ಇತ್ತೀಚಿನ ಸುದ್ದಿ
ಪುಟ್ಟ ಬಾಲೆ ಮಾನ್ವಿಗೆ ನಿಮ್ಮೆಲ್ಲರ ಸಹಾಯ ಬೇಕಾಗಿದೆ: ಬನ್ನಿ ಕೈಜೋಡಿಸಿ
16/04/2022, 23:43

ಮಂಗಳೂರು(reporterkarnataka.com): 6 ವರ್ಷದ ಪುಟ್ಟ ಕಂದ ಮಾನ್ವಿ ಕಾಮತ್ ಅಪರೂಪದ ಅನುವಂಶಿಕ ಅಸ್ವಸ್ಥತೆ ಕಾಯಿಲೆಯಿಂದ ಬಳಲುತ್ತಿದ್ದು, ಮಗುವಿನ ಅಮೂಲ್ಯ ಜೀವ ಉಳಿಸುವ ಜವಾಬ್ದಾರಿ ಸಹೃದಯಿಗಳಾದ ನಮ್ಮೆಲ್ಲರ ಕೈಯಲ್ಲಿದೆ.
ಇದೇ ಭಾನುವಾರ ಏಪ್ರಿಲ್ 17 ರಂದು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಮಂಗಳೂರಿನ ಭಾರತ್ ಮಾಲ್ ಮತ್ತು ಸಂಜೆ 4 ರಿಂದ 6 ಗಂಟೆಯವರೆಗೆ ಕದ್ರಿ ಪಾರ್ಕ್ ನಲ್ಲಿ ತಾವು, ಕುಟುಂಬದವರು, ಸ್ನೇಹಿತರು ಆಗಮಿಸಿ ಸ್ಟೇಮ್ ಸೆಲ್ ( Stem Cell) ನೋಂದಾವಣೆ ಮಾಡಿದರೆ ನಿಮ್ಮ ಸ್ಟೇಮ್ ಸೆಲ್ ಆ ಮಗುವಿಗೆ ಹೊಂದಾಣಿಕೆ ಆದರೆ ನಿಮ್ಮಿಂದ ಒಂದು ಜೀವ ಉಳಿಯಬಹುದು.
ಬೇರೆಯವರ ಜೀವ ಉಳಿಸುವ ಅವಕಾಶ ಭಗವಂತ ಎಲ್ಲರಿಗೂ ಕೊಡುವುದಿಲ್ಲ. ಆ ಭಾಗ್ಯ ನಿಮಗೆ ಸಿಕ್ಕಿರಬಹುದು.
#HELPMAANVIKAMATH