮುಳಿಯ, ಮುಳಿಯ ಜ್ಯುವೆಲ್ಸ್ ಸಿಎಂಡಿ

ಇತ್ತೀಚಿನ ಸುದ್ದಿ

ಜಾಹೀರಾತು