2:44 AM Friday3 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

Puttur | ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯಲ್ಲಿ ಲಲಿತಾ ಸಹಸ್ರನಾಮ ಪಠಣ; ಕುಂಕುಮಾರ್ಚನೆ

07/05/2025, 20:49

ಪುತ್ತೂರು(reporterkarnataka.com): ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ತನ್ನ ನವೀಕೃತ, ನೂತನ ಹಾಗೂ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಏಪ್ರಿಲ್ 20ರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅದರ ಭಾಗವಾಗಿ ಮೇ 6ರಂದು ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆಯ ಪುಣ್ಯ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ಊರಿನ ಗೌರವಾನ್ವಿತ ವೇದಮೂರ್ತಿ ಉದಯ ಭಟ್ ಅವರ ವೇದಪಾರಂಗತ ಸಾನ್ನಿಧ್ಯ ಈ ದೈವಿಕ ಆಚರಣೆಗೆ ಆಧ್ಯಾತ್ಮಿಕ ಉತ್ತೇಜನ ನೀಡಿದಂತಾಯಿತು. ಸತತವಾಗಿ 3 ವರ್ಷಗಳಿಂದ ಮಾತಾ ಭಗಿನಿಯರಿಗೆ ಲಲಿತಾ ಸಹಸ್ರನಾಮ ಹೇಳಿಕೊಟ್ಟ ನೆಲೆಯಲ್ಲಿ ವೇದಮೂರ್ತಿ ಉದಯ್ ಭಟ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳನ್ನು ನುಡಿದರು. ಈ ಪಾವನ ಕಾರ್ಯಕ್ರಮದ ವಿಶೇಷತೆ ಎಂಬಂತೆ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ‘ಕುಂಕುಮ ಮಹತಿ ’ ಎಂಬ ಶ್ರೇಷ್ಠ ಕಿರುಹೊತ್ತಗೆಯನ್ನು ಕಿರು ಉಡುಗೊರೆಯಾಗಿ ನೀಡಿದರು. ನವ ವಿನ್ಯಾಸದ ಸ್ವರ್ಣ ಲೇಪಿತ ಬೆಳ್ಳಿಯ ಕುಂಕುಮ ಕರಡಿಗೆಯನ್ನು ಹಿರಿಯ ಮಹಿಳೆಯರಿಂದ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಅತ್ಯಂತ ಶ್ರದ್ಧಾಭಕ್ತಿಯಿಂದ ನಿರ್ವಹಿಸಿದರು.
ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರವನ್ನು ನೀಡಿದರು.

ಲಲಿತಾ ಸಹಸ್ರನಾಮ ಪಠಣ ಮತ್ತು ಕುಂಕುಮಾರ್ಚನೆಯಂತಹ ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ ನೀಡುವಂತಹ ಅತ್ಯುನ್ನತ ಪೂಜಾ ವಿಧಾನಗಳು. ಪ್ರತಿಯೊಂದು ನಾಮದಲ್ಲಿ ದೇವಿಯ ಆಧ್ಯಾತ್ಮಿಕ ಶಕ್ತಿ ಅಡಗಿದ್ದು, ಪ್ರತಿಯೊಂದು ಚಿಟಿಕೆ ಕುಂಕುಮದ ಅರ್ಪಣೆಯಲ್ಲಿಯೂ ಭಕ್ತಿಯ ಪರಾಕಾಷ್ಠೆ ಕಾಣಬಹುದು.
ಈ ಸಂದರ್ಭದಲ್ಲಿ ಭಾಗವಹಿಸಿದ ಶ್ರೀ ದೇವಿಯ ಆರಾಧಕರೆಲ್ಲರೂ ಆಧ್ಯಾತ್ಮಿಕ ಶಕ್ತಿ ಮತ್ತು ಸಂತೋಷದಿಂದ ಕೂಡಿದ ಅನುಭವವನ್ನು ಹೊತ್ತು ಮರಳಿದರು.ಮುಂದಿನ ದಿನಗಳಲ್ಲಿಯೂ ಇಂತಹ ಭಕ್ತಿಪೂರ್ಣ ಹಾಗೂ ಸಾಮಾಜಿಕ ಉದ್ದೇಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಂಸ್ಥೆಯ ಆಶಯವಾಗಿದೆ.
ಶ್ರೀಮಾತೆಯ ದಿವ್ಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ. ಜಗನ್ಮಾತೆ ಕುಂಕುಮಶೋಭಿತೆ ಶ್ರೀಲಲಿತೆ ಎಲ್ಲರ ಕೈಹಿಡಿದು ನಡೆಸಲಿ. ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ.

ಇತ್ತೀಚಿನ ಸುದ್ದಿ

ಜಾಹೀರಾತು